ADVERTISEMENT

ಬಂಡಿ ಬಂತು, ನೊಗ ಹಿಡೀರಿ..!

ಕರ್ಜಗಿ ಗ್ರಾಮದಲ್ಲಿ ಕಾರಹುಣ್ಣಿಮೆ ಅಂಗವಾಗಿ ಸಾಮೂಹಿಕ ಬಂಡಿ ಉತ್ಸವ

​ಪ್ರಜಾವಾಣಿ ವಾರ್ತೆ
Published 23 ಜೂನ್ 2022, 4:04 IST
Last Updated 23 ಜೂನ್ 2022, 4:04 IST
ಹಾವೇರಿ ತಾಲ್ಲೂಕಿನ ಕರಜಗಿ ಗ್ರಾಮದಲ್ಲಿ ಬುಧವಾರ ಕಾರಹುಣ್ಣಿಮೆ ಜಾತ್ರೆ ಅಂಗವಾಗಿ ಸಾಮೂಹಿಕ ಬಂಡಿ ಓಡಿಸುವ ಕಾರ್ಯಕ್ರಮ ವೈಭವದಿಂದ ನಡೆಯಿತು  –ಪ್ರಜಾವಾಣಿ ಚಿತ್ರ: ಮಾಲತೇಶ ಇಚ್ಚಂಗಿ
ಹಾವೇರಿ ತಾಲ್ಲೂಕಿನ ಕರಜಗಿ ಗ್ರಾಮದಲ್ಲಿ ಬುಧವಾರ ಕಾರಹುಣ್ಣಿಮೆ ಜಾತ್ರೆ ಅಂಗವಾಗಿ ಸಾಮೂಹಿಕ ಬಂಡಿ ಓಡಿಸುವ ಕಾರ್ಯಕ್ರಮ ವೈಭವದಿಂದ ನಡೆಯಿತು  –ಪ್ರಜಾವಾಣಿ ಚಿತ್ರ: ಮಾಲತೇಶ ಇಚ್ಚಂಗಿ   

ಕರ್ಜಗಿ (ಗುತ್ತಲ):ಬಂಡಿ ಬಂತು.. ಬಂಡಿ ಬಂತು.. ನೊಗ ಹಿಡೀರಿ, ಬಂಡಿ ಕಟ್ಟಿರಿ, ಬಂಡಿ ಬಂತೂ ಸರೀರಿ... ಎಂಬ ಜನರ ಹರ್ಷೋದ್ಗಾರಗಳು ಬಂಡಿ ಉತ್ಸವಕ್ಕೆ ಹೊಸ ಮೆರುಗು ನೀಡಿತು.

ಹಾವೇರಿ ತಾಲ್ಲೂಕಿನ ಕರ್ಜಗಿ ಗ್ರಾಮದಲ್ಲಿ ಬುಧವಾರ ಕಾರಹುಣ್ಣಿಮೆ ಜಾತ್ರೆ ಅಂಗವಾಗಿ ನಡೆದ ಸಾಮೂಹಿಕ ಬಂಡಿ ಉತ್ಸವವು ನೋಡುವವರಿಗೆ ರೋಮಾಂಚನ ನೀಡಿತು.

ಬಂಡಿ ಓಡಿಸುವುದನ್ನು ನೋಡಲು ಜಿಲ್ಲೆಯ ನಾನಾ ಭಾಗಗಳಿಂದ ರೈತರು ಮತ್ತು ಬ್ರಹ್ಮ ದೇವರ ಭಕ್ತರು ಸಾವಿರಾರು ಸಂಖ್ಯೆಯಲ್ಲಿ ಮನೆಯ ಮಾಳಗಿಯ ಮೇಲೆ ಮತ್ತು ರಸ್ತೆಯ ಇಕ್ಕೆಲಗಳಲ್ಲಿ ನಿಂತು ಬಂಡಿ ಓಡಿಸುವುದನ್ನು ಕಣ್ತುಂಬಿಕೊಂಡು, ಕೇಕೆ, ಸಿಳ್ಳೆ ಹಾಕಿ ಸಂಭ್ರಮಪಟ್ಟರು.

ADVERTISEMENT

ಪಕ್ಕದ ಹಳ್ಳಿಗಳಿಂದ ಕರ್ಜಗಿ ಕಾರಹುಣ್ಣಿಮೆಯ ಬಂಡಿ ಉತ್ಸವಕ್ಕಾಗಿ ಎತ್ತುಗಳನ್ನು ತಿಂಗಳುಗಟ್ಟಲೆ ಮೇಯಿಸಿ, ಸಜ್ಜುಗೊಳಿಸುತ್ತಾರೆ. ರೈತರು ಹರ್ಷೋದ್ಧಾರದ ಕ್ಷಣಕ್ಕೆ ಸಾಕ್ಷಿಯಗುತ್ತಾರೆ.

ಗ್ರಾಮದಲ್ಲಿ ಬುಧವಾರ ಮತ್ತು ಗುರುವಾರ ಅದ್ಧೂರಿಯಾಗಿ ಜನಪದ ಶೈಲಿಯಲ್ಲಿ ಕಾರಹುಣ್ಣಿಮೆ ಜಾತ್ರೆಯನ್ನು ಆಚರಿಸಲಾಯಿತು.ಕಾರಹುಣ್ಣಿಮೆಯನ್ನು ಐತಿಹಾಸಿಕ ಹಿನ್ನೆಲೆಯನ್ನು ಆಧಾರವಾಗಿಟ್ಟುಕೊಂಡು ಸಮಸ್ತ ಸಮುದಾಯದವರು ಭಾವೈಕ್ಯದಿಂದ ಕಾರಹುಣ್ಣಿಮೆ ಉತ್ಸವ ಆಚರಿಸುತ್ತಾ ಬಂದಿದ್ದಾರೆ.

800 ವರ್ಷಗಳಿಂದ ಗ್ರಾಮದಲ್ಲಿ ಕಾರಹುಣ್ಣಿಮೆ ನಡೆಯುತ್ತಾ ಬಂದಿದೆ. ಮೂರು ದಿನಗಳ ಕಾಲ ಉತ್ಸವದಲ್ಲಿ ಮೊದಲನೇ ದಿನ ಹದಿನಾಲ್ಕು ಜನ ವೀರಗಾರರು ಎರಡು ದಿನಗಳ ಕಾಲ ಅಂದರೆ ಬುಧವಾರ ಹಾಗೂ ಗುರುವಾರ ನಿರಾಹಾರಿಗಳಾಗಿ ವ್ರತಾಚರಣೆಯಲ್ಲಿ ತೊಡಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.