
ರಾಣೆಬೆನ್ನೂರು: ನಮ್ಮ ಸಾಂಸ್ಕೃತಿಕ ಪರಂಪರೆಯ ಹಿನ್ನೆಲೆ ಇರುವ ಕ್ರೀಡೆಗಳಿಗೆ ದೈಹಿಕ ಸಾಮರ್ಥ್ಯದ ಜೊತೆ ಕೌಶಲವೂ ಅಗತ್ಯ ಎಂದು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ವಿರೇಶ ಮೋಟಗಿ ಹೇಳಿದರು.
ಇಲ್ಲಿನ ಆರ್‌ಟಿಇಎಸ್ ಕಾಲೇಜಿನ ಮೈದಾನದಲ್ಲಿ ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿ, ಕ್ಷೇತ್ರ ಶಿಕ್ಷಣಾಧಿಕಾರಿ ಕಾರ್ಯಾಲಯ, ರಾಜ್ಯ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಆಶ್ರಯದಲ್ಲಿ ಈಚೆಗೆ ನಡೆದ ಶಾಲಾ ಶಿಕ್ಷಣ ಇಲಾಖೆ, 14 ವಯೋಮಾನದ ಪ್ರಾಥಮಿಕ ಮತ್ತು 17 ವಯೋಮಾನದ ಪ್ರೌಢಶಾಲೆ ವಿದ್ಯಾರ್ಥಿಗಳ ತಾಲ್ಲೂಕು ಮಟ್ಟದ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ನಗರಸಭೆ ಮಾಜಿ ಅಧ್ಯಕ್ಷೆ ಚಂಪಕಾ ಬಿಸಲಹಳ್ಳಿ ಕ್ರೀಡಾ ಜ್ಯೋತಿ ಸ್ವಾಗತಿಸಿದರು. ಇದೇ ಸಂದರ್ಭದಲ್ಲಿ ನಿವೃತ್ತಿ ಹೊಂದಿದ ದೈಹಿಕ ಶಿಕ್ಷಣ ಶಿಕ್ಷಕರನ್ನು ಸನ್ಮಾನಿಸಲಾಯಿತು.
ಕ್ಷೇತ್ರ ಶಿಕ್ಷಣಾಧಿಕಾರಿ ಶಾಮಸುಂದರ ಅಡಿಗ ಮತ್ತು ಕ್ಷೇತ್ರ ಸಮನ್ವಾಧಿಕಾರಿ ಮಂಜುನಾಯಕ.ಎಲ್ ಮಾತನಾಡಿದರು. ಅಕ್ಷರ ದಾಸೋಯ ಸಹಾಯಕ ನಿರ್ದೇಶಕ ಸಿ.ವಿ.ಅಡಿವೇರ, ದೈಹಿಕ ಶಿಕ್ಷಣ ಅಧಿಕಾರಿ ಪ್ರಭಾಕರ ಚಿಂದಿ, ಸಿ.ಎಲ್. ಶಿಡಗನಾಳ, ಎಸ್.ಐ.ಅಡಿವೆಪ್ಪನವರ, ಚಂದ್ರಶೇಖರ ಗ್ಯಾನಗೌಡ್ರ, ನಾಗರಾಜ ನಲವಾಗಲ, ಕೃಷ್ಣರಡ್ಡಿ ಕೆಂಚರಡ್ಡಿ, ರಮೇಶ ಚಲವಾದಿ, ಎಂ.ಸಿ. ಬಲ್ಲೂರ, ವಿಮಲಾ ಶಿಡಗನಾಳ, ಸುನೀತಾ ಕಡ್ಲಿಗೊಂದಿ, ಶಂಕರ ಚಲವಾದಿ, ಕಾಂತೇಶ ಮಾದಾಪುರ, ಕುಮುದ ಎಸ್, ನಿರ್ಮಲಾ ಲಮಾಣಿ, ಹೆಚ್.ಎಂ.ಸುತಾರ, ರೇಣುಕಾ ಬಸೇನಾಯಕರ, ಹೇಮಂತ ಎಸ್.ಕೆ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.