ADVERTISEMENT

ಪ್ರಜಾವಾಣಿ ಕೊರೊನಾ ಸೇನಾನಿಗಳು 2021: ಹಾವೇರಿಯ ಎಎಸ್ಐ ಎನ್.ವೈ.ಮಾಳಗಿ

​ಪ್ರಜಾವಾಣಿ ವಾರ್ತೆ
Published 31 ಡಿಸೆಂಬರ್ 2020, 19:30 IST
Last Updated 31 ಡಿಸೆಂಬರ್ 2020, 19:30 IST
ಲಾಕ್‌ಡೌನ್‌ ಸಂದರ್ಭದಲ್ಲಿ ಕರ್ತವ್ಯನಿರತರಾಗಿರುವ ಕುಮಾರಪಟ್ಟಣ ಪೊಲೀಸ್‌ ಠಾಣೆಯ ಎಎಸ್‌ಐ ಎನ್‌.ವೈ.ಮಾಳಗಿ
ಲಾಕ್‌ಡೌನ್‌ ಸಂದರ್ಭದಲ್ಲಿ ಕರ್ತವ್ಯನಿರತರಾಗಿರುವ ಕುಮಾರಪಟ್ಟಣ ಪೊಲೀಸ್‌ ಠಾಣೆಯ ಎಎಸ್‌ಐ ಎನ್‌.ವೈ.ಮಾಳಗಿ   

ಚಿಕ್ಕ ವಯಸ್ಸಿನಿಂದಲೂ ಜನಸೇವೆ ಮಾಡುವಹಂಬಲ ಇತ್ತು. ಹೀಗಾಗಿ 1993ರಲ್ಲಿ ಪೊಲೀಸ್ ಇಲಾಖೆಗೆ ಸೇರಿದ ನನಗೆ ಕೋವಿಡ್ ಸಂದರ್ಭದಲ್ಲಿ ಜನರ ಜೊತೆಗಿದ್ದು, ಕೆಲಸ ಮಾಡುವ ಅವಕಾಶ ಸಿಕ್ಕಿದ್ದು ಪೂರ್ವ ಜನ್ಮದ ಪುಣ್ಯ ಎಂದು ಭಾವಿಸಿದ್ದೇನೆ.

ಕೋವಿಡ್ ಸಂಕಷ್ಟದಲ್ಲಿ ಯೋಧರಂತೆ ಸ್ವಾರ್ಥ ಮರೆತು ಕುಮಾರಪಟ್ಟಣ ಠಾಣಾ ವ್ಯಾಪ್ತಿಯಲ್ಲಿ 11 ಹಳ್ಳಿಗಳಿಗೆ ಭೇಟಿ ನೀಡಿದ್ದೇನೆ. ಸೋಂಕಿನ ಭೀತಿಯಲ್ಲಿ ಒಬ್ಬರನ್ನೊಬ್ಬರು ಕಂಡರೆ ಮಾರು ದೂರ ಸರಿಯುತ್ತಿದ್ದ ಸಮಯದಲ್ಲೂ ಜನರಲ್ಲಿ ಸೋಂಕಿನ ಬಗ್ಗೆ ಜಾಗೃತಿ ಹಾಗೂ ಭಯ ಹೋಗಲಾಡಿಸುವ ಕೆಲಸ ಮಾಡಿದ್ದೇನೆ. ಸೋಂಕು ಹೆಚ್ಚಾಗಿ ಹರಡುತ್ತಿರುವ ಸಮಯದಲ್ಲಿ ಮಾಕನೂರು ಕ್ರಾಸ್ (ಎನ್ಎಚ್-4) ನಲ್ಲಿ ಸ್ಥಾಪಿಸಿದ್ದ ತಪಾಸಣಾ ಕೇಂದ್ರದಲ್ಲಿ ಹಗಲಿರುಳು ಶ್ರಮಿಸಿದ್ದೇನೆ. ಹಸಿದವರಿಗೆ ಅನ್ನದಾನಿಗಳ ಮೂಲಕ ಅನ್ನ, ನೀರು, ಮಾಸ್ಕ್ ಜನರಿಗೆ ದೊರೆಯುವಂತೆ ಮಾಡಲಾಗಿದೆ.

ಎಎಸ್ಐ ಎನ್‌.ವೈ.ಮಾಳಗಿ

ಠಾಣೆಯಲ್ಲಿ ಸೋಂಕು ಕಾಣಿಸಿಕೊಂಡಾಗ ಆತಂಕ ಉಂಟಾಗಿತ್ತು. ಕುಟುಂಬಕ್ಕೆ ತೊಂದರೆ ಆಗದಿರಲೆಂದು ಸಮವಸ್ತ್ರ, ಶೂಗಳನ್ನು ಮನೆ ಹೊರಗಡೆ ಇಡುತ್ತಿದ್ದೆ. ದೂರದಿಂದಲೇ ಮಾತಾಡಿ ಬರುತ್ತಿದ್ದೆ. ಎಷ್ಟೋ ಬಾರಿ ನಿದ್ರೆಯಿಲ್ಲದ ರಾತ್ರಿಗಳನ್ನು ಕಳೆದಿದ್ದೇನೆ. ಮುಂಡರಗಿ, ಹಂಸಭಾವಿ, ಸವಣೂರು, ರಾಣೆಬೆನ್ನೂರು ಹಾಗೂ ಕುಮಾರಪಟ್ಟಣದಲ್ಲಿ ವಿವಿಧ ಹಂತದ ಹುದ್ದೆ ನಿರ್ವಹಿಸಿದ್ದೇನೆ.

ADVERTISEMENT

–ಎನ್.ವೈ.ಮಾಳಗಿ, ಎಎಸ್ಐ, ಕುಮಾರಪಟ್ಟಣ ಪೊಲೀಸ್‌ ಠಾಣೆ, ಹಾವೇರಿ ಜಿಲ್ಲೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.