ಸಾವು
ಪ್ರಾತಿನಿಧಿಕ ಚಿತ್ರ
ಹಾವೇರಿ: ತಾಲ್ಲೂಕಿನ ನಜೀಕಲಕಮಾಪುರ ಗ್ರಾಮದಲ್ಲಿ ಲಲಿತವ್ವ ಡಬ್ಬಣ್ಣನವರ ಅವರನ್ನು ಕೊಲೆ ಮಾಡಲಾಗಿದ್ದು, ಆರೋಪಿ ಎನ್ನಲಾದ ಅವರ ಪತಿ ಸಿದ್ದಪ್ಪ ಸಹ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
‘ಗ್ರಾಮದ ನಿವಾಸಿ ಲಲಿತವ್ವ ಹಾಗೂ ಸಿದ್ದಪ್ಪ ಹಲವು ವರ್ಷಗಳ ಹಿಂದೆ ಮದುವೆಯಾಗಿದ್ದರು. ಅವರಿಗೆ ಮಕ್ಕಳೂ ಇದ್ದರು. ಮದ್ಯ ವ್ಯಸನಿಯಾಗಿದ್ದ ಸಿದ್ದಪ್ಪ ನಿತ್ಯವೂ ಕುಡಿದು ಬಂದು ಗಲಾಟೆ ಮಾಡುತ್ತಿದ್ದನೆಂದು ಗೊತ್ತಾಗಿದೆ’ ಎಂದು ಪೊಲೀಸರು ಹೇಳಿದರು.
‘ಪತ್ನಿ ಲಲಿತವ್ವ ಅವರ ಶೀಲ ಶಂಕಿಸಿದ್ದ ಸಿದ್ದಪ್ಪ, ಆಗಸ್ಟ್ 7ರಂದು ರಾತ್ರಿ 9.50 ಗಂಟೆ ಸುಮಾರಿಗೆ ಜಗಳ ತೆಗೆದಿದ್ದ. ಪತ್ನಿಯನ್ನು ಮನೆಯಿಂದ ಹೊರಗೆ ಎಳೆದು ತಂದಿದ್ದ ಆತ, ಬಡಿಗೆಯಿಂದ ತಲೆಗೆ ಹೊಡೆದು ಕೊಲೆ ಮಾಡಿದ್ದ. ನಂತರ, ಸ್ಥಳದಿಂದ ಪರಾರಿಯಾಗಿದ್ದ. ಅದರ ಮರುದಿನವೇ ನಜೀಕಲಕಮಾಪುರ ಗ್ರಾಮದ ಕೆರೆಯಲ್ಲಿ ಸಿದ್ದಪ್ಪ ಮೃತದೇಹ ಪತ್ತೆಯಾಗಿದೆ. ಪತ್ನಿ ಕೊಂದಿದ್ದಕ್ಕೆ ಪಶ್ಚಾತಾಪವಾಗಿ ಆತ ಆತ್ಮಹತ್ಯೆ ಮಾಡಿಕೊಂಡಿರುವುದು ಮೇಲ್ನೋಟಕ್ಕೆ ಗೊತ್ತಾಗಿದೆ’ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.