
ಸಾವು
(ಪ್ರಾತಿನಿಧಿಕ ಚಿತ್ರ)
ಹಾವೇರಿ: ತಾಲ್ಲೂಕಿನ ನೆಗಳೂರಿನಲ್ಲಿ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದಾಗ ರೋಟಾವೇಟರ್‌ನಲ್ಲಿ ಸಿಲುಕಿ ಪ್ರಕಾಶ ಚಂದ್ರಶೇಖರಪ್ಪ ಶಿಡೇನೂರು (39) ಎಂಬುವವರು ಮೃತಪಟ್ಟಿದ್ದು, ಈ ಬಗ್ಗೆ ಗುತ್ತಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
‘ನೆಗಳೂರು ನಿವಾಸಿ ಪ್ರಕಾಶ ಅವರು ರೋಟಾವೇಟರ್ ಜೋಡಣೆಯಾಗಿದ್ದ ಟ್ರ್ಯಾಕ್ಟರ್ ಚಲಾಯಿಸಿಕೊಂಡು ಡಿ. 9ರಂದು ಜಮೀನಿಗೆ ಹೋಗಿದ್ದರು. ಜಮೀನಿನಲ್ಲಿ ಕೆಲ ಹೊತ್ತು ರೋಟಾವೇಟರ್ ಹೊಡೆದಿದ್ದರು. ನಂತರ, ರೋಟಾವೇಟರ್‌ನಲ್ಲಿ ಮಣ್ಣು ಸಿಲುಕಿಕೊಂಡಿತ್ತು. ಅದನ್ನು ತೆಗೆಯಲು ಮುಂದಾದಾಗ ಅವಘಡ ಸಂಭವಿಸಿದೆ’ ಎಂದು ಗುತ್ತಲ ಪೊಲೀಸರು ಹೇಳಿದರು.
‘ಟ್ರ್ಯಾಕ್ಟರ್‌ನಿಂದ ಇಳಿದಿದ್ದ ಪ್ರಕಾಶ, ಒಂದನೇ ಗೇರ್‌ನಲ್ಲಿಟ್ಟು ರೋಟಾವೇಟರ್ ಬಳಿ ಹೋಗಿದ್ದರು. ಟ್ರ್ಯಾಕ್ಟರ್ ಆನ್ ಇರುವಾಗಲೇ ರೋಟಾವೇಟರ್ ಯಂತ್ರದಲ್ಲಿ ಮಣ್ಣು ತೆಗೆಯಲು ಹೋಗಿ, ಅದರಲ್ಲೇ ಸಿಲುಕಿಕೊಂಡು ಮೃತಪಟ್ಟಿರುವುದು ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ. ಸಂಬಂಧಿ ನೀಡಿರುವ ದೂರು ಆಧರಿಸಿ ಎಫ್‌ಐಆರ್ ದಾಖಲಿಸಿಕೊಂಡು, ತನಿಖೆ ಮುಂದುವರಿಸಲಾಗಿದೆ’ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.