ADVERTISEMENT

ಆಲೂರು: ಗಮನಸೆಳೆದ ಆರ್‌ಎಸ್ಎಸ್ ಪಥಸಂಚಲನ

​ಪ್ರಜಾವಾಣಿ ವಾರ್ತೆ
Published 20 ಅಕ್ಟೋಬರ್ 2025, 7:21 IST
Last Updated 20 ಅಕ್ಟೋಬರ್ 2025, 7:21 IST
ಆರ್.ಎಸ್.ಎಸ್. ಪಥ ಸಂಚಲನ ಪಟ್ಟಣದಲ್ಲಿ ಶಿಸ್ತುಬದ್ಧವಾಗಿ ಸಾಗಿತು.
ಆರ್.ಎಸ್.ಎಸ್. ಪಥ ಸಂಚಲನ ಪಟ್ಟಣದಲ್ಲಿ ಶಿಸ್ತುಬದ್ಧವಾಗಿ ಸಾಗಿತು.   

ಆಲೂರು: ರಾಷ್ಟ್ರೀಯ ಸ್ವಯಂ ಸೇವಕ ಸಂಘದ 100ನೇ ವರ್ಷದ ಸಂಭ್ರಮಾಚರಣೆ ಅಂಗವಾಗಿ ಪಟ್ಟಣದಲ್ಲಿ ಆಕರ್ಷಕ ಪಥಸಂಚಲನ ನಡೆಯಿತು.

ಗಣವೇಷಧಾರಿಗಳು ಶಿಸ್ತು ಬದ್ಧವಾಗಿ ಹೆಜ್ಜೆ ಹಾಕಿದರು. ಮೆರವಣಿಗೆ ನೋಡುಗರಿಗೆ ದೇಶಭಕ್ತಿ ಹುಟ್ಟಿಸುವಂತೆ ಸಾಗಿದರು. 2 ವರ್ಷದ ಬಾಲಕ ಸಮವಸ್ತ್ರ ಧರಿಸಿ ತಂದೆ ಹೆಗಲ ಮೇಲೆ ಕುಳಿತು ಗಣ ಸಾಗಿದ್ದು, ನೋಡುಗರ ಗಮನ ಸೆಳೆಯಿತು.

ವೀರಶೈವ ಕಲ್ಯಾಣ ಮಂಟಪದ ಬಳಿ ಸೇರಿದ್ದ ಗಣವೇಶಧಾರಿಗಳು ಧ್ವಜ ವಂದನೆ ಸಲ್ಲಿಸಿ ಸಾಮೂಹಿಕವಾಗಿ ನಮಸ್ತೆ ಸದಾವತ್ಸಲೆ ಮಾತೃಭೂಮಿ ಎಂಬ ಆರ್‌ಸ್ಎಸ್ ಗೀತೆಯನ್ನು ಭಕ್ತಿ ಪೂರ್ವಕವಾಗಿ ಹಾಡಿದರು.

ADVERTISEMENT

ಬಳಿಕ ಪಟ್ಟಣದ ಮುಖ್ಯ ಬೀದಿಯಲ್ಲಿ ಪಥ ಸಂಚಲನ ಸಾಗಿತು. ಆಶಾ ಬಡವಾಣೆ ಮೂಲಕ ಹಾದು ಬಿಕ್ಕೋಡು ರಸ್ತೆ ತಿರುವಿನಲ್ಲಿರುವ ಗಣೇಶ ಪೆಂಡಾಲ್ ಮೈದಾನಕ್ಕೆ ಬಂದು ಸೇರಿತು.

ಪಥ ಸಂಚಲನದಲ್ಲಿ ಸಾಗಿದ ಭಾರತ ಮಾತೆ, ಆರ್‌ಎಸ್ಎಸ್ ಸಂಸ್ಥಾಪಕ ಕೇಶವ ಬಲಿರಾಮ ಹೆಡಗೆವಾರ್ ಮತ್ತು ಗೋಲ್ವಾಲ್ಕರ್ ಗುರೂಜಿ ಭಾವಚಿತ್ರಕ್ಕೆ ಸಾರ್ವಜನಿಕರು ವಂದಿಸಿದರು.

ಶಾಸಕ ಸಿಮೆಂಟ್ ಮಂಜು ಗಣವೇಶಧರಿಸಿ ಪಥ ಸಂಚಲನದಲ್ಲಿ ಪಾಲ್ಗೊಂಡಿದ್ದರು. ಪೊಲೀಸ್ ಇನ್‌ಸ್ಪೆಪೆಕ್ಟರ್ ಮೋಹನ್‍ರೆಡ್ಡಿ ನೇತೃತ್ವದಲ್ಲಿ ಬಂದೂಬಸ್ತ್ ವ್ಯವಸ್ಥೆ ಕಲ್ಪಿಸಲಾಗಿತ್ತು. ಆರ್‌ಎಸ್ಎಸ್ ಜಿಲ್ಲಾ ಕಾರ್ಯದರ್ಶಿ ನವೀನ್, ಪ್ರಮುಖ ವಿಜಯ್ ಪಾಲ್ಗೊಂಡಿದ್ದರು.

ಆರ್.ಎಸ್.ಎಸ್. ಪಥ ಸಂಚಲನದಲ್ಲಿ 2 ವರ್ಷದ ಪುಟ್ಟ ಬಾಲಕ ಸೇವನ್ ಸಮವಸ್ತ್ರ ಧರಿಸಿ ಚಿಕ್ಕಪ್ಪನ ಹೆಗಲ ಮೇಲೆ ಗಣ ಹಿಡಿದು ಸಾಗಿದ್ದು ವಿಶೇಷವಾಗಿತ್ತು.

ಕಾಂಗ್ರೆಸ್‍ಗೆ ಆರ್‌ಎಸ್ಎಸ್ ಕಂಡರೆ ಭಯ

‘ಶತಮಾನದಿಂದ ದೇಶ ಬಲಪಡಿಸುವ ನಿಟ್ಟಿನಲ್ಲಿ ಸಾಗುತ್ತಿರುವ ಆರ್‌ಎಸ್ಎಸ್ ಈಗ ಮತ್ತಷ್ಟು ಬಲಶಾಲಿಯಾಗುತ್ತಿದೆ. ಈ ಬೆಳವಣಿಗೆಯನ್ನು ಕಾಂಗ್ರೆಸ್‌ಗೆ ಸಹಿಸಲು ಸಾಧ್ಯವಾಗುತ್ತಿಲ್ಲ. ಆರ್‌ಎಸ್ಎಸ್ ಕಂಡರೆ ಭಯ’ ಎಂದು ಶಾಸಕ ಸಿಮೆಂಟ್ ಮಂಜು ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು ‘ಕೇವಲ ಒಂದು ಸಮುದಾಯ ಓಲೈಸಲು ಕಾಂಗ್ರೆಸ್ ಆರ್‌ಎಸ್ಎಸ್ ಬ್ಯಾನ್‌ ಮಾಡಲು ಚಿಂತಿಸುತ್ತಿದೆ. ಆರ್‌ಎಸ್ಎಸ್ ಭಯೋತ್ಪಾದಕ ಸಂಘಟನೆಯಲ್ಲ. ಅದು ದೇಶಭಕ್ತಿಯ ಪ್ರತೀಕ ಇದನ್ನು ಅರ್ಥಮಾಡಿಕೊಳ್ಳದ ಸಚಿವ ಪ್ರಿಯಾಂಕ ಖರ್ಗೆ ಆರ್‌ಎಸ್ಎಸ್ ಕುರಿತು ಹಗುರವಾಗಿ ಮಾತನಾಡುತ್ತಿದ್ದಾರೆ. ಇದು ಒಳ್ಳೆಯ ಬೆಳವಣಿಗೆಯಲ್ಲ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.