ADVERTISEMENT

ಹಾವೇರಿ: ತಾ.ಪಂ. ಸದಸ್ಯ ಸೇರಿ 76 ಮಂದಿಗೆ ಕೋವಿಡ್‌

ಜಿಲ್ಲೆಯಲ್ಲಿ 2483ಕ್ಕೆ ಏರಿಕೆಯಾದ ಪ್ರಕರಣ: 95 ಮಂದಿ ಬಿಡುಗಡೆ, ಎರಡು ಸಾವು

​ಪ್ರಜಾವಾಣಿ ವಾರ್ತೆ
Published 16 ಆಗಸ್ಟ್ 2020, 15:39 IST
Last Updated 16 ಆಗಸ್ಟ್ 2020, 15:39 IST
ಹಾವೇರಿ ಜಿಲ್ಲಾಸ್ಪತ್ರೆ
ಹಾವೇರಿ ಜಿಲ್ಲಾಸ್ಪತ್ರೆ   

ಹಾವೇರಿ: ವೈದ್ಯ, ಲ್ಯಾಬ್‌ ಟೆಕ್ನೀಶಿಯನ್‌, ಆರೋಗ್ಯ ಕಾರ್ಯಕರ್ತ, ಪೊಲೀಸ್‌, ಬ್ಯಾಂಕ್‌ ನೌಕರ, ಶಿಕ್ಷಣ ಇಲಾಖೆ ನೌಕರ, ತಾ.ಪಂ. ಸದಸ್ಯ ಹಾಗೂ ಪುರಸಭೆ ವಾಟರ್‌ಮನ್‌ ಸೇರಿದಂತೆ ಜಿಲ್ಲೆಯಲ್ಲಿ ಭಾನುವಾರ ಒಟ್ಟು 76 ಮಂದಿಗೆ ಕೋವಿಡ್‌ ದೃಢಪಟ್ಟಿದೆ. ಇವರಲ್ಲಿ 11 ಮಂದಿ ಕರ್ತವ್ಯ ನಿರತ ಕೊರೊನಾ ವಾರಿಯರ್ಸ್‌ ಸೇರಿದ್ದಾರೆ ಎಂದು ಜಿಲ್ಲಾಧಿಕಾರಿ ಸಂಜಯ ಶೆಟ್ಟಣ್ಣವರ ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಈವರೆಗೆ 2483 ಕೋವಿಡ್‌–19 ಪ್ರಕರಣಗಳು ದೃಢಪಟ್ಟಿವೆ. ಇದುವರೆಗೆ 1628 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಭಾನುವಾರದ ಎರಡು ಸಾವು ಸೇರಿದಂತೆ ಒಟ್ಟು 52 ಮಂದಿ ಕೋವಿಡ್‌ನಿಂದ ಮೃತಪಟ್ಟಿದ್ದಾರೆ. ಒಟ್ಟಾರೆ 803 ಸಕ್ರಿಯ ಪ್ರಕರಣಗಳಿವೆ.

ಭಾನುವಾರ ದೃಢಗೊಂಡ ಪ್ರಕರಣಗಳಲ್ಲಿ ಬ್ಯಾಡಗಿ–1, ಹಾನಗಲ್‌–8, ಹಾವೇರಿ–14, ಹಿರೇಕೆರೂರು–10, ರಾಣೆಬೆನ್ನೂರು–27, ಸವಣೂರ–5, ಶಿಗ್ಗಾವಿ ತಾಲ್ಲೂಕಿನಲ್ಲಿ 11 ಮಂದಿಗೆ ಸೋಂಕು ದೃಢಪಟ್ಟಿದೆ.

ADVERTISEMENT

ಗುಣಮುಖ:

ಸವಣೂರ–4, ಶಿಗ್ಗಾವಿ–7, ರಾಣೆಬೆನ್ನೂರು–34, ಹಾವೇರಿ–20, ಬ್ಯಾಡಗಿ–7, ಹಾನಗಲ್‌–3 ಮತ್ತು ಹಿರೇಕೆರೂರು ತಾಲ್ಲೂಕಿನ 20 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದು ಭಾನುವಾರ ಬಿಡುಗಡೆಯಾದರು.

ಸಕ್ರಿಯ ಪ್ರಕರಣಗಳ ವಿವರ:

ಜಿಲ್ಲೆಯಲ್ಲಿ ಒಟ್ಟು 803 ಕೋವಿಡ್‌ ಸಕ್ರಿಯ ಪ್ರಕರಣಗಳಿವೆ. ಸವಣೂರ–48, ಶಿಗ್ಗಾವಿ–76, ರಾಣೆಬೆನ್ನೂರ–236, ಹಾವೇರಿ–215, ಬ್ಯಾಡಗಿ–69, ಹಾನಗಲ್‌–49 ಮತ್ತು ಹಿರೇಕೆರೂರ ತಾಲ್ಲೂಕಿನಲ್ಲಿ 110 ಕೋವಿಡ್‌ ಸಕ್ರಿಯ ಪ್ರಕರಣಗಳಿವೆ.

ಮರಣದ ವಿವರ:

ಹಿರೇಕೆರೂರು ತಾಲ್ಲೂಕಿನ ಮೇದೂರು ಗ್ರಾಮದ 56 ವರ್ಷದ ಪುರುಷ (ಪಿ–220053) ಆ.14ರಂದು ತೀವ್ರ ಉಸಿರಾಟದ ಸಮಸ್ಯೆಯಿಂದ ಜಿಲ್ಲಾ ಆಸ್ಪತ್ರೆಗೆ ದಾಖಲಾಗಿದ್ದು, ಅಂದೇ ಅವರ ಮೂಗಿನ ದ್ರವವನ್ನು ರ‍್ಯಾಪಿಡ್‌ ಆ್ಯಂಟಿಜೆನ್‌ ಪರೀಕ್ಷೆ ಮುಖಾಂತರ ಪರೀಕ್ಷಿಸಿದ್ದು, ಕೋವಿಡ್‌–19 ಎಂದು ದೃಢಪಟ್ಟಿರುತ್ತದೆ. ಅಂದೇ ಅವರು ಮೃತಪಟ್ಟಿದ್ದಾರೆ.

ರಾಣೆಬೆನ್ನೂರು ತಾಲ್ಲೂಕಿನ ಹರಳಯ್ಯ ನಗರದ ನಿವಾಸಿ 65 ವರ್ಷದ ಮಹಿಳೆ (ಪಿ214777) ಆ.13ರಂದು ತೀವ್ರ ಉಸಿರಾಟದ ಸಮಸ್ಯೆಯಿಂದ ಜಿಲ್ಲಾ ಆಸ್ಪತ್ರೆಗೆ ದಾಖಲಾಗಿದ್ದರು. ಅಂದೇ ಅವರ ಮೂಗಿನ ದ್ರವವನ್ನು ರ‍್ಯಾಪಿಡ್‌ ಆ್ಯಂಟಿಜೆನ್‌ ಪರೀಕ್ಷೆ ಮುಖಾಂತರ ಪರೀಕ್ಷಿಸಿದ್ದು, ಕೋವಿಡ್‌–19 ದೃಢಪಟ್ಟಿರುತ್ತದೆ. ಆ.14ರಂದು ಅವರು ಮೃತಪಟ್ಟಿದ್ದಾರೆ. ಇಬ್ಬರ ಅಂತ್ಯಕ್ರಿಯೆಯನ್ನು ಕೋವಿಡ್‌–19 ನಿಯಮಾವಳಿ ಪ್ರಕಾರ ನೆರವೇರಿಸಲಾಗಿದೆ.

ಜಿಲ್ಲೆಯಲ್ಲಿ ಇದುವರೆಗೆ 52 ಮಂದಿ ಕೋವಿಡ್‌ನಿಂದ ಮೃತಪಟ್ಟಿದ್ದಾರೆ.ಸವಣೂರ–3, ಶಿಗ್ಗಾವಿ–6, ರಾಣೆಬೆನ್ನೂರು–16, ಹಾವೇರಿ–17, ಬ್ಯಾಡಗಿ–1, ಹಾನಗಲ್‌–5 ಹಾಗೂ ಹಿರೇಕೆರೂರು ತಾಲ್ಲೂಕಿನಲ್ಲಿ 4 ಮಂದಿ ಮೃತಪಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.