
ಹಾನಗಲ್: ‘ಧರ್ಮ ಬೋಧನೆ ಮಾಡುವವರೆ ಧರ್ಮ ನಿಂದನೆ ಮಾಡುವ ವಿನಾಶಕಾರಿ ಸಂಗತಿ ದೇಶವನ್ನು ಕಂಗೆಡಿಸುತ್ತಿದ್ದು, ಧರ್ಮಾಚರಣೆಗೆ ಹಿನ್ನಡೆಯಾಗುತ್ತಿದೆ’ ಎಂದು ಅಗಡಿ ಅಕ್ಕಿಮಠದ ಗುರುಲಿಂಗ ಸ್ವಾಮೀಜಿ ಆತಂಕ ವ್ಯಕ್ತಪಡಿಸಿದರು.
ತಾಲ್ಲೂಕಿನ ಬೆಳಗಾಲಪೇಟೆ ಗ್ರಾಮದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಶತಮಾನೋತ್ಸವ ನಿಮಿತ್ತ ಭಾನುವಾರ ಹಮ್ಮಿಕೊಂಡಿದ್ದ ಹಿಂದೂ ಸಮ್ಮೇಳನದ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ‘ಧರ್ಮ, ಜಾತಿ ಹೆಸರಿನಲ್ಲಿ ಗೊಂದಲ ಸೃಷ್ಟಿಸಿ ಒಡೆದಾಳುವ ನೀತಿ ಅನುಸರಿಸುವ ನಾಯಕರಿಗೆ ಸರಿಯಾದ ಪಾಠ ಕಲಿಸಲು ಮುಂದಾಗಬೇಕು’ ಎಂದರು.
ಸಮ್ಮೇಳನ ಉದ್ಘಾಟಿಸಿದ ಆರ್‌ಎಸ್ಎಸ್ ಪ್ರಮುಖ, ಪಾರಂಪರಿಕ ವೈದ್ಯ ಡಾ.ಹನುಮಂತ ಮಳಲಿ, ‘ಸಮೃದ್ಧ ಭಾರತ ನಿರ್ಮಾಣ, ಜಾತಿ ರಹಿತ ಸಮಾಜ ನಿರ್ಮಾಣ, ಸ್ವದೇಶಿ ಜೀವನಾಧಾರಿತ ಬದುಕು ನಮ್ಮದಾಗಬೇಕು’ ಎಂದರು.
ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎಂ.ಆರ್. ಪಾಟೀಲ ಮಾತನಾಡಿದರು. ಮುಖಂಡರಾದ ಸಿದ್ದಲಿಂಗಪ್ಪ ಕಮಡೊಳ್ಳಿ, ಕೆ.ಬಿ. ಪಾಟೀಲ, ಅಜ್ಜಪ್ಪ ಪಾಟೀಲ, ಸಿ.ಬಿ. ಪಾಟೀಲ, ಬಸವರಾಜ ಹುಣಸೀಕಟ್ಟಿ, ಈರಣ್ಣ ನಿಂಬಣ್ಣನವರ, ಗಂಗಾಧರ ರಡ್ಡೇರ, ನಾಗಣ್ಣ ಹೊಸಕಲ್, ಎಲ್ಲಪ್ಪ ನಾಗಪ್ಪನವರ, ನಾಗಣ್ಣ ಶಿವಣ್ಣನವರ, ಬಸವರಾಜ ಅಗಸನಹಳ್ಳಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.