ADVERTISEMENT

ಹಾವೇರಿ: ಒಂದೇ ದಿನ 45 ಮಂದಿಗೆ ಕೋವಿಡ್‌

ಜಿಲ್ಲೆಯಲ್ಲಿ 275ಕ್ಕೆ ಏರಿದ ಪ್ರಕರಣಗಳು: ಕಂದಾಯ ಇಲಾಖೆ ನೌಕರನಿಗೆ ಸೋಂಕು

​ಪ್ರಜಾವಾಣಿ ವಾರ್ತೆ
Published 10 ಜುಲೈ 2020, 15:25 IST
Last Updated 10 ಜುಲೈ 2020, 15:25 IST

ಹಾವೇರಿ: ಕಂದಾಯ ಇಲಾಖೆಯ ನೌಕರ ಹಾಗೂ ಆಶಾ ಕಾರ್ಯಕರ್ತೆ ಸೇರಿದಂತೆ ಶುಕ್ರವಾರ ಜಿಲ್ಲೆಯ 45 ಮಂದಿಗೆ ಕೋವಿಡ್ ಸೋಂಕು ದೃಢಪಟ್ಟಿದೆ ಎಂದು ಜಿಲ್ಲಾಧಿಕಾರಿ ಕೃಷ್ಣ ಬಾಜಪೇಯಿ ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಇದುವರೆಗೆ ಒಟ್ಟು 275 ಕೋವಿಡ್-19 ಪಾಸಿಟಿವ್ ಪ್ರಕರಣ ದೃಢಗೊಂಡಿವೆ. ಈ ಪೈಕಿ 116 ಜನರು ಸೋಂಕಿನಿಂದ ಗುಣಮುಖರಾಗಿ ಬಿಡುಗಡೆ ಹೊಂದಿದ್ದಾರೆ. ಶುಕ್ರವಾರ ಒಬ್ಬರು ಸೇರಿದಂತೆ ಈವರೆಗೆ ಮೂವರು ಮೃತಪಟ್ಟಿದ್ದಾರೆ. 156 ಪ್ರಕರಣಗಳು ಸಕ್ರಿಯವಾಗಿವೆ ಎಂದು ತಿಳಿಸಿದ್ದಾರೆ.

ಶುಕ್ರವಾರ ದೃಢಪಟ್ಟ ಪ್ರಕರಣಗಳ ಪೈಕಿ, ಹಾವೇರಿ ತಾಲ್ಲೂಕಿನ 21, ಶಿಗ್ಗಾವಿ ತಾಲ್ಲೂಕಿನ 9, ಸವಣೂರ ತಾಲ್ಲೂಕಿನ 5, ರಾಣೆಬೆನ್ನೂರು ತಾಲ್ಲೂಕಿನ 6 ಹಾಗೂ ಹಾನಗಲ್ ತಾಲ್ಲೂಕಿನ 4 ಪ್ರಕರಣಗಳು ಒಳಗೊಂಡಿವೆ.

ADVERTISEMENT

ಸೋಂಕಿತರ ವಿವರ:ಹಾವೇರಿ ನಗರದ ಗುತ್ತಲ ರಸ್ತೆಯ ಪಿ-24736ರ ಸಂಪರ್ಕಿತೆ 30 ವರ್ಷದ ಮಹಿಳೆ (ಎಚ್‌ವಿಆರ್‌ -233), ಅಶ್ವಿನಿ ನಗರದ ಪಿ-19943ರ ಸಂಪರ್ಕಿತೆ 38 ವರ್ಷದ ಮಹಿಳೆ (ಎಚ್‌ವಿಆರ್‌ -234), ಶಿವಬಸವನಗರ 44 ವರ್ಷದ ಪುರುಷ (ಎಚ್‌ವಿಆರ್‌ -235), ಅಶ್ವಿನಿನಗರದ 28 ವರ್ಷದ ಪುರುಷ (ಎಚ್‌ವಿಆರ್‌ -236), 66 ವರ್ಷದ ಪುರುಷ (ಎಚ್‌ವಿಆರ್‌ -237), 22 ವರ್ಷದ ಪುರುಷ (ಎಚ್‌ವಿಆರ್‌ -238), 55 ವರ್ಷದ ಮಹಿಳೆ (ಎಚ್‌ವಿಆರ್‌ -239), ಕಲ್ಲುಮಂಟಪ ಓಣಿಯ 26 ವರ್ಷದ ಮಹಿಳೆ (ಎಚ್‌ವಿಆರ್‌ -240), ಕನವಳ್ಳಿಯ 28 ವರ್ಷದ ಮಹಿಳೆ (ಎಚ್‌ವಿಆರ್‌ -244) 67 ವರ್ಷದ ಮಹಿಳೆಗೆ (ಎಚ್‌ವಿಆರ್‌ -245) ಕೋವಿಡ್‌ ದೃಢಪಟ್ಟಿದೆ.

60 ವರ್ಷದ ಪುರುಷ (ಎಚ್‌ವಿಆರ್‌ -246), 50 ವರ್ಷದ ಮಹಿಳೆ (ಎಚ್‌ವಿಆರ್‌ -258), 30 ವರ್ಷದ ಮಹಿಳೆ (ಎಚ್‌ವಿಆರ್‌ 259), 29 ವರ್ಷದ ಮಹಿಳೆ (ಎಚ್‌ವಿಆರ್‌- 260), 65 ವರ್ಷದ ಮಹಿಳೆ (ಎಚ್‌ವಿಆರ್‌ -261), 48 ವರ್ಷದ ಮಹಿಳೆ (ಎಚ್‌ವಿಆರ್‌ -262), 60 ವರ್ಷದ ಪುರುಷ (ಎಚ್‌ವಿಆರ್‌-263), 35 ವರ್ಷದ ಪುರುಷ (264), 50 ವರ್ಷದ ಪುರುಷ (ಎಚ್‌ವಿಆರ್‌ -265), 20 ವರ್ಷದ ಯುವಕ (ಎಚ್‌ವಿಆರ್‌ -266), ಪಿ-23227ರ ಸಂಪರ್ಕಿತರಾದ 26 ವರ್ಷದ ಪುರುಷ (ಎಚ್‌ವಿಆರ್‌ -267) ಸೋಂಕು ದೃಢಪಟ್ಟಿದೆ. ಜುಲೈ 6ರಂದು ಮಾದರಿಗಳನ್ನು ಪ್ರಯೋಗಾಲಯಕ್ಕೆಕಳುಹಿಸಲಾಗಿದ್ದು, ಜುಲೈ 10ರಂದು ಪಾಸಿಟಿವ್ ವರದಿ ಬಂದಿರುತ್ತದೆ.

ಶಿಗ್ಗಾವಿ ತಾಲ್ಲೂಕಿನ ಬಂಕಾಪುರ ಚೌಡಿಕೂಟದ 36 ವರ್ಷದ ಪುರುಷ (ಎಚ್‌ವಿಆರ್‌ -232), ಶಿಗ್ಗಾವಿ ಅಂಬೇಡ್ಕರ್‌ ನಗರದ 50 ವರ್ಷದ ಮಹಿಳೆ (ಎಚ್‌ವಿಆರ್‌ -248), ಜಯನಗರ ಬಡಾವಣೆಯ 45 ವರ್ಷದ ಪುರುಷ (ಎಚ್‌ವಿಆರ್‌ -249), ವಿನಾಯಕ ನಗರದ ನಿವಾಸಿ 59 ವರ್ಷದ ಪುರುಷ (ಎಚ್‌ವಿಆರ್‌ -250), ಜಯನಗರ ಬಡಾವಣೆಯ 29 ವರ್ಷದ ಪುರುಷ (ಎಚ್‌ವಿಆರ್‌ -251), 23 ವರ್ಷದ ಯುವಕ (ಎಚ್‌ವಿಆರ್‌ -252), ಸದಾಶಿವಪೇಟೆಯ ಐ.ಎಲ್.ಐ. ಪ್ರಕರಣದ 26 ವರ್ಷದ ಯುವಕ (ಎಚ್‌ವಿಆರ್‌ -273), ಬಂಕಾಪುರ 3ನೇ ವಾರ್ಡ್‌ನ 28 ವರ್ಷದ ಮಹಿಳೆ (ಎಚ್‌ವಿಆರ್‌ -275).

ರಾಣೆಬೆನ್ನೂರ ತಾಲೂಕು ನಿಟ್ಟೂರಿನ ಐ.ಎಲ್.ಐ. ಲಕ್ಷಣದ 25 ವರ್ಷದ ಯುವಕ (ಎಚ್‌ವಿಆರ್‌-231), ದೇವಗೊಂಡನಹಳ್ಳಿಯ 33 ವರ್ಷದ ಆಶಾ ಕಾರ್ಯಕರ್ತೆ (ಎಚ್‌ವಿಆರ್‌ -253), ಮಾರುತಿ ನಗರದ 28 ವರ್ಷದ ಮಹಿಳೆ (254), ದೊಡ್ಡ ಪೇಟೆಯ 42 ವರ್ಷದ ಪುರುಷ (ಎಚ್‌ವಿಆರ್‌ -255) 58 ವರ್ಷದ ಮಹಿಳೆ (ಎಚ್‌ವಿಆರ್‌ -256), ಮಾರುತಿ ನಗರದ 30 ವರ್ಷದ ಪುರುಷ (ಎಚ್‌ವಿಆರ್‌ -257). ಸದರಿ ಸೋಂಕಿತರ ಮಾದರಿಯನ್ನು ಜುಲೈ 6 ರಂದು ಲ್ಯಾಬ್‍ಗೆ ಕಳುಹಿಸಲಾಗಿದ್ದು, ಜುಲೈ 10ರಂದು ಪಾಸಿಟಿವ್ ದೃಢಪಟ್ಟಿದೆ.

ಸವಣೂರ ತಾಲ್ಲೂಕಿನ 47 ವರ್ಷದ ಮಹಿಳೆ (ಎಚ್‌ವಿಆರ್‌-242), ಪಿ-18270 ಸೋಂಕಿತ ವ್ಯಕ್ತಿಯ ಸಹೋದರ ಮನ್ನಂಗಿಯ 24 ವರ್ಷ ಪುರುಷ (ಎಚ್‌ವಿಆರ್‌-268), ಸೋಂಕಿತ ಸಂಬಂಧಿ 15 ವರ್ಷದ ಬಾಲಕ (ಎಚ್‌ವಿಆರ್‌-269), ತಾಯಿ 45 ವರ್ಷದ ಮಹಿಳೆ (ಎಚ್‌ವಿಆರ್‌-270) ಹಾಗೂ ಮಾದಾಪುರದ 27 ವರ್ಷದ ಮಹಿಳೆ (ಎಚ್‌ವಿಆರ್‌-274)ಗೆ ಸೋಂಕು ದೃಢಪಟ್ಟಿದೆ.

ಹಾನಗಲ್ ತಾಲ್ಲೂಕುಆಡೂರಿನ ಐ.ಎಲ್.ಐ. ಲಕ್ಷಣದ 69 ವರ್ಷದ ಮಹಿಳೆ (ಎಚ್‌ವಿಆರ್‌-241), ಹಾನಗಲ್ ನಗರದ ದ್ವಿತೀಯ ದರ್ಜೆ ಗುಮಾಸ್ತ 32 ವರ್ಷದ ಪುರುಷ (ಎಚ್‌ವಿಆರ್‌-243), 43 ವರ್ಷದ ಪುರುಷ (ಎಚ್‌ವಿಆರ್‌-271) ಹಾಗೂ 56 ವರ್ಷದ ಪುರುಷ (ಎಚ್‌ವಿಆರ್‌-272)ನಿಗೆ ಸೋಂಕು ದೃಢಪಟ್ಟಿದೆ. ಈ ಎಲ್ಲರ ಗಂಟಲು ದ್ರವದ ಮಾದರಿಯನ್ನು ಜುಲೈ 8ರಂದು ಪರೀಕ್ಷೆಗೆ ಕಳುಹಿಸಲಾಗಿದ್ದು, ಜುಲೈ 9ರಂದು ಕೋವಿಡ್ ದೃಢಪಟ್ಟಿದೆ.

ನಿಯಮಾನುಸಾರ ಸೋಂಕಿತರ ನಿವಾಸ ಇರುವ ಪ್ರದೇಶದ 100 ಮೀಟರ್ ಪ್ರದೇಶವನ್ನು ‘ಕಂಟೈನ್ಮೆಂಟ್‌ ಜೋನ್’ ಎಂದು ಘೋಷಿಸಲಾಗಿದೆ ಹಾಗೂ ನಗರ ಪ್ರದೇಶದ 200 ಮೀಟರ್‌ ಪ್ರದೇಶವನ್ನು ಹಾಗೂ ಸೋಂಕಿತರ ಗ್ರಾಮವಾದ ಕನವಳ್ಳಿ, ಮನ್ನಂಗಿ, ಮಾದಾಪೂರ, ನಿಟ್ಟೂರು, ದೇವಗೊಂಡನಕಟ್ಟೆ, ಆಡೂರ ಗ್ರಾಮಗಳನ್ನು ಸಂಪೂರ್ಣವಾಗಿ ‘ಬಫರ್ ಜೋನ್’ ಆಗಿ ಘೋಷಿಸಲಾಗಿದೆ. ಇನ್ಸಿಡೆಂಟಲ್ ಕಮಾಂಡರ್ ಆಗಿ ಆಯಾ ತಾಲ್ಲೂಕು ತಹಶೀಲ್ದಾರ್‌ ಅವರನ್ನು ನೇಮಕ ಮಾಡಿ ಆದೇಶ ಹೊರಡಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.