ADVERTISEMENT

ಲೈಂಗಿಕ ದೌರ್ಜನ್ಯ ಪ್ರಕರಣ: ನಿಷ್ಪಕ್ಷಪಾತ ತನಿಖೆ ನಡೆಸುವಂತೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 18 ಡಿಸೆಂಬರ್ 2025, 2:05 IST
Last Updated 18 ಡಿಸೆಂಬರ್ 2025, 2:05 IST
ಸವಣೂರಿನಲ್ಲಿ ಈಚೆಗೆ ನಡೆದ ಸರ್ಕಾರಿ ಉರ್ದು ಶಾಲೆಯ ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣ ಹಾಗೂ ಶಿಕ್ಷಕನ ಮೇಲಿನ ಹಲ್ಲೆ ಪ್ರಕರಣವನ್ನು ನಿಷ್ಪಕ್ಷಪಾತದಿಂದ ತನಿಖೆ ಕೈಗೊಂಡು ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಅಂಜುಮನ್ ಎ ಇಸ್ಲಾಂ ಸಮಿತಿ ಪದಾಧಿಕಾರಿಗಳು, ಸಾರ್ವಜನಿಕರು ಒತ್ತಾಯಿಸಿದರು 
ಸವಣೂರಿನಲ್ಲಿ ಈಚೆಗೆ ನಡೆದ ಸರ್ಕಾರಿ ಉರ್ದು ಶಾಲೆಯ ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣ ಹಾಗೂ ಶಿಕ್ಷಕನ ಮೇಲಿನ ಹಲ್ಲೆ ಪ್ರಕರಣವನ್ನು ನಿಷ್ಪಕ್ಷಪಾತದಿಂದ ತನಿಖೆ ಕೈಗೊಂಡು ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಅಂಜುಮನ್ ಎ ಇಸ್ಲಾಂ ಸಮಿತಿ ಪದಾಧಿಕಾರಿಗಳು, ಸಾರ್ವಜನಿಕರು ಒತ್ತಾಯಿಸಿದರು    

ಸವಣೂರು: ಸ್ಥಳೀಯ ಸರ್ಕಾರಿ ಉರ್ದು ಮಾದರಿ ಶಾಲೆಯ ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣ ಹಾಗೂ ಶಿಕ್ಷಕನ ಮೇಲಿನ ಹಲ್ಲೆ ಪ್ರಕರಣವನ್ನು ನಿಷ್ಪಕ್ಷಪಾತದಿಂದ ತನಿಖೆ ಕೈಗೊಂಡು ತಪ್ಪಿತಸ್ಥರ ವಿರುದ್ಧ ಕಠಿಣ ಶಿಕ್ಷೆ ನೀಡುವಂತೆ ಸವಣೂರು ಅಂಜುಮನ್ ಎ ಇಸ್ಲಾಂ ಸಮಿತಿ ಅಗ್ರಹಿಸಿದೆ.

ಈ ಕುರಿತು ಸವಣೂರು ಅಂಜುಮನ್ ಎ ಇಸ್ಲಾಂ ಸಮಿತಿ ಅಧ್ಯಕ್ಷ ಜೀಶಾನಖಾನ ಪಠಾಣ ನೇತೃತ್ವದಲ್ಲಿ ಪದಾಧಿಕಾರಿಗಳು ಪಟ್ಟಣದ ಪೋಲಿಸ್ ಠಾಣೆಯ ಅಧಿಕಾರಿಗೆ ಸೋಮವಾರ ಮನವಿ ಸಲ್ಲಿಸಿ, ಸರ್ಕಾರಿ ಉರ್ದು ಶಾಲೆಯ ಏಳು ಅಪ್ರಾಪ್ತೆ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಘಟನೆಗೆ ಸಂಬಂಧಿಸಿದಂತೆ ಆರೋಪಿ ಇಂಗ್ಲೀಷ್ ಶಿಕ್ಷಕ ಜಗದೀಶ ಮೇಲೆ ಪೋಕ್ಸೋ ಕಾಯ್ದೆ ಅಡಿ ಪ್ರಕರಣ ದಾಖಲಾಗಿದ್ದು, ಅದೇ ದಿನ ಆರೋಪಿ ಶಿಕ್ಷಕ ಜಗದೀಶ ಮೇಲೆ ಪೋಷಕರು ಮತ್ತು ಸಾರ್ವಜನಿಕರು ಸೇರಿ ಹಲ್ಲೆ ಮಾಡಿ ಕಾನೂನು ಕೈಗೆತ್ತಿಕೊಂಡಿದ್ದಾರೆ. ಪೋಲಿಸ್ ಇಲಾಖೆ ಸೂಕ್ತ ಕಾನೂನು ಕ್ರಮ ಕೈಗೊಂಡು ವಿದ್ಯಾರ್ಥಿನಿಯರಿಗೆ ನ್ಯಾಯ ಒದಗಿಸಬೇಕು. ಆರೋಪಿ ಶಿಕ್ಷಕನಿಗೆ ಮತ್ತು ಹಲ್ಲೆ ಮಾಡಿರುವ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ನೀಡಬೇಕು ಎಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ.

ಅಂಜುಮನ್-ಎ-ಇಸ್ಲಾಂ ಸಮಿತಿ ಉಪಾಧ್ಯಕ್ಷ ಯೂಸೂಫ್, ಕಾರ್ಯದರ್ಶಿ ಎನ್.ಕೆ.ಬನ್ನೂರ, ತಾಲ್ಲೂಕು ಶಿಕ್ಷಣ ಸುಧಾರಣಾ ಸಮಿತಿ ಸದಸ್ಯ ಅಬ್ದುಲಖಾನ್ ಸಂಶಿ, ಮುಖಂಡರಾದ ಬಾಬು ಫರಾಶ, ಅಲ್ಲಾವುದ್ದೀನ್ ಮನಿಯಾರ, ಎಂ.ಕೆ.ಪಠಾಣ, ಇಸಾಕಅಹ್ಮದ ಪಠಾಣ, ಸಿಖಂದರ್ ಹತ್ತೇವಾಲೆ, ತನ್ವೀರ್ ಗವಾರಿ, ಇಮ್ತಿಯಾಜ್ ಲಾಲ ಮೋಮಿನ್‌, ಖಲಂದರ ಅಕ್ಕೂರ, ಅಲ್ತಾಫ ಬೇಪಾರಿ ಸೇರಿದಂತೆ ಮುಸ್ಲಿಂ ಸಮಾಜ ಬಾಂಧವರು ಇದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.