ADVERTISEMENT

ವದಂತಿಗೆ ಕಿವಿಗೊಡಬೇಡಿ: ಪೌರಾಯುಕ್ತರ ಮನವಿ

​ಪ್ರಜಾವಾಣಿ ವಾರ್ತೆ
Published 6 ಫೆಬ್ರುವರಿ 2021, 3:48 IST
Last Updated 6 ಫೆಬ್ರುವರಿ 2021, 3:48 IST
ಪರಶುರಾಮ ಚಲವಾದಿ, ಪೌರಾಯುಕ್ತ, ಹಾವೇರಿ ನಗರಸಭೆ 
ಪರಶುರಾಮ ಚಲವಾದಿ, ಪೌರಾಯುಕ್ತ, ಹಾವೇರಿ ನಗರಸಭೆ    

ಹಾವೇರಿ: ನಗರಸಭೆ ವ್ಯಾಪ್ತಿಯಲ್ಲಿ ನಿವೇಶನ ರಹಿತರಿಗೆ, ಕಡು ಬಡವರಿಗೆ ವಾಜಪೇಯಿ ನಗರ ವಸತಿ ಯೋಜನೆಯಡಿ ಜಿ+1 ಮಾದರಿ ಅಡಿಯಲ್ಲಿ ವಸತಿ ಕಲ್ಪಿಸುತ್ತೇವೆ ಎಂದು ನಗರಸಭೆ ಹಾವೇರಿಯ ಹೆಸರು ಹೇಳಿ ಹಣವನ್ನು ಪಡೆದುಕೊಳ್ಳುತ್ತಿರುವ ಬಗ್ಗೆ ಜನರಿಂದ ಮೌಖಿಕ ದೂರುಗಳು ಬಂದಿವೆ.

ನಗರಸಭೆಯಿಂದ ಆಯ್ಕೆಯಾದ ಫಲಾನುಭವಿಗಳಿಗೆ ನೋಟಿಸ್‌ ನೀಡಿ, ಆನ್‌ಲೈನ್‌ ಬ್ಯಾಂಕ್‌ ಚಲನ್‌ ಮುಖಾಂತರ ನಿಗದಿತ ಖಾತೆಗೆ ಸಂದಾಯ ಮಾಡಿಸಿಕೊಳ್ಳಲಾಗುವುದು. ಕಾರಣ ಸಾರ್ವಜನಿಕರು ಸುಳ್ಳು ವದಂತಿಗಳನ್ನು ಕೇಳಿ ಮೂರನೇ ವ್ಯಕ್ತಿಯ ಕೈಯಲ್ಲಿ ಹಣ ಕೊಡಬಾರದು. ಒಂದು ವೇಳೆ ದುಡ್ಡು ಕೊಟ್ಟರೆ ಅದಕ್ಕೆ ನಗರಸಭೆ ಹೊಣೆಯಾಗುವುದಿಲ್ಲ ಎಂದು ನಗರಸಭೆ ಪೌರಾಯುಕ್ತ ಪರಶುರಾಮ ಚಲವಾದಿ ಪತ್ರಿಕಾ ಪ್ರಕಟಣೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT