ಬ್ಯಾಡಗಿ: ಪಟ್ಟಣದ ಆದರ್ಶ ಸೆಂಟ್ರಲ್ ಸ್ಕೂಲ್‌ನ ವಿದ್ಯಾರ್ಥಿಗಳು ಸಿಬಿಎಸ್‌ಇ 10ನೇ ತರಗತಿಯ ಪರೀಕ್ಷೆಯಲ್ಲಿ ಶೇ 96.29 ರಷ್ಟು ಫಲಿತಾಂಶ ಪಡೆದುಕೊಂಡಿದ್ದಾರೆ.
ಒಟ್ಟು 54 ವಿದ್ಯಾರ್ಥಿಗಳಲ್ಲಿ, 52 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, 6 ಡಿಸ್ಟಿಂಕ್ಷನ್, 30 ಪ್ರಥಮ ಶ್ರೇಣಿ , 16 ದ್ವಿತೀಯ ಶ್ರೇಣಿಯಲ್ಲಿ ಪಾಸಾಗಿದ್ದಾರೆ. ಆರ್.ಸೋನು (ಶೇ 91) ಶಾಲೆಗೆ ಪ್ರಥಮ, ಸೃಷ್ಟಿ ಎಸ್.ಚೂರಿ (ಶೇ 90.2) ದ್ವಿತೀಯ ಹಾಗೂ ಧರಣಿ ಗೊಂದಿ (ಶೇ 89.6) ತೃತೀಯ ಸ್ಥಾನ ಗಳಿಸಿದ್ದಾರೆ ಎಂದು ಆದರ್ಶ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷ ಜಯದೇವ ಶಿರೂರ, ಕಾರ್ಯದರ್ಶಿ ವೀರೇಶ ಶಿರೂರ ಹಾಗೂ ಪ್ರಾಚಾರ್ಯ ಅವಿನಾಶ ಮೋಹಿತೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.