ADVERTISEMENT

ಚಿತ್ರನಟ ಸೋನು ಸೂದ್‌ ಭೇಟಿ ಮಾಡಿದ ಸುಡುಗಾಡು ಸಿದ್ಧರ ತಂಡ

​ಪ್ರಜಾವಾಣಿ ವಾರ್ತೆ
Published 17 ಜುಲೈ 2021, 16:56 IST
Last Updated 17 ಜುಲೈ 2021, 16:56 IST
ಮುಂಬೈನಲ್ಲಿರುವ ಚಿತ್ರನಟ ಸೋನು ಸೂದ್‌ ಅವರನ್ನು ಭೇಟಿ ಮಾಡಿ, ಶಾಶ್ವತ ಸೂರು ಕಲ್ಪಿಸುವಂತೆ ಹಾವೇರಿಯ ಸುಡುಗಾಡು ಸಿದ್ಧರ ಯುವಕರ ತಂಡ ಮನವಿ ಮಾಡಿತು 
ಮುಂಬೈನಲ್ಲಿರುವ ಚಿತ್ರನಟ ಸೋನು ಸೂದ್‌ ಅವರನ್ನು ಭೇಟಿ ಮಾಡಿ, ಶಾಶ್ವತ ಸೂರು ಕಲ್ಪಿಸುವಂತೆ ಹಾವೇರಿಯ ಸುಡುಗಾಡು ಸಿದ್ಧರ ಯುವಕರ ತಂಡ ಮನವಿ ಮಾಡಿತು    

ಹಾವೇರಿ: ಶಾಶ್ವತ ಸೂರು ಸೌಲಭ್ಯ ಕಲ್ಪಿಸುವಂತೆ ನಗರದ ಶಾಂತಿನಗರದ ಅಲೆಮಾರಿ ಜನಾಂಗವಾದ ಸುಡುಗಾಡು ಸಿದ್ಧರ ತಂಡ ಮುಂಬೈಗೆ ತೆರಳಿ, ಚಿತ್ರನಟ ಸೋನು ಸೂದ್‌ ಅವರನ್ನು ಶುಕ್ರವಾರ ಭೇಟಿ ಮಾಡಿ, ಮನವಿ ಮಾಡಿದೆ.

‘ನಮ್ಮ ಅಲೆಮಾರಿ ಜನಾಂಗದ 40 ಕುಟುಂಬಗಳು ಸರ್ಕಾರಿ ಜಮೀನಿನಲ್ಲಿ ತಗಡಿನ ಶೀಟಿನ ಮನೆಗಳಲ್ಲಿ ವಾಸಿಸುತ್ತಿದ್ದೇವೆ. ಶಾಶ್ವತ ಸೂರಿಗಾಗಿ ಹಲವಾರು ವರ್ಷಗಳಿಂದ ನಗರಸಭೆ ಮತ್ತು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸುತ್ತಲೇ ಬಂದಿದ್ದೇವೆ. ತಾವು ನೆರವು ನೀಡಬೇಕು’ ಎಂದು ಅಲೆಮಾರಿ ಜನಾಂಗದ ಯುವಕರು ಮನವಿ ಮಾಡಿದರು.

ಸುಡುಗಾಡು ಸಿದ್ಧರ ಬೇಡಿಕೆಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಸೋನು ಸೂದ್‌ ಅವರು ‘ಶಾಶ್ವತ ಸೂರು ಕಲ್ಪಿಸುವುದು ಕಷ್ಟ. ಆದರೆ, ನಿಮ್ಮ ಸಮುದಾಯಕ್ಕೆ ಅಗತ್ಯವಿರುವ ದಿನಸಿ, ಔಷಧ, ಆಸ್ಪತ್ರೆಯಲ್ಲಿ ಚಿಕಿತ್ಸೆ, ಮಕ್ಕಳಿಗೆ ಶೈಕ್ಷಣಿಕ ನೆರವು ನೀಡುತ್ತೇನೆ’ ಎಂದು ತಿಳಿಸಿದ್ದಾರೆ.

ADVERTISEMENT

ಅಲೆಮಾರಿ ಜನಾಂಗದ ಶೆಟ್ಟಿ ವಿಭೂತಿ, ಗಂಗಾಧರ ಬಾದಗಿ, ಹುಸೇನಪ್ಪ ಬಾದಗಿ, ರವಿ ಬಾದಗಿ, ಕೋಮಾರಿ, ರಮೇಶ ಉಕ್ಕುಂದ ಮುಂಬೈಗೆ ತೆರಳಿದ ತಂಡದಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.