ADVERTISEMENT

ಮನೆ ಕಳ್ಳತನ: ಬಾಲಕ ವಶಕ್ಕೆ 

​ಪ್ರಜಾವಾಣಿ ವಾರ್ತೆ
Published 4 ಮಾರ್ಚ್ 2026, 5:27 IST
Last Updated 4 ಮಾರ್ಚ್ 2026, 5:27 IST
   

ಬ್ಯಾಡಗಿ: ತಾಲ್ಲೂಕಿನ ಕದರಮಂಡಲಗಿ ಗ್ರಾಮದಲ್ಲಿ ಕಳೆದ ಜ.8ರಂದು ಮನೆ ಕಳ್ಳತನ ಮಾಡಿದ್ದ ಆರೋಪಿ ಬಾಲಕನನ್ನು ಇಲ್ಲಿಯ ಪೊಲೀಸ್‌ರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ‌

ಆರೋಪಿ ಮನೆ ಬೀಗ ಮುರಿದು ₹13.75ಲಕ್ಷ ಮೌಲ್ಯದ ಚಿನ್ನಾಭರಣ ಹಾಗೂ ನಗದು ಕಳ್ಳತನ ಮಾಡಿದ್ದ ಎನ್ನಲಾಗಿದೆ.

ಈ ಪೈಕಿ 111 ಗ್ರಾಂ ಚಿನ್ನಾಭರಣ 355 ಗ್ರಾಂ ಬೆಳ್ಳಿ ಹಾಗೂ ₹44,800 ನಗದು ವಶಪಡಿಸಿಕೊಳ್ಳಲಾಗಿದೆ. ಆರೋಪಿ ಬಾಲಕ ನಿತ್ಯದ ಶೋಕಿ ಹಾಗೂ ಇನ್ನಿತರ ಚಟಗಳಿಗಾಗಿ ಕಳ್ಳತನ ಮಾಡಿರುವುದಾಗಿ ವಿಚಾರಣೆ ವೇಳೆ ಹೇಳಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.