ADVERTISEMENT

ಹಿರೇಕೆರೂರು | ಜೋತು ಬಿದ್ದ ಆಲದ ಮರದ ಬೇರುಗಳು; ವಾಹನ ಸಂಚಾರಕ್ಕೆ ಅಡಚಣೆ

ಶಂಕರ ಕೊಪ್ಪದ
Published 29 ಅಕ್ಟೋಬರ್ 2024, 5:03 IST
Last Updated 29 ಅಕ್ಟೋಬರ್ 2024, 5:03 IST
<div class="paragraphs"><p>ಹಿರೇಕೆರೂರು:ತಾಲ್ಲೂಕಿನ ದೂದಿಹಳ್ಳಿ ಗ್ರಾಮಕ್ಕೆ ಹಾಗೂ ಮಾಸೂರು ಗ್ರಾಮಕ್ಕೆ ಸಂಪರ್ಕಿಸುವ ರಸ್ತೆ ಪಕ್ಕದಲ್ಲಿ ಬೆಳೆದು ನಿಂತಿರುವ ಬೃಹತ್ ಆಲದಮರ ಬಿಳು ಸ್ಥಿತಿಯಲ್ಲಿ ಇರುವುದು.</p></div>

ಹಿರೇಕೆರೂರು:ತಾಲ್ಲೂಕಿನ ದೂದಿಹಳ್ಳಿ ಗ್ರಾಮಕ್ಕೆ ಹಾಗೂ ಮಾಸೂರು ಗ್ರಾಮಕ್ಕೆ ಸಂಪರ್ಕಿಸುವ ರಸ್ತೆ ಪಕ್ಕದಲ್ಲಿ ಬೆಳೆದು ನಿಂತಿರುವ ಬೃಹತ್ ಆಲದಮರ ಬಿಳು ಸ್ಥಿತಿಯಲ್ಲಿ ಇರುವುದು.

   

ಪ್ರಜಾವಾಣಿ ಚಿತ್ರ

ಹಿರೇಕೆರೂರು: ಪಟ್ಟಣಕ್ಕೆ ಸಂಪರ್ಕಿಸುವ ರಸ್ತೆಯ ಅಕ್ಕಪಕ್ಕದಲ್ಲಿ ಬೆಳೆದು ನಿಂತಿರುವ ಆಲದ ಮರಗಳ ಬೇರುಗಳು ರಸ್ತೆಗೆ ಜೋತು ಬಿದ್ದು ಹಿರೇಕೆರೂರು-ಮಾಸೂರ ಹಿರೇಕೆರೂರು-ಹಂಸಬಾವಿ ಹಾಗೂ ಕೋಡ-ಹಿರೇಕೆರೂರು ಮಾರ್ಗದ ವಾಹನಗಳ ಸಂಚಾರಕ್ಕೆ ಅಡಚಣೆ ಉಂಟಾಗುತ್ತಿದೆ.

ADVERTISEMENT

ಹಿರೇಕೆರೂರು ಪಟ್ಟಣದಿಂದ ಮಾಸೂರ ಸಂಪರ್ಕದ 14 ಕಿ.ಮಿ ಉದ್ದ ರಸ್ತೆ, ಹಿರೇಕೆರೂರು-ಹಂಸಬಾವಿ ಹಾಗೂ ಕೋಡ-ಹಿರೇಕೆರೂರು ರಸ್ತೆಯ ಉದ್ದಗಲಕ್ಕೂ ದೊಡ್ಡ ದೊಡ್ಡ ಆಲದ ಮರಗಳು ಬೆಳೆದು ನಿಂತಿವೆ. ಬೆಳೆದು ನಿಂತಿರುವ ಆಲದ ಮರಗಳ ಬೇರುಗಳು ಮರದ ತುದಿಯಿಂದ ನೇರವಾಗಿ ರಸ್ತೆಯ ಪಕ್ಕಕ್ಕೆ ಜೋತು ಬಿದ್ದಿವೆ.ಹೀಗೆ ಜೋತು ಬಿದ್ದಿರುವ ಮರದ ಬೇರುಗಳು ಈ ರಸ್ತೆಯ ಮೇಲಿನ ಸಂಚಾರಿಸುವ ವಾಹನಗಳ ಸಂಚಾರಕ್ಕೆ ಅಡಚಣೆಯಾಗುತ್ತಿವೆ. ರಸ್ತೆಗಳು ಸಹ ಇಕ್ಕಟ್ಟಾಗಿರುವುದರಿಂದ ಎದುರು ಬದರು ಬರುವ ವಾಹನಗಳಿಗೆ ಪಕ್ಕಕ್ಕೆ ಸರಿಯಲು ಸ್ಥಳವೇ ಇಲ್ಲದಂತಾಗಿದೆ.

ಮಾಸೂರ, ತಿಪ್ಪಾಯಿಕೊಪ್ಪ, ಕೋಡಮಗ್ಗಿ, ಅಣಜಿ,ಹಳ್ಳೂರ, ಚಟ್ನಳ್ಳಿ,ಕಮಲಾಪುರ, ಗುಡ್ಡದಮಾದಾಪುರ, ಹೊಸ ವೀರಾಪುರ, ಹಳೇವೀರಾಪುರ, ರಾಮತೀರ್ಥ, ಹಿರೇಮೊರಬ, ಖಂಡೆಬಾಗೂರ, ತಡಕನಹಳ್ಳಿ, ಎಂ.ಎಂ.ಎತ್ತಿನಹಳ್ಳಿ, ಮೇದೂರ,ಹೊಸಕಟ್ಟಿ, ಅಂಗರಗಟ್ಟಿ, ನಾಗವಂದ, ಹಿರೇಕಬ್ಬಾರ, ಚಿಕ್ಕಬ್ಬಾರ ಸೇರಿದಂತೆ ಗ್ರಾಮಗಳ ಜನರುಪ್ರತಿನಿತ್ಯ ಮಾಸೂರು ಮಾರ್ಗವಾಗಿ ಹಿರೇಕೆರೂರು ಪಟ್ಟಣಕ್ಕೆ ಬರುತ್ತಾರೆ.

ಬೀಳುವ ಸ್ಥಿತಿಯಲ್ಲಿ ನಿಂತ ಮರಗಳು:

ತಾಲ್ಲೂಕಿನ ದೂದಿಹಳ್ಳಿ ಗ್ರಾಮದ ಹೊರವಲಯದಲ್ಲಿ ಮಾಸೂರು ರಸ್ತೆಯಲ್ಲಿ ಆಲದ ಮರವೊಂದು ಆಗೊ ಈಗೋ ಬೀಳುವ ಸ್ಥಿತಿಯಲ್ಲಿದ್ದು ಜನರು ಭಯದ ಭೀತಿಯಿಂದ ಓಡಾಡುವ ಪರಿಸ್ಥಿತಿ ಇದೆ. ಮಾಸೂರು ಸಂಪರ್ಕಿಸುವ ಈ ರಸ್ತೆ ಮಾರ್ಗದಲ್ಲಿ ದಿನನಿತ್ಯ ಲಾರಿ, ಬಸ್, ದ್ವಿಚಕ್ರ ವಾಹನಗಳು, ಆಟೊ ಸೇರಿದಂತೆ ಅನೇಕ ರೀತಿಯ ನೂರಾರು ವಾಹನಗಳು ಓಡಾಡುತ್ತಿದ್ದು ಯಾವ ಸಮಯದಲ್ಲಿ ಮರ ಬೀಳುತ್ತೆ ಎಂಬ ಭಯದಿಂದ ಸಾರ್ವಜನಿಕರು ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

ಕೆಲವು ದಿನಗಳ ಹಿಂದೆ ಹಿರೇಕೆರೂರು ಪಟ್ಟಣದಿಂದ ಮಾಸೂರು ಕಡೆ ದ್ವಿಚಕ್ರ ವಾಹನದಲ್ಲಿ ಹೋಗುತ್ತಿರುವಾಗ ಮರ ಬಿದ್ದು ಇಬ್ಬರು ಯುವಕರು ಮೃತಪಟ್ಟು ಒಬ್ಬ ಗಾಯಗೊಂಡಿದ್ದರು. ಆದರೂ ಎಚ್ಚೆತ್ತುಕೊಳ್ಳದ ಅರಣ್ಯ ಇಲಾಖೆ ಹಾಗೂ‌ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಬೀಳುವ ಸ್ಥಿತಿಯಲ್ಲಿ ಇರುವ ಮರಗಳನ್ನು ತೆರವುಗೊಳಿಸಲು ಅಧಿಕಾರಿಗಳು ಗಮನ ಹರಿಸುತ್ತಿಲ್ಲ ಎಂದು ವಾಹನ ಸವಾರರೊಬ್ಬರು ಆಕ್ರೋಶ ವ್ಯಕ್ತಪಡಿಸಿದರು.

ಮರ ಬಿದ್ದು ಇಬ್ಬರು ಮೃತಪಟ್ಟ ನಂತರ ಹೆಸ್ಕಾಂ, ಅರಣ್ಯ ಇಲಾಖೆ, ಸೇರಿಕೊಂಡು ಕೆಲವು ಮರಗಳನ್ನು ತೆರವುಗೊಳಿಸಿದ್ದಾರೆ. ಆದರೆ ಆಲದ ಮರಗಳನ್ನು ತೆರವುಗೊಳಿಸಿಲ್ಲ. ಈ ಆಲದ ಮರಗಳಿಂದ ಸಂಚಾರಕ್ಕೆ ಸಮಸ್ಯೆ ಆಗುತ್ತಿದೆ.

ಎದುರು ಬದುರು ವಾಹನಗಳು ಬಂದರೆ ರಸ್ತೆ ಪಕ್ಕ ಸರಿಯಲು ಜಾಗವಿಲ್ಲ, ಇದರಲ್ಲಿ ಕೆಲವು ಮರಗಳು ಈಗಲೂ ಆಗೊಲೋ ಬಿಳುವ ಸ್ಥಿತಿಯಲ್ಲಿ ಇವೆ ಸಂಬಂಧಿಸಿದ ಅಧಿಕಾರಿಗಳು ಅಪಘಾತಕ್ಕೆ ಮುನ್ನವೇ ಎಚ್ಚೆತ್ತು ಮರಗಳನ್ನು ತೆರವುಗೊಳಿಸುವ ಕಾರ್ಯ ಮಾಡಬೇಕು.
ಈರಣ್ಣ ಬಣಕಾರ, ಬೈಕ್ ಸವಾರ

ಹಿರೇಕೆರೂರು:ತಾಲ್ಲೂಕಿನ ತಾವರಗಿ ಗ್ರಾಮದಿಂದ ಕೋಡ ಗ್ರಾಮಕ್ಕೆ ಸಂಪರ್ಕಿಸು ರಸ್ತೆಯ ಪಕ್ಕದಲ್ಲಿ ಬೆಳೆದಿರುವ ಆಲದ ಮರದ ಬೇರುಗಳಿಂದ ಎದರು-ಬದರು ಬರುವ ವಾಹನಗಳ ಸಂಚಾರಕ್ಕೆ ಅಡಚಣೆ ಉಂಟಾಗಿರುವುದು.-ಪ್ರಜಾವಾಣಿ ಚಿತ್ರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.