ADVERTISEMENT

ಹಾಸನ: ಅಕ್ಷರ ಜಾತ್ರೆಗೆ ಸಿಂಗಾರಗೊಂಡ ಬೂವನಹಳ್ಳಿ

ಹಾಸನ ಜಿಲ್ಲಾ 20ನೇ ಕನ್ನಡ ಸಾಹಿತ್ಯ ಸಮ್ಮೇಳನ ಇಂದಿನಿಂದ

​ಪ್ರಜಾವಾಣಿ ವಾರ್ತೆ
Published 29 ಮಾರ್ಚ್ 2022, 19:30 IST
Last Updated 29 ಮಾರ್ಚ್ 2022, 19:30 IST
ಬೂವನಹಳ್ಳಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯ ಕಾಂಪೌಂಡ್‌ ಮೇಲೆ ಗಣೇಶ ಚಿತ್ರ ಬರೆದ ಕಲಾವಿದ
ಬೂವನಹಳ್ಳಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯ ಕಾಂಪೌಂಡ್‌ ಮೇಲೆ ಗಣೇಶ ಚಿತ್ರ ಬರೆದ ಕಲಾವಿದ   

ಹಾಸನ: ನಗರದ ಹೊರವಲಯದಲ್ಲಿರುವ ಬೂವನಹಳ್ಳಿ ಎರಡು ದಿನಗಳ ಅಕ್ಷರ ಜಾತ್ರೆಗೆ ಆತಿಥ್ಯ ನೀಡುವ ಮೂಲಕ ಕನ್ನಡದ ಕಂಪುಪಸರಿಸಲು ಸಜ್ಜಾಗಿದೆ.

ಎರಡು ವರ್ಷಗಳಿಂದ ಸಾಂಸ್ಕೃತಿಕ ಕ್ಷೇತ್ರದ ಮೇಲೆ ಕವಿದಿದ್ದ ಕೋವಿಡ್‌ ಕರಿನೆರಳುಸರಿದಿದ್ದು, ಜಾನಪದ ವಿದ್ವಾಂಸ ಹಂಪನಹಳ್ಳಿ ತಿಮ್ಮೇಗೌಡಸಮ್ಮೇಳನಾಧ್ಯಕ್ಷತೆಯಲ್ಲಿ 20ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಬುಧವಾರದಿಂದ ಎರಡು ದಿನ ನಡೆಯಲಿದೆ.

ಸಮ್ಮೇಳನವನ್ನು ಯಶಸ್ವಿಗೊಳಿಸಲು ಟೊಂಕ ಕಟ್ಟಿ ನಿಂತಿರುವಬೂವನಹಳ್ಳಿಯಲ್ಲಿ ಸಡಗರ–ಸಂಭ್ರಮ. ಗ್ರಾಮದ ಸರ್ಕಾರಿ ಹಿರಿಯಪ್ರಾಥಮಿಕ ಶಾಲೆ ಆವರಣದಲ್ಲಿ ಭವ್ಯ ವೇದಿಕೆ ನಿರ್ಮಿಸಲಾಗಿದ್ದು, ಗ್ರಾಮದತುಂಬೆಲ್ಲಾ ಮಾವಿನ ತಳಿರು, ತೋರಣಗಳಿಂದ ಸಿಂಗರಿಸಲಾಗಿದೆ. ಕನ್ನಡಾಭಿಮಾನಿಗಳು, ಸಾಹಿತ್ಯಾಸಕ್ತರುಸೇರಿದಂತೆ ಎಲ್ಲರನ್ನೂ ಸ್ವಾಗತಿಸಲು ಅಣಿಯಾಗಿದೆ.

ADVERTISEMENT

ಎಲ್ಲೆಡೆ ಕನ್ನಡ ಧ್ವಜಗಳು ರಾರಾಜಿಸುತ್ತಿವೆ. ಗ್ರಾಮದ ರಸ್ತೆಯುದ್ದಕ್ಕೂರಾರಾಜಿಸುತ್ತಿರುವ ಫ್ಲೆಕ್ಸ್‌ಗಳು ಕನ್ನಡ ಪ್ರೇಮಿಗಳನ್ನು ಸ್ವಾಗತಿಸುತ್ತಿವೆ. ಕಮಾನುಗಳನ್ನು ಡೇರಿ ವೃತ್ತದಿಂದ ಸಮ್ಮೇಳನ ವೇದಿಕೆವರೆಗೂ ಹಾಕಲಾಗಿದೆ.
ಸಮ್ಮೇಳನಾಧ್ಯಕ್ಷರ ಮೆರವಣಿಗೆ ಸಾಗುವ ದಾರಿ ಉದ್ದಕ್ಕೂ ಕನ್ನಡ ಬಾವುಟಕಂಗೊಳಿಸುತ್ತಿವೆ.

ಬೂವನಹಳ್ಳಿ ಗ್ರಾಮ ಹಾಗೂ ಜಿಲ್ಲೆಗೆ ಸಾಹಿತ್ಯ, ಸಾಂಸ್ಕೃತಿಕ, ಸಾಮಾಜಿಕಮತ್ತು ರಾಜಕೀಯವಾಗಿ ತಮ್ಮದೇ ಕೊಡುಗೆ ನೀಡಿರುವ ದಿ. ಬಿ.ಬೊಮ್ಮೇಗೌಡ,ಬಿ.ಕಪ್ಪಣ್ಣಗೌಡ, ಡಿ.ಆರ್‌.ಕರೀಗೌಡ ಮತ್ತು ಡಿ.ಆರ್‌. ಚನ್ನೇಗೌಡ ಮಹಾದ್ವಾರನಿರ್ಮಿಸಲಾಗಿದೆ.

ಎರಡು ದಿನಗಳ ಕನ್ನಡ ಸಾಹಿತ್ಯ ಚಿಂತನ– ಮಂಥನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಿಗಾಗಿ 30x40 ಅಳತೆಯ ನಾಡೋಜ ಡಾ.ಚನ್ನವೀರಕಣವಿ ಪ್ರಧಾನ ವೇದಿಕೆ ಸಜ್ಜುಗೊಂಡಿದೆ. 3 ಸಾವಿರ ಆಸನ ವ್ಯವಸ್ಥೆ ಮಾಡಲಾಗಿದೆ. ಶಾಲೆಯ ಕಾಂಪೌಂಡ್‌ ತುಂಬ ಭುವನೇಶ್ವರಿ, ಕನ್ನಡಸಾಧಕರ ಭಾವಚಿತ್ರ ತುಂಬಿಕೊಂಡು ಕನ್ನಡಮಯವಾಗಿದೆ.

ಸ್ಥಳೀಯ ಕಲಾವಿದರಾದ ಯಾಕೂಬ್‌ ಮತ್ತು ಕೃಷ್ಣಾಚಾರಿ ಗೋಡೆಗೆ ಹೊಸರಂಗು ನೀಡಿದ್ದಾರೆ. ಸ್ಥಳೀಯ ಯುವಕರ ತಂಡ ಸ್ವಚ್ಛತೆಗೆ ಒತ್ತು ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.