ADVERTISEMENT

ಶಿಗ್ಗಾವಿ: ನಾಗರಮೂರ್ತಿಗೆ ಹಿಂದೂ, ಮುಸ್ಲಿಮರ ವಿಶೇಷ ಪೂಜೆ

​ಪ್ರಜಾವಾಣಿ ವಾರ್ತೆ
Published 14 ಆಗಸ್ಟ್ 2021, 5:47 IST
Last Updated 14 ಆಗಸ್ಟ್ 2021, 5:47 IST
ಶಿಗ್ಗಾವಿ ಪಟ್ಟಣದ ತಾಲ್ಲೂಕು ಪಂಚಾಯ್ತಿ ಆವರಣದಲ್ಲಿನ ನಾಗರಮೂರ್ತಿಗೆ ಶುಕ್ರವಾರ ಹಿಂದು, ಮುಸ್ಲಿಮರು ಸೇರಿ ಪೂಜೆ ಸಲ್ಲಿಸಿದರು
ಶಿಗ್ಗಾವಿ ಪಟ್ಟಣದ ತಾಲ್ಲೂಕು ಪಂಚಾಯ್ತಿ ಆವರಣದಲ್ಲಿನ ನಾಗರಮೂರ್ತಿಗೆ ಶುಕ್ರವಾರ ಹಿಂದು, ಮುಸ್ಲಿಮರು ಸೇರಿ ಪೂಜೆ ಸಲ್ಲಿಸಿದರು   

ಶಿಗ್ಗಾವಿ: ಪಟ್ಟಣದ ತಾಲ್ಲೂಕು ಪಂಚಾಯ್ತಿ ಆವರಣದಲ್ಲಿನ ನಾಗರಮೂರ್ತಿಗೆ ಶುಕ್ರವಾರ ಹಿಂದೂ, ಮುಸ್ಲಿಮರು ಸೇರಿ ವಿಶೇಷ ಪೂಜೆ ಸಲ್ಲಿಸಿದರು.

ಮುಸ್ಲಿಂ ಸಮಾಜದ ಮುಖಂಡ, ರಾಯಲ್ ಹೋಟೆಲ್ ಮಾಲೀಕ ಜಿಲಾನಿ ಬನ್ನಿಮಟ್ಟಿ ಮಾತನಾಡಿ, ‘ದೇವರು ಒಬ್ಬನೇ ನಾಮ ಹಲವು. ಅದನ್ನು ಅರಿತುಕೊಂಡು ನಡೆಯುವುದು ಪ್ರತಿಯೊಬ್ಬರ ಕರ್ತವ್ಯ‌. ಧರ್ಮ, ಜಾತಿ, ಜನಾಂಗ, ಪೂಜಿಸುವ ವಿಧಗಳು ಬೇರೆ. ಆದರೆ ಪೂಜೆಯ ಭಾವನೆ ಮತ್ತು ಅರಿಕೆ ಒಂದೇ ಆಗಿದೆ’ ಎಂದರು. ‘ಹೀಗಾಗಿ ಹಬ್ಬ ಹರಿದಿನಗಳು ಸರ್ವ ಸಮುದಾಯಗಳು ಒಂದಾಗಿ ಸಮಾನತೆ ತರಲಿ. ಮನುಕುಲ ಶಾಂತಿ, ನೆಮ್ಮದಿಯಿಂದ ಬಾಳಿಲಿ ಎಂಬ ಆಸೆಯೊಂದಿಗೆ ಸ್ನೇಹಿತರೊಂದಿಗೆ ನಾಗರ ಮೂರ್ತಿಗೆ ಹಾಲು ಎರೆದು, ಹೂಹಣ್ಣು ಕಾಯಿಗಳಿಂದ ಪೂಜೆ ಸಲ್ಲಿಸಿದ ನಂತರ ಹತ್ತಿರದ ಹನುಮಂತ ದೇವರಿಗೆ ಪೂಜೆ ಸಲ್ಲಿಸಿದ್ದೇವೆ’ ಎಂದರು. ಕಾಸಿಂ ನೀರಮನಿ, ಮಲ್ಲಿಕ್ ಸುಲ್ತಾನಪುರ, ಕುಮಾರ ಹರ್ತಿ, ಹನುಮಂತಪ್ಪ, ಮುತ್ತಣ್ಣ ಬೆಂಚಳ್ಳಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT