ADVERTISEMENT

ರಾಕ್ ಗಾರ್ಡನ್ ಕಲಾ ನಿರ್ದೇಶಕಿ ವೇದಾರಾಣಿಗೆ ’ಕಿತ್ತೂರು ರಾಣಿ ಚನ್ನಮ್ಮ’ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 17 ಜನವರಿ 2026, 5:15 IST
Last Updated 17 ಜನವರಿ 2026, 5:15 IST
ಹರಿಹರದ ವೀರಶೈವ ಲಿಂಗಾಯತ ಪಂಚಮಸಾಲಿ ಪೀಠದ ವತಿಯಿಂದ ಗುರುವಾರ ಜರುಗಿದ ಹರ ಜಾತ್ರಾ ಮಹೋತ್ಸವದಲ್ಲಿ ಶಿಗ್ಗಾವಿ ಉತ್ಸವ ರಾಕ್ ಗಾರ್ಡನ್ ಕಲಾ ನಿರ್ದೇಶಕಿ ವೇದಾರಾಣಿ ದಾಸನೂರ ಅವರಿಗೆ ’ಕಿತ್ತೂರು ರಾಣಿ ಚನ್ನಮ್ಮ’ ಪ್ರಶಸ್ತಿ ಪ್ರದಾನ ಮಾಡಲಾಯಿತು
ಹರಿಹರದ ವೀರಶೈವ ಲಿಂಗಾಯತ ಪಂಚಮಸಾಲಿ ಪೀಠದ ವತಿಯಿಂದ ಗುರುವಾರ ಜರುಗಿದ ಹರ ಜಾತ್ರಾ ಮಹೋತ್ಸವದಲ್ಲಿ ಶಿಗ್ಗಾವಿ ಉತ್ಸವ ರಾಕ್ ಗಾರ್ಡನ್ ಕಲಾ ನಿರ್ದೇಶಕಿ ವೇದಾರಾಣಿ ದಾಸನೂರ ಅವರಿಗೆ ’ಕಿತ್ತೂರು ರಾಣಿ ಚನ್ನಮ್ಮ’ ಪ್ರಶಸ್ತಿ ಪ್ರದಾನ ಮಾಡಲಾಯಿತು   

ಶಿಗ್ಗಾವಿ: ಹರಿಹರದ ವೀರಶೈವ ಲಿಂಗಾಯತ ಪಂಚಮಸಾಲಿ ಪೀಠದ ವತಿಯಿಂದ ಗುರುವಾರ ಜರುಗಿದ ಹರ ಜಾತ್ರಾ ಮಹೋತ್ಸವದಲ್ಲಿ ಶಿಗ್ಗಾವಿ ಉತ್ಸವ ರಾಕ್ ಗಾರ್ಡನ್ ಕಲಾ ನಿರ್ದೇಶಕಿ ವೇದಾರಾಣಿ ದಾಸನೂರ ಅವರಿಗೆ ‘ಕಿತ್ತೂರು ರಾಣಿ ಚನ್ನಮ್ಮ’ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಹತ್ತು ಗ್ರಾಂ ಬೆಳ್ಳಿಯಿಂದ ನಿರ್ಮಿಸಿರುವ ನಾಣ್ಯದಲ್ಲಿ ವೀರರಾಣಿ ಕಿತ್ತೂರು ಚನ್ನಮ್ಮಳ ಚಿತ್ರವಿದೆ. ಚನ್ನಮ್ಮನವರ ಸ್ಮರಣಿಕೆ ಮತ್ತು ಪ್ರಶಸ್ತಿ ಪ್ರಮಾಣ ಪತ್ರವನ್ನು ಓಳಗೊಂಡಿದೆ.

ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ವೇದಾರಾಣಿ ದಾಸನೂರ ಅವರು, ಸ್ವಾಭಿಮಾನ ಮತ್ತು ಸ್ವತಂತ್ರ ಬದುಕಿಗೆ ಸದಾ ತನ್ನ ಜೀವನವನ್ನು ಮುಡಿಪಿಟ್ಟ ಕಿತ್ತೂರು ಚನ್ನಮ್ಮ ಸ್ತ್ರೀ ಕುಲದ ಅನಘ್ರ್ಯ ರತ್ನ. ಸರ್ವ ಸಮುದಾಯದ ಸೈನಿಕರನ್ನು ತನ್ನ ಸೇನೆಯಲ್ಲಿಟ್ಟುಕೊಂಡು ಬ್ರಿಟಿಷರ ವಿರುದ್ಧ ಹೋರಾಡಿದವಳು ಎಂದರು.

ADVERTISEMENT

ಸತತ 19 ವರ್ಷಗಳಿಂದ ಗೊಟಗೋಡಿ ಉತ್ಸವ ರಾಕ್ ಗಾರ್ಡನ್ ನಿರ್ಮಿಸುವಲ್ಲಿ ಶ್ರಮಿಸಿರುವೆ. ಇಲ್ಲಿಯ ಶಿಲ್ಪಕಲಾ ತರಬೇತಿ ಕೇಂದ್ರದ ಕಲಾ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡಿರುವೆ. ನನ್ನ ಕಲಾ ಸೇವೆಯನ್ನು ಪರಿಗಣಿಸಿ ಈ ಪ್ರಶಸ್ತಿ ನೀಡಿರುವ ಹರ ಜಾತ್ರಾ ಮಹೋತ್ಸವದ ಸರ್ವರಿಗೂ ಆಭಾರಿಯಾಗಿರುವೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.