ADVERTISEMENT

ಕ್ರೀಡಾಕೂಟ: ಕಿತ್ತೂರು ರಾಣಿ ಚೆನ್ನಮ್ಮ ಶಾಲೆಗೆ ಸಮಗ್ರ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 31 ಆಗಸ್ಟ್ 2024, 13:33 IST
Last Updated 31 ಆಗಸ್ಟ್ 2024, 13:33 IST
ಆಲೂರು ತಾಲ್ಲೂಕು ಕ್ರೀಡಾಂಗಣದಲ್ಲಿ ನಡೆದ ಕುಂದೂರು ವಲಯ ಮಟ್ಟದ ಕ್ರಿಡಾಕೂಟದಲ್ಲಿ ಪಾಳ್ಯ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆ ವಿದ್ಯಾರ್ಥಿನಿರು ಸಮಗ್ರ ಪ್ರಶಸ್ತಿ ಗಳಿಸಿ ನಗೆ ಬೀರಿದರು
ಆಲೂರು ತಾಲ್ಲೂಕು ಕ್ರೀಡಾಂಗಣದಲ್ಲಿ ನಡೆದ ಕುಂದೂರು ವಲಯ ಮಟ್ಟದ ಕ್ರಿಡಾಕೂಟದಲ್ಲಿ ಪಾಳ್ಯ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆ ವಿದ್ಯಾರ್ಥಿನಿರು ಸಮಗ್ರ ಪ್ರಶಸ್ತಿ ಗಳಿಸಿ ನಗೆ ಬೀರಿದರು   

ಆಲೂರು: ತಾಲ್ಲೂಕು ಕ್ರೀಡಾಂಗಣದಲ್ಲಿ ನಡೆದ ಕುಂದೂರು ವಲಯ ಮಟ್ಟದ ಕ್ರೀಡಾಕೂಟದಲ್ಲಿ ಪಾಳ್ಯ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆ ಬಾಲಕಿಯರು ಶನಿವಾರ ಸಮಗ್ರ ಪ್ರಶಸ್ತಿ ಗಳಿಸಿದರು.

ಇದೇ ಶಾಲೆಯ ವಿದ್ಯಾರ್ಥಿನಿ ಪಲ್ಲವಿ ವೈಯಕ್ತಿಕ ಪ್ರಶಸ್ತಿ ಪಡೆದುಕೊಂಡರು.

ಕಬಡ್ಡಿ, ಕೊಕ್ಕೊ, ವಾಲಿಬಾಲ್, ಬ್ಯಾಡ್ಮಿಂಟನ್ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗಳಿಸಿ ತಾಲ್ಲೂಕು ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ADVERTISEMENT

ಪ್ರಾಂಶುಪಾಲೆ ಶ್ವೇತಾ ಅವರು ತರಬೇತಿ ಶಿಕ್ಷಕರಾದ ಚಂದು, ಮಹೇಂದ್ರ, ಪ್ರದೀಪ್, ಕೀರ್ತಿ, ವೀರೇಶ್, ಸೌಮ್ಯಾ, ರಶ್ಮಿ, ಪೂರ್ಣಿಮಾ, ಲತಾ, ತುಂಗಾ ಮತ್ತು ವಿಜೇತರಿಗೆ ಅಭಿನಂದನೆ ಸಲ್ಲಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.