ಸಕಲೇಶಪುರ ತಾಲ್ಲೂಕಿನ ಬನವಾಸೆ ಗ್ರಾಮದಲ್ಲಿ ಮೃತಪಟ್ಟಿರುವ ಕಾಡಾನೆಯನ್ನು ಅರಣ್ಯ ಅಧಿಕಾರಿಗಳು ವೀಕ್ಷಿಸಿದರು.
ಸಕಲೇಶಪುರ: ತಾಲ್ಲೂಕಿನ ಬಾಳ್ಳುಪೇಟೆ ಸಮೀಪದ ಬನವಾಸೆ ಗ್ರಾಮದಲ್ಲಿ ಗುರುವಾರ ವಿದ್ಯುತ್ ತಂತಿ ತುಗುಲಿ ಭಾರೀ ಗಾತ್ರದ ಕಾಡಾನೆಯೊಂದು ಮೃತಪಟ್ಟಿದೆ.
ಸುಮಾರು 25 ವರ್ಷದ ಕಾಡಾನೆ ಇದಾಗಿದೆ. ತೀರ ಕೆಳಮಟ್ಟದಲ್ಲಿದ್ದ ಹೈಟೆನ್ಷನ್ ವಿದ್ಯುತ್ ತಂತಿಗೆ ಆನೆಯ ಸೊಂಡಿಲು ತಾಕಿ ಈ ಘಟನೆ ಸಂಭವಿಸಿದೆ ಎಂದು ಅರಣ್ಯ ಇಲಾಖೆ ಮೂಲಗಳು ತಿಳಿಸಿವೆ. ಸ್ಥಳಕ್ಕೆ ವಲಯ ಅರಣ್ಯ ಅಧಿಕಾರಿ ಹೇಮಂತ್ ಕುಮಾರ್ ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ವಿದ್ಯುತ್ ತಂತಿ ಭಾರಿ ಕೆಳಗೆ ಇದ್ದುದರಿಂದ ಅನ್ಯಾಯವಾಗಿ ಕಾಡಾನೆ ಸಾವನ್ನಪ್ಪಿದೆ. ಇದಕ್ಕೆ ಸೆಸ್ಕಾಂ ಎಂಜಿನಿಯರ್‌ಗಳ ನಿರ್ಲಕ್ಷ್ಯ ಕಾರಣ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.