ADVERTISEMENT

ನ.8ರವರೆಗೆ ಜಾನುವಾರು ಸಂತೆ ನಿಷೇಧ

ಚರ್ಮಗಂಟು ರೋಗ ಹಿನ್ನೆಲೆ: ಜಿಲ್ಲಾಧಿಕಾರಿ ಆದೇಶ

​ಪ್ರಜಾವಾಣಿ ವಾರ್ತೆ
Published 7 ಅಕ್ಟೋಬರ್ 2022, 15:44 IST
Last Updated 7 ಅಕ್ಟೋಬರ್ 2022, 15:44 IST
ಸಂಜಯ ಶೆಟ್ಟೆಣ್ಣವರ, ಜಿಲ್ಲಾಧಿಕಾರಿ
ಸಂಜಯ ಶೆಟ್ಟೆಣ್ಣವರ, ಜಿಲ್ಲಾಧಿಕಾರಿ   

ಹಾವೇರಿ:ಜಿಲ್ಲೆಯಲ್ಲಿನ ಜಾನುವಾರುಗಳಲ್ಲಿ ಚರ್ಮಗಂಟು ರೋಗವು ಉಲ್ಬಣವಾಗಿರುವ ಕಾರಣ, ರೋಗ ಹರಡುವುದನ್ನು ತಡೆಗಟ್ಟಲು ಅ.9ರಿಂದ ನ.8ರವರೆಗೆ ಹಾವೇರಿ ಜಿಲ್ಲೆಯಾದ್ಯಂತ ಜಾನುವಾರುಗಳ ಸಂತೆ, ಜಾನುವಾರುಗಳ ಜಾತ್ರೆಯನ್ನು ಮತ್ತು ಜಾನುವಾರುಗಳ ಸಾಗಾಣಿಕೆಯನ್ನು ನಿಷೇಧಿಸಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.

ಹಾವೇರಿ, ಬ್ಯಾಡಗಿ, ರಾಣೆಬೆನ್ನೂರು, ಶಿಗ್ಗಾವಿ ಮತ್ತು ಸವಣೂರ ತಾಲ್ಲೂಕುಗಳಲ್ಲಿಚರ್ಮ ಗಂಟು ರೋಗವು ಉಲ್ಬಣಗೊಂಡಿದ್ದು, ಸೆ.5ರವರೆಗೆ ಒಟ್ಟು 120 ಗ್ರಾಮಗಳಲ್ಲಿ 1700 ಜಾನುವಾರುಗಳಲ್ಲಿ ಈ ರೋಗವು ಕಂಡು ಬಂದಿರುತ್ತದೆ.

ಪಶುವೈದ್ಯಕೀಯ ಇಲಾಖೆಯ ಎಲ್ಲ ಪಶುವೈದ್ಯರು ಮತ್ತು ತಾಂತ್ರಿಕ ಸಿಬ್ಬಂದಿ ಸದರಿ ಜಾನುವಾರುಗಳಿಗೆ ಚಿಕಿತ್ಸೆಯನ್ನು ಮಾಡುತ್ತಿದ್ದಾರೆ. ಈಗಾಗಲೇ ಜಿಲ್ಲೆಗೆ 80000 ಲಸಿಕೆಯನ್ನು ಪಡೆದುಕೊಂಡು, ಲಸಿಕೆ ಹಾಕುವ ಕಾರ್ಯವು ಪ್ರಗತಿಯಲ್ಲಿ ಇದೆ ಎಂದು ತಿಳಿಸಲಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.