
ರಾಣೆಬೆನ್ನೂರು: ಆಧುನಿಕತೆಯಿಂದಾಗಿ ಗ್ರಾಮೀಣ ಕ್ರೀಡೆಗಳು ಮರೆಮಾಚುತ್ತಿವೆ. ಗ್ರಾಮೀಣ ತಂಡಗಳನ್ನು ಮರು ಸೃಷ್ಟಿಸಿ ಗ್ರಾಮೀಣ ಯುವ ಕ್ರೀಡಾ ಪ್ರತಿಭೆಗಳನ್ನು ಹೊರತಂದು ಪ್ರೋತ್ಸಾಹಿಸಬೇಕಾಗಿದೆ ಎಂದು ಮಾಜಿ ಶಾಸಕ ಅರುಣಕುಮಾರ ಪೂಜಾರ ಹೇಳಿದರು.
ತಾಲ್ಲೂಕಿನ ಹುಲಿಕಟ್ಟಿ ಗ್ರಾಮದಲ್ಲಿ ರಾಯಣ್ಣ ಬಾಯ್ಸ್ ಟೀಮ್ ನಿಂದ ಪ್ರಥಮ ಬಾರಿಗೆ ಹಾಗೂ ಹಾವೇರಿ ಜಿಲ್ಲಾ ಆಮೇಚೋರ್ ಕಬಡ್ಡಿ ಸಂಸ್ಥೆ ಆಶ್ರಯದಲ್ಲಿ ಶನಿವಾರ ಏರ್ಪಡಿಸಿದ್ದ ಕಬಡ್ಡಿ ಪಂದ್ಯಾವಳಿಗೆ ಚಾಲನೆ ನೀಡಿ ಅವರು ಮಾತನಾಡಿದರು.
ಕ್ರೀಡೆ ಮತ್ತು ಸಾಂಸ್ಕೃತಿಕವಾಗಿ ಯಾವ ಪ್ರದೇಶ ಮುಂದುವರೆಯುತ್ತದೊ ಅಂತಹ ಊರು ವಾಣಿಜ್ಯ ಮತ್ತು ಆರ್ಥಿಕವಾಗಿ ಶಕ್ತಿಶಾಲಿ ಆಗಲಿದೆ ಎಂದರು.
ಗ್ರಾಮ ಪಂಚಾಯಿತಿ ಸದಸ್ಯೆ ಶಿಲ್ಪಾ ಪರಶುರಾಮ ಭಟ್ಟಂಗಿ, ಕರಿಯಪ್ಪ ಮಸಲಾಡದ, ಕೊಟ್ರೇಶ ಬಣಕಾರ, ಚಂದ್ರಪ್ಪ ಬಣಕಾರ, ಪರಶುರಾಮ ಭಟ್ಟಂಗಿ, ಚಂದ್ರಪ್ಪ ಭಟ್ಟಂಗಿ, ಚಂದ್ರುಶೇಖರ ಕುಡಪಲಿ, ಹುಚ್ಚಪ್ಪ ಕುಡಪಲಿ, ಹನುಮಂತ ಹೊಸಳ್ಳಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.