ADVERTISEMENT

ಬನ್ನೂರ | ಮಹಾವೀರರ ಜಯಂತಿ: ಮೂರ್ತಿ ಮೆರವಣಿಗೆ

​ಪ್ರಜಾವಾಣಿ ವಾರ್ತೆ
Published 10 ಏಪ್ರಿಲ್ 2025, 14:03 IST
Last Updated 10 ಏಪ್ರಿಲ್ 2025, 14:03 IST
ಶಿಗ್ಗಾವಿ ತಾಲ್ಲೂಕಿನ ಬನ್ನೂರ ಗ್ರಾಮದಲ್ಲಿ ಗುರುವಾರ ಭಗವಾನ್ ಮಹಾವೀರ ಜಯಂತಿ ಅಂಗವಾಗಿ ಮಹಾವೀರರ ಮೂರ್ತಿ ಮೆರವಣಿಗೆ ಜರುಗಿತು 
ಶಿಗ್ಗಾವಿ ತಾಲ್ಲೂಕಿನ ಬನ್ನೂರ ಗ್ರಾಮದಲ್ಲಿ ಗುರುವಾರ ಭಗವಾನ್ ಮಹಾವೀರ ಜಯಂತಿ ಅಂಗವಾಗಿ ಮಹಾವೀರರ ಮೂರ್ತಿ ಮೆರವಣಿಗೆ ಜರುಗಿತು    

ಬನ್ನೂರ(ಶಿಗ್ಗಾವಿ): ತಾಲ್ಲೂಕಿನ ಬನ್ನೂರ ಗ್ರಾಮದಲ್ಲಿ ಗುರುವಾರ ಭಗವಾನ್ ಮಹಾವೀರ್ ದಿಗಂಬರ್ ಜಿನಮಂದಿರ ಸೇವಾ ಸಮಿತಿ, ತಾಲ್ಲೂಕು ಜೈನ್ ಸಮಾಜದ ವತಿಯಿಂದ ನಡೆದ ಭಗವಾನ್ ಮಹಾವೀರ ಜಯಂತಿ ಅಂಗವಾಗಿ ಮಹಾವೀರರ ಮೂರ್ತಿ ಮೆರವಣಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಭ್ರಮದಿಂದ ಜರುಗಿತು.

ಮಂದಿರದಲ್ಲಿ ಬೆಳಿಗ್ಗೆ ಜಿನಬಾಲಕನಿಗೆ ಪಾಂಡುಕ ಶೀಲೆಯ ಮೇಲೆ ಅಭಿಷೇಕ, ಜೀನಮಂದಿರದ ಮೂಲಕ ನಾಯಕರು ಭಗವಾನ ಮಾಹಾವೀರರಿಗೆ ಅಘ್ರ್ಯ, ಅಭಿಷೇಕ ವಿವಿಧ ಧಾಮಿಖ ಕಾರ್ಯಕ್ರಮಗಳು ನಡೆದವು.

ತೊಟ್ಟಿಲೋತ್ಸವ ಕಾರ್ಯಕ್ರಮ, ಮಕ್ಕಳಿಗಾಗಿ ಮಹಾವೀರರ ಕುರಿತು ಭಾಷಣ ಸ್ಪರ್ಧೆ, 24 ತೀರ್ಥಂಕರ ಹೆಸರು ಬರೆಯುವುದು, ಅವರ ಲಾಂಚನ ಹೇಳುವ ಸ್ಪರ್ಧೆ ಏರ್ಪಡಿಸುವ ಮೂಲಕ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.

ADVERTISEMENT

ಜಿನಮಂದಿರ ಸೇವಾ ಸಮಿತಿ ಅಧ್ಯಕ್ಷ ಮಹದೇವಪ್ಪ ಶಿಡ್ಡಣ್ಣವರ, ಉಪಾಧ್ಯಕ್ಷ ಪ್ರಕಾಶ ಹೊನ್ನಪ್ಪನವರ, ಪ್ರವೀಣ ಶಿಡ್ಡ್ದಣ್ಣವರ, ಬಸವರಾಜ ಮಾಯಣ್ಣವರ, ರವಿ ಹೊನ್ನಪ್ಪನವರಬಸವರಾಜ ಲಂಗೋಟಿ, ಸುನೀಲ ಬೋಗಾರ, ಕೆ.ಸಿ.ಸಿದ್ದಣ್ಣವರ, ಅಜಿತ್ ಕ್ವಾಟಿ, ಧರ್ಮಪ್ಪ ಸಿದ್ದಣ್ಣವರ, ಭರ್ಮಪ್ಪ ಮಾಯಣ್ಣವರ, ರೇಣುಕಾ ಹೊನ್ನಪ್ಪನವರ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.