ADVERTISEMENT

ಬರದ ನಾಡಲ್ಲಿ ಪ್ರವಾಸಿಗರನ್ನು ಆಕರ್ಷಿಸುತ್ತಿರುವ ಚಂದದ ಸಸ್ಯೋದ್ಯಾನ

​ಪ್ರಜಾವಾಣಿ ವಾರ್ತೆ
Published 22 ಜೂನ್ 2018, 16:50 IST
Last Updated 22 ಜೂನ್ 2018, 16:50 IST
ಅರಸೀಕೆರೆ ತಾಲ್ಲುಕು ಜಾಜೂರು ಬಳಿ ರಾಷ್ಟ್ರೀ ಹೆದ್ದಾರಿ 206 ಟಿ.ಎಚ್‌. ರಸ್ತೆ ಬದಿ ಸಾಲು ಮರದ ತಿಮ್ಮಕ್ಕ ಹೆಸರಿನಲ್ಲಿ ನಿರ್ಮಾನಗೊಂಡಿರುವ ಚಂದದ ಉದ್ಯಾನವನದ ಸ್ವಾಗತ ಕಮಾನು.
ಅರಸೀಕೆರೆ ತಾಲ್ಲುಕು ಜಾಜೂರು ಬಳಿ ರಾಷ್ಟ್ರೀ ಹೆದ್ದಾರಿ 206 ಟಿ.ಎಚ್‌. ರಸ್ತೆ ಬದಿ ಸಾಲು ಮರದ ತಿಮ್ಮಕ್ಕ ಹೆಸರಿನಲ್ಲಿ ನಿರ್ಮಾನಗೊಂಡಿರುವ ಚಂದದ ಉದ್ಯಾನವನದ ಸ್ವಾಗತ ಕಮಾನು.   

ಅರಸೀಕೆರೆ:ವರುಣನ ಅವಕೃಪೆಗೆ ಒಳಗಾಗಿ ಬರದ ನಾಡು ಎಂದೆೇ ಹಣೆ ಪಟ್ಟಿ ಹೊಂದಿರುವ ತಾಲ್ಲೂಕಿನ ಕಸಬಾ ಹೋಬಳಿ ಜಾಜೂರು ಬಳಿ ರಾಷ್ಟ್ರೀಯ ಹೆದ್ದಾರಿ 206 ಟಿ.ಎಚ್‌ ರಸ್ತೆ ಬದಿಯಿರುವ ಅರಣ್ಯ ಪ್ರದೇಶದಲ್ಲಿ ಸಾಲು ಮರದ ತಿಮ್ಮಕ್ಕೆ ಹೆಸರಿನಲ್ಲಿ ಸುಂದರ ಚಂದದ ಉದ್ಯಾನ ವನವೊಂದು ತಲೆ ಎತ್ತಿದ್ದು ಪರಿಸರ ಪ್ರಯರು ಹಾಗೂ ಪ್ರವಾಸಿಗರನ್ನುತನ್ನತ್ತ ಕೈಬೀಸಿ ಕರೆಯುತ್ತಿದೆ.


ಸಾಲು ಮರದ ತಿಮ್ಮಕ್ಕ ಹೆಸರಿನಲ್ಲಿ ಸುಮಾರು ₨ 40 ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿರುವ ಉದ್ಯಾನವನ ಈಗಾಗಲೇ ಪೂರ್ಣ ಹಂತ ತಲುಪಿ ಉದ್ಘಾಟನೆಗೆ ಸಿದ್ದಗೊಂಡಿದೆ ಜನರ ಆಕರ್ಷಣೆಯ ಕೇಂದ್ರ ಬಿಂದುವಾಗಿದೆ.ಅಲ್ಲದೆ ರಸ್ತೆ ಬದಿ ನಿರ್ಮಿಸಲಾಗಿರುವ ತಿಮ್ಮಕ್ಕನ ಭಾವಚಿತ್ರ ವಿರುವ ಸ್ವಾಗತ ಕಮಾನು. ಈ ಮಾರ್ಗದಲ್ಲಿ ಸಂಚರಿಸುವ ಜನರು ಹಾಗೂ ಪರಿಸರ ಪ್ರೇಮಿಗಳನ್ನು ಸೂಜಿಗಲ್ಲಿನಂತೆ ತನ್ನತ್ತ ಸೆಳೆಯುತ್ತಿದೆ.


ಅರಣ್ಯ ಪ್ರದೇಶದ ಸುಮಾರು 17 ಎಕರೆ ಜಮೀನಿನಲ್ಲಿ ನಿರ್ಮಾಣವಾಗುತ್ತಿರುವ ಉದ್ಯಾನವನದಲ್ಲಿ ಈಗಾಗಲೇ ಬೆಳೆದು ನಿಂತಿರುವ ನೀಲಗಿರಿ ಮರಗಳ ಜತೆಗೆ ಹಲಸು, ಮಾವು, ಬೇವು, ಸೇರಿದಂತೆ ವಿವಿಧ ತಳಿಯ ಸಸಿಗಳನ್ನು ಬೆಳಸಲಾಗಿದೆ ಎಂದು ವಲಯ ಅರಣ್ಯಾಧಿಕಾರಿ ರಾಜಾನಾಯ್ಕ್‌ ಹೇಳುತ್ತಾರೆ.

ADVERTISEMENT


ಇನ್ನೂ ಈ ಉದ್ಯಾನವನದಲ್ಲಿ ಮಕ್ಕಳ ಮನಸ್ಸಿಗೆ ಮುದ ನೀಡಬಹುದಾದ ಆಟಿಕೆಗಳನ್ನು ಅಳವಡಿಸಿದ್ದು, ಸುಮಾರು 1.ಕಿ.ಮೀ ವಾಕಿಂಗ್‌ ಪಾಥ್‌, ಎರಡು ವೀಕ್ಷಣಾ ಗೋಪುರ ಸೇರಿದಂತೆ ಪ್ರವಾಸಿಗರು ಕುಳಿತು ವಿಹರಿಸಲು ಮರದಲ್ಲಿಯೇ ನಿರ್ಮಾಣ ಮಾಡಲಾಗಿದೆ. ಕುಡಿಯುವ ನೀರು ಶೌಚಗೃಹ, ಪ್ರವಾಸಿಗರಿಗೆ ಬೇಕಾದ ಆಗತ್ಯ ಮೂಲಸೌಕರ್ಯ ಒದಗಿಸಲು ಅರಣ್ಯ ಇಲಾಖೆ ಕ್ರಮಕೈಗೊಂಡಿದ್ದು, ಪ್ರವಾಸಿಗರನ್ನು ಮತ್ತ ಷ್ಟು ಪ್ರವಾಸಿಗರನ್ನು ಸೆಳೆಯುವ ನಿಟ್ಟಿನಲ್ಲಿ ಇದೇ ಸ್ಥಳದಲ್ಲಿ ಹೋಟೆಲ್‌ ಕಟ್ಟಡವೊಂದನ್ನು ನಿರ್ಮಿಸಿ ಕಾನೂನಿನ ಅಡಿಯಲ್ಲಿ ಹೊರಗುತ್ತಿಗೆ ನೀಡು

ವ ಉದ್ದೇಸದಿಂದ ಅನುಮತಿ ಕೋರಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ತಿಳಿಸಿದರು.
ಕಲಾಕೃತಿಗಳೆಲ್ಲವೂ ಮರದ ಮಾದರಿ: ಉದ್ಯಾನವನದಲ್ಲಿ ಸುಮಾರು 25 ಕಡೆ ಮರದ ರೀತಿಯಲ್ಲಿಯೇ ಬೆಂಚುಗಳನ್ನು ನಿರ್ಮಿಸಲಾಗಿದ್ದು ನೋಡುವುದಕ್ಕೆ ತುಂಬಾ ಅಂದವಾಗಿವೆ. ಇಲ್ಲಿ ಬಳಕೆಗೆ ಇರಿಸಲಾಗಿರುವ ಡಸ್ಟ್‌ ಬಿನ್‌ಗಳು ಅಸಲಿ ಮರದ ಕಾಂಡದಲ್ಲಿ ನಿರ್ಮಿಸಿರುವಂತೆ ಭಾಸವಾಗುತ್ತಿದ್ದು ಕಾಂಕ್ರಿಟ್‌ ಎಂದೆನಿಸುವುದಿಲ್ಲ.

ಮನಸೆಳಯುವ ಕಲಾವಿದನ ಕೈಚಳಕ: ಉದ್ಯಾನವನದಲ್ಲಿ ನಿರ್ಮಾಣ ಮಾಡಲಾಗಿರುವ ಎಲ್ಲ ಕಲಾಕೃತಿಗಳು ವಿಶೇಷ ಎನಿಸುವಷ್ಟರ ಮಟ್ಟಗಿ ದ್ದು, ವಸ್ತುವಿನ ನೈಜತೆ ಸನಿಹದಲ್ಲಿದೆ. ಸಿನಿಮಾಗಳಲ್ಲಿ ಸೆಟ್‌ ನಿರ್ಮಾಣ ಮಾಡುವ ಕಲಾವಿದರು ಇಲ್ಲಿನ ಕಲಾಕೃತಿಗಳನ್ನು ನಿರ್ಮಾನ ಮಾಡಿದ್ದು, ಸ್ವಾಗತ ಕಮಾನು ನಿರ್ಮಾಣಕ್ಕೆ ₨ 4ಲಕ್ಷ ವೆಚ್ಚವಾಗಿದೆ ಎಂದು ರಾಜಾನಾಯ್ಕ್‌ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.