
ರಾಣೆಬೆನ್ನೂರು: ವೀರಶೈವ ಧರ್ಮ ವಿಶ್ವ ಧರ್ಮವಾಗಿದ್ದು, ಇಡೀ ಮನುಕುಲದ ಲೇಸನ್ನು ಬಯಸುವ ಧರ್ಮ ಇದಾಗಿದೆ. ಮಾನವ ಧರ್ಮಕ್ಕೆ ಜಯವಾಗಲಿ, ಧರ್ಮದಿಂದಲೇ ವಿಶ್ವಕ್ಕೆ ಶಾಂತಿ ಎಂಬುದನ್ನು ಸಾರಿದೆ. ಮನುಕುಲಕ್ಕೆ ಜಂಗಮ ಸಮಾಜ ಕೊಡುಗೆ ಅಪಾರ ಎಂದು ಮಾಜಿ ಶಾಸಕ ಅರುಣಕುಮಾರ ಪೂಜಾರ ಹೇಳಿದರು.
ಇಲ್ಲಿನ ಮೃತ್ಯುಂಯನಗರದ ವಾಗೀಶ ಪಂಡಿತಾರಾಧ್ಯ ಸಮುದಾಯ ಭವನದಲ್ಲಿ ಭಾನುವಾರ ಜಂಗಮ ಸಮಾಜ ಹಾಗೂ ಜಂಗಮ ನೌಕರರ ವೇದಿಕೆಯ ನೂತನ ಪದಾಧಿಕಾರಿಗಳ ಸೇವಾ ಸ್ವೀಕಾರ, ಧರ್ಮಸಭೆ ಹಾಗೂ ಸಾಧಕರಿಗೆ ಸನ್ಮಾನ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಜಂಗಮರ ಸಮಗ್ರ ಅಭಿವೃದ್ಧಿಗಾಗಿ ಸಮುದಾಯದ ಜನರೆಲ್ಲ ಒಂದಾಗಬೇಕು. ಜಂಗಮ ಸಮುದಾಯದವರು ಯಾವಾಗಲೂ ಸಮಾಜ ಕಟ್ಟುವ ಕೆಲಸ ಮಾಡುತ್ತಾ ಬಂದಿದ್ದಾರೆ. ಜಂಗಮ ಸಮಾಜಕ್ಕೆ ನಿವೇಶನ ಖರೀದಿಗೆ ಹಾಗೂ ಪ್ರತಿಭಾ ಪುರಸ್ಕಾರಕ್ಕೆ ಬೇಕಾದ ಸಹಾಯ, ಸಹಕಾರ ನೀಡುವ ಭರವಸೆ ನೀಡಿದರು.
ಶಾಸಕ ಪ್ರಕಾಶ ಕೋಳಿವಾಡ ಅವರು ಮಾತನಾಡಿ, ನಮ್ಮ ತಂದೆಯವರ ಕಾಲದಿಂದಲೂ ನಾವು ಜಂಗಮರ ಒಡನಾಡಿಯಾಗಿದ್ದೇವೆ. ಜಂಗಮ ಸಮಾಜ ಎಲ್ಲ ಸಮಾಜಗಳಿಂದ ಗೌರವಿಸಲ್ಪಡುವವರಾಗಿದ್ದಾರೆ. ಸಮಾಜಕ್ಕೆ ಮಾರ್ಗದರ್ಶನ ಮಾಡುವ ಜವಾಬ್ದಾರಿ ನಿಮ್ಮ ಮೇಲಿದೆ. ಜಂಗಮ ಸಮಾಜಕ್ಕೆ ನಿವೇಶನ ನೀಡುವುದು ಸೇರಿದಂತೆ ಎಲ್ಲ ಸಹಕಾರ ನೀಡಲಾಗುವುದು ಎಂದರು.
ಜಿಲ್ಲಾಪಂಚಾಯಿತಿ ಮಾಜಿ ಸದಸ್ಯ ಸಂತೋಷಕುಮಾರ ಪಾಟೀಲ, ದೊಡ್ಡಪೇಟೆಯ ಪುಟ್ಟಯ್ಯನಮಠದ ಗುರುಬಸವ ಸ್ವಾಮೀಜಿ, ದಾವಣಗೆರೆ ಆವರಗೊಳ್ಳ ಪುರವರ್ಗಮಠದ ಓಂಕಾರ ಶಿವಾಚಾರ್ಯ ಸ್ವಾಮೀಜಿ, ಲಿಂಗದಹಳ್ಳಿಯ ವೀರಭದ್ರ ಶಿವಾಚಾರ್ಯ ಸ್ವಾಮೀಜಿ ಮತ್ತು ಕೊಡಿಯಾಲ ಹೊಸಪೇಟೆಯ ಪುಣ್ಯಕೋಟಿಮಠದ ಬಾಲಯೋಗಿ ಜಗದೀಶ್ವರ ಸ್ವಾಮೀಜಿ ಮಾತನಾಡಿದರು.
ದಿಂಡದಹಳ್ಳಿಯ ಪಶುಪತಿ ಶಿವಾನಂದ ಶಿವಾಚಾರ್ಯ ಸ್ವಾಮೀಜಿ, ಗುಡ್ಡದ ಆನ್ವೇರಿಯ ಶಿವಯೋಗೀಶ್ವರ ಸ್ವಾಮೀಜಿ, ಮಣಕೂರು ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.
ಅಧ್ಯಕ್ಷ ವಿ.ಎಸ್.ಹಿರೇಮಠ ಅವರಿಗೆ ನಿಕಟಪೂರ್ವ ಅಧ್ಯಕ್ಷ ಮುಕ್ತೇಶ ಅಧಿಕಾರ ಹಸ್ತಾಂತರ ಮಾಡಿದರು. ಪ್ರಕಾಶ ಗಚ್ಚಿನಮಠ ಹಾಗೂ ಪಿ.ವಿ.ಮಠದ ಸಂಗೀತ ಕಾರ್ಯಕ್ರಮ ನಡೆಸಿದರು.
ನಿವೃತ್ತ ಸೈನಿಕ ಹಾಗೂ ರೋಟರಿ ಸಂಸ್ಥೆಯ ಅಧ್ಯಕ್ಷ ಬಿ.ಜೆ.ಹಿರೇಮಠ, ವೀರಶೈವ ಐಕ್ಯತಾ ಪರಿಷತ್ ಅಧ್ಯಕ್ಷೆ ಕೋಮಲಾ ಮಠದ, ಮಾಹಿತಿ ಹಕ್ಕು ತಜ್ಞ ಜೆ.ಎಂ.ರಾಜಶೇಖರ, ಪಿಎಲ್‌ಡಿ ಬ್ಯಾಂಕಿನ ನಿರ್ದೇಶಕಿ ಶಿವಲೀಲಾ ಸುರಳಿಕೇರಿಮಠ, ಡಾ.ಗುರುಮೂರ್ತಿ ರಾಚೋಟಿಮಠ, ಪತ್ರಕರ್ತ ಮುರುಗೇಶ ಮಹಾನುಭಾವಿಮಠ, ವೀರಶೈವ ಮಹಾಸಭಾದ ತಾಲ್ಲೂಕು ಘಟಕದ ಅಧ್ಯಕ್ಷ ಕೆ.ಎನ್.ಕೋರಧಾನ್ಯಮಠ, ಕುಸ್ತಿ ಪಟು ಗಣೇಶ ಹಿರೇಮಠ, ಜಂಗಮ ಜ್ಯೋತಿ ಮಹಿಳಾ ವೇದಿಕೆ ಅಧ್ಯಕ್ಷೆ ಗೀತಾ ಭಸ್ಮಾಂಗಿಮಠ ಅವರನ್ನು ಸನ್ಮಾನಿಸಲಾಯಿತು.
ಗೌರವ ಅಧ್ಯಕ್ಷ ಫಕ್ಕಿರೇಶ ಭಸ್ಮಾಂಗಿಮಠ, ಎಸ್.ಸಿ.ಷಡಕ್ಷರಿಮಠ, ಗಂಗಾಧರ ಮಠದ, ಜಗದೀಶ ಅಜ್ಜೋಡಿಮಠ, ಮಲ್ಲಿಕಾರ್ಜುನ ಸ್ವಾಮಿ ಹಾಲಸ್ವಾಮಿಮಠ, ಪ್ರೊ.ಎಸ್.ವಿ. ಉಜ್ಜೈನಿಮಠ, ಎಸ್.ವಿ.ಸಾಲೀಮಠ, ಜೆ.ವಿ.ಮಳಿಮಠ, ಪಂಚಾಕ್ಷರಯ್ಯ ಮುದಗಲ್‌ಮಠ, ಶಿವಯೋಗಿ ಹಿರೇಮಠ, ರವಿಕುಮಾರ ಪಾಟೀಲ, ವಿಶ್ವನಾಥ ರಾಚೋಟಿಮಠ, ವೀರನಗೌಡ ಪಾಟೀಲ ಹಾಗೂ ಜಂಗಮ ಜ್ಯೋತಿ ಮಹಿಳಾ ವೇದಿಕೆ ಪದಾಧಿಕಾರಿಗಳು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.