ADVERTISEMENT

₹1 ಕೋಟಿ ವೆಚ್ಚದ ರಸ್ತೆ ಕಾಮಗಾರಿಗೆ ಶಾಸಕ ಶಿವಲಿಂಗೇಗೌಡ ಚಾಲನೆ

​ಪ್ರಜಾವಾಣಿ ವಾರ್ತೆ
Published 11 ಸೆಪ್ಟೆಂಬರ್ 2025, 5:56 IST
Last Updated 11 ಸೆಪ್ಟೆಂಬರ್ 2025, 5:56 IST
<div class="paragraphs"><p>ಅರಸೀಕೆರೆ ಬಾಣಾವರ ಹೋಬಳಿಯ ಚಿಕ್ಕೂರು ಗ್ರಾಮದಿಂದ ಹಿರಿಯೂರು ಗ್ರಾಮದವರಗೆ ₹1 ಕೋಟಿ ವೆಚ್ಚದಲ್ಲಿ ಸಿ.ಸಿ. ರಸ್ತೆ ನಿರ್ಮಾಣ ಕಾಮಗಾರಿಗೆ ಶಾಸಕ ಕೆ.ಎಂ.ಶಿವಲಿಂಗೇಗೌಡ ಚಾಲನೆ ನೀಡಿದರು.</p></div>

ಅರಸೀಕೆರೆ ಬಾಣಾವರ ಹೋಬಳಿಯ ಚಿಕ್ಕೂರು ಗ್ರಾಮದಿಂದ ಹಿರಿಯೂರು ಗ್ರಾಮದವರಗೆ ₹1 ಕೋಟಿ ವೆಚ್ಚದಲ್ಲಿ ಸಿ.ಸಿ. ರಸ್ತೆ ನಿರ್ಮಾಣ ಕಾಮಗಾರಿಗೆ ಶಾಸಕ ಕೆ.ಎಂ.ಶಿವಲಿಂಗೇಗೌಡ ಚಾಲನೆ ನೀಡಿದರು.

   

ಅರಸೀಕೆರೆ: ಬಾಣಾವರ ಹೋಬಳಿಯ ಚಿಕ್ಕೂರು ಗ್ರಾಮದಿಂದ ಹಿರಿಯೂರು ಗ್ರಾಮದವರೆಗೆ ₹1 ಕೋಟಿ ವೆಚ್ಚದಲ್ಲಿ ಸಿ.ಸಿ.ರಸ್ತೆ ನಿರ್ಮಾಣ ಕಾಮಗಾರಿಗೆ  ಶಾಸಕ ಕೆ.ಎಂ. ಶಿವಲಿಂಗೇಗೌಡ ಶುಕ್ರವಾರ ಚಾಲನೆ ನೀಡಿದರು.

ಚಿಕ್ಕೂರು ಗ್ರಾಮದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಶಿವಲಿಂಗೇಗೌಡ , ಕೆರೆ ಪಕ್ಕದಲ್ಲಿರುವುದರಿಂದ ಈ ರಸ್ತೆಯನ್ನು ಪದೇ ಪದೇ ಹಾಳಾಗುತ್ತಿದೆ.  ಸಿ.ಸಿ.ರಸ್ತೆ ನಿರ್ಮಾಣ ಮಾಡಲುಲೋಕೋಪಯೋಗಿ ಇಲಾಖೆಯಿಂದ ಅನುದಾನ ನೀಡಿದ್ದು, ಗುಣಮಟ್ಟದ ಕಾಮಗಾರಿಯನ್ನು ನಿರ್ವಹಿಸುವಂತೆ ಗುತ್ತಿಗೆದಾರರು, ಎಂಜಿನಿಯರುಗಳಿಗೆ ಸೂಚನೆ ನೀಡಿದರು.

ADVERTISEMENT

ಗ್ರಾಮೀಣ ಮಕ್ಕಳಿಗೆ ಉತ್ತಮ ಶಿಕ್ಷಣ ನೀಲು ವಸತಿ ಶಾಲೆಗಳನ್ನು ನಿರ್ಮಾಣ ಮಾಡಲಾಗಿದೆ.  ಹಲವು ಚೆಕ್‌ ಡ್ಯಾಮ್‌ಗಳನ್ನು ನಿರ್ಮಾಣ ಮಾಡಿದ್ದರಿಂದ ಅಂತರ್ಜಲ ಹೆಚ್ಚಾಗಿ, ಬೋರೆವೆಲ್‌ಗಳಲ್ಲಿ ನೀರು ಸಿಗುತ್ತಿದೆ ಎಂದರು.

ಗ್ಯಾರಂಟಿ ತಾಲ್ಲೂಕು ಸಮಿತಿ ಅಧ್ಯಕ್ಷ ಗೀಜಿಹಳ್ಳಿ ಧರ್ಮಶೇಖರ್ ಮಾತನಾಡಿ‌ ದರು. ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷೆ ಮಂಜುಳಾಬಾಯಿ ಬೆಂಡೆಕೆರೆ, ಗ್ರಾಮಪಂಚಾಯಿತಿ  ಅಧ್ಯಕ್ಷೆ ಗೀತಾಕುಮಾರಿ, ಮಾಜಿ  ಅಧ್ಯಕ್ಷ ಕುಬೇರ , ಸದಸ್ಯೆ ಭಾವನಾ, ಮುಖಂಡರಾದ ಪ್ರಭುದೇವ, ಶೇಖರ್, ಮಂಜಣ್ಣ, ಪರಮೇಶ್, ಗಂಗಾಧರ, ಗುರುಮೂರ್ತಿ, ರೇಣುಕಣ್ಣ, ಚಂದ್ರೇಗೌಡ, ಮಧು, ಎ.ಇ.ಇ. ಬಾಲಾಜಿ ,ಎಂ  ಜಿನಿಯರ್ ಅಶ್ವಿನಿ , ಗ್ರಾಮಸ್ಥರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.