ಶಿಗ್ಗಾವಿ: ಪಟ್ಟಣ ಹಾಗೂ ತಾಲ್ಲೂಕಿನ ಬಂಕಾಪುರದಲ್ಲಿ ಪ್ರತಿಷ್ಠಾಪಿಸಿರುವ ಗಣೇಶ ಮೂರ್ತಿಗಳಿಗೆ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರು ಶನಿವಾರ ಪೂಜೆ ಸಲ್ಲಿಸಿದರು.
ಸೌಹಾರ್ದಯುತವಾಗಿ ಉತ್ಸವ ನಡೆಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಪರಿಸರ ಸ್ನೇಹಿ ಆಚರಣೆಗೆ ಮಂಡಳದವರಿಗೆ ತಿಳಿಸಿದರು.
ಬಿಜೆಪಿ ತಾಲ್ಲೂಕು ಘಟಕದ ಅಧ್ಯಕ್ಷ ವಿಶ್ವನಾಥ ಹರವಿ, ಪುರಸಭೆ ಸದಸ್ಯರಾದ ಶ್ರೀಕಾಂತ ಬುಳ್ಳಕ್ಕನವರ, ದಯಾನಂದ ಅಕ್ಕಿ, ಪರಶುರಾಮ ಸೊನ್ನದ, ಮಂಜುನಾಥ ಬ್ಯಾಹಟ್ಟಿ, ರಮೇಶ ವನಹಳ್ಳಿ, ರಾಜು ಟೋಪಣ್ಣನವರ, ಮುಖಂಡರಾದ ಶಿವನಂದ ಮ್ಯಾಗೇರಿ, ಮಾಲತೇಶ ಯಲಿಗಾರ, ಹೊನ್ನಪ್ಪ ಹೂಗಾರ, ಬಸವರಾಜ ನಾರಾಯಣಪುರ, ಎಂ.ಎನ್. ಹೊನಕೇರಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.