
ಬಾಗೂರು (ನುಗ್ಗೇಹಳ್ಳಿ): ‘ಮಣ್ಣಿನ ಫಲವತ್ತತೆ ಕಾಪಾಡಲು ಸಾವಯವ ಕೃಷಿ ಪದ್ಧತಿ ಅನುಸರಿಸಬೇಕು’ ಎಂದು ಶಾಸಕ ಸಿ.ಎನ್. ಬಾಲಕೃಷ್ಣ ತಿಳಿಸಿದರು.
ಹೋಬಳಿಯ ಓಬಳಾಪುರದಲ್ಲಿ ವಿಶ್ವ ಮಣ್ಣು ಆರೋಗ್ಯ ದಿನಾಚರಣೆ ಹಾಗೂ ರಾಗಿ ಬೆಳೆ ಕ್ಷೇತ್ರೋತ್ಸವ, ರೈತರಿಗೆ ಕೃಷಿ ಪರಿಕರಗಳ ವಿತರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
‘ಅನ್ನ ಬೆಳೆಯುವ ಭೂಮಿ ದೇವರಿದ್ದಂತೆ. ರಾಸಾಯನಿಕ ಗೊಬ್ಬರ ಹಾಗೂ ಪ್ಲಾಸ್ಟಿಕ್ ಬಳಕೆಯಿಂದ ಮಣ್ಣಿನ ಫಲವತತೆ ಹಾಳಾಗುತ್ತಿದೆ. ಮನುಷ್ಯನ ಆರೋಗ್ಯ ಎಷ್ಟು ಮುಖ್ಯವೋ ಭೂಮಿಯ ಆರೋಗ್ಯವೂ ಮುಖ್ಯ. ಭೂಮಿಯ ಸಂರಕ್ಷಣೆಗೆ ಪ್ರತಿಯೊಬ್ಬರು ಮುಂದಾಗಬೇಕು’ ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ತಾಲ್ಲೂಕು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಮೋಹನ್, ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ರಕ್ಷಿತ್, ಮುಖಂಡರಾದ ಬಿ.ಎಚ್. ಶಿವಣ್ಣ, ಎನ್.ಬಸವರಾಜ್, ಗ್ರಾಮ ಪಂಚಾಯಿತಿ ಅಧ್ಯಕ್ಷ ಶಂಕರ್, ಮಾಜಿ ಅಧ್ಯಕ್ಷ ಮಹಾಲಿಂಗೇಗೌಡ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಜಿ.ಜಯರಾಮ್, ಉಪಾಧ್ಯಕ್ಷ ಪ್ರತೀಪ್, ತಮ್ಮಯಣ್ಣ, ಮಾಜಿ ಅಧ್ಯಕ್ಷರಾದ ಟಿ.ಎಂ. ಗಿರೀಶ್, ಟಿ.ವಿ. ಬಸವರಾಜ್, ಹೇಮರಾಜ್, ನಾಗೇಶ್, ಚಂದ್ರಶೇಖರ್, ತಿಮ್ಮೇಗೌಡ ಹಾಜರಿದ್ದರು.
ಕನಕ ಜಯಂತಿ ಆಚರಣೆ
ಬಾಣಾವರ: ‘ತನ್ನ ಕೀರ್ತನೆಗಳಿಂದಲೇ ಸಮಾಜದಲ್ಲಿರುವ ಅಸಮಾನತೆಯನ್ನು ಹೋಗಲಾಡಿಸಲು ಶ್ರಮಿಸಿದ ಭಕ್ತ ಶ್ರೇಷ್ಠ ಕನಕದಾಸರ ಚಿಂತನೆ ಎಂದೆಂದಿಗೂ ಪ್ರಸ್ತುತ ’ಎಂದು ಕೆ.ಆರ್.ನಗರ ಶಾಖಾಮಠದ ಶಿವಾನಂದಪುರಿ ಸ್ವಾಮೀಜಿ ತಿಳಿಸಿದರು.
ಹೋಬಳಿಯ ಜಯರಾಂಪುರದ ಬೀರಲಿಂಗೇಶ್ವರ ಸಮುದಾಯ ಭವನದ ಆವರಣದಲ್ಲಿ ಶುಕ್ರವಾರ ನಡೆದ ಕನಕದಾಸ ಜಯಂತಿಯಲ್ಲಿ ಆಶೀರ್ವಚನ ನೀಡಿದ ಅವರು, ‘ರಾಮಧ್ಯಾನ ಚರಿತೆ ಒಂದೇ ಸಾಕು ಎಲ್ಲ ಕಾಲಮಾನಕ್ಕೂ ಕನ್ನಡಿ ಹಿಡಿಯಲು ಅದು ಸಣ್ಣ ಸಣ್ಣ ಬಿಂಬಗಳಂತೆ ಪ್ರಖರ ವೈಚಾರಿಕ ಚಿಂತನೆಯನ್ನು ಕನಕದಾಸರು ತಮ್ಮ ಕೀರ್ತನೆ ಹಾಗೂ ಕೃತಿಗಳ ಒಡಲಲ್ಲಿ ಸಾರಿದ್ದಾರೆ. ಮನಸ್ಸಿನ ಪರಿಶುದ್ಧತೆಗಾಗಿ ದಾರ್ಶನಿಕರು ಹಾಕಿಕೊಟ್ಟ ಮಾರ್ಗದಲ್ಲಿ ಪ್ರತಿಯೊಬ್ಬರು ಸಾಗಬೇಕು’ ಎಂದರು.
ಶಾಸಕ ಕೆ.ಎಂ.ಶಿವಲಿಂಗೇಗೌಡ ಮಾತನಾಡಿ, ‘ಸಮಾಜದಲ್ಲಿ ಮೇಲು ಕೀಳು ಎಂದು ಅವಮಾನಿಸುತ್ತಿದ್ದ ವ್ಯವಸ್ಥೆಯನ್ನು ಕನಕದಾಸರು ತಮ್ಮ ಕೀರ್ತನೆಗಳ ಮೂಲಕ ಸಾಮಾಜಿಕ ಬದಲಾವಣೆ ತರಲು ಶ್ರಮಿಸಿದ ಮಹಾನ್ ವ್ಯಕ್ತಿ’ ಎಂದರು.
ಕಡೂರು ಶಾಸಕ ಕೆ.ಎಸ್.ಆನಂದ್, ಕುರಿ ಉಣ್ಣೆ ನಿಗಮ ಮಂಡಳಿ ಅಧ್ಯಕ್ಷ ಬಿಳಿಚೌಡಯ್ಯ, ಕುರುಬರ ತಾಲ್ಲೂಕು ಸಂಘದ ಅಧ್ಯಕ್ಷ ಟಿ.ಆರ್.ಕೃಷ್ಣಮೂರ್ತಿ, ಮಾಜಿ ಎಪಿಎಂಸಿ ಅಧ್ಯಕ್ಷ ಬಿ.ಸಿ.ಶ್ರೀನಿವಾಸ್, ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ಬಿ.ಎಸ್.ಅಶೋಕ್, ಮುಖಂಡರಾದ ಗಿರಿಯಪ್ಪ, ಕ್ಷೇತ್ರ ಶಿಕ್ಷಣಾಧಿಕಾರಿ ಮೋಹನ್ ಕುಮಾರ್, ಮಂಜಪ್ಪ, ಬಂಡಿಗೌಡರ ರಾಜಣ್ಣ, ಅಜ್ಜಪ್ಪ, ಟಿ.ಜಿ.ಚಂದ್ರಪ್ಪ, ರಮೇಶ್, ಕೆ.ಬಿ.ಮಂಜಪ್ಪ, ಶ್ರೀ ಬೀರಲಿಂಗೇಶ್ವರ ಸ್ವಾಮಿ ಸೇವಾ ಟ್ರಸ್ಟ್ ಅಧ್ಯಕ್ಷ ಕೆಂಚೇಗೌಡರು, ಕಾರ್ಯದರ್ಶಿ ಜಯರಾಂ, ದಾನಪ್ಪ, ರೇವಣ್ಣ, ಶಂಕರ್, ರಂಗನಾಥ್, ಮಲ್ಲೇಶ್, ಸಿದ್ದಪ್ಪ, ಈಶ್ವರಪ್ಪ, ಲೋಕೇಶ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.