ADVERTISEMENT

ಅಭಿವೃದ್ಧಿ ಕಾರ್ಯ ಮರೆತ ರಾಜ್ಯ ಸರ್ಕಾರ: ಮಾಜಿ ಸಚಿವ ಬಿ.ಸಿ. ಪಾಟೀಲ

​ಪ್ರಜಾವಾಣಿ ವಾರ್ತೆ
Published 29 ಡಿಸೆಂಬರ್ 2025, 3:09 IST
Last Updated 29 ಡಿಸೆಂಬರ್ 2025, 3:09 IST
ರಟ್ಟಿಹಳ್ಳಿ ತಾಲ್ಲೂಕಿನ ಹೊಸಕಟ್ಟಿ ಗ್ರಾಮದ ಮುಸ್ಲಿಂ ಸಮುದಾಯದವರು ಮಾಜಿ ಸಚಿವ ಬಿ.ಸಿ. ಪಾಟೀಲ ಅವರ ನೇತೃತ್ವದಲ್ಲಿ ಸೇರ್ಪಡೆಯಾದರು 
ರಟ್ಟಿಹಳ್ಳಿ ತಾಲ್ಲೂಕಿನ ಹೊಸಕಟ್ಟಿ ಗ್ರಾಮದ ಮುಸ್ಲಿಂ ಸಮುದಾಯದವರು ಮಾಜಿ ಸಚಿವ ಬಿ.ಸಿ. ಪಾಟೀಲ ಅವರ ನೇತೃತ್ವದಲ್ಲಿ ಸೇರ್ಪಡೆಯಾದರು    

ಹಿರೇಕೆರೂರ: ‘ಸಾರ್ವಜನಿಕರಿಗೆ ಸೌಲಭ್ಯ ಹಾಗೂ ರಾಜ್ಯದ ಅಭಿವೃದ್ಧಿ ಕಾರ್ಯ ಮರೆತಿರುವ ರಾಜ್ಯ ಸರ್ಕಾರ ನಾಯಕತ್ವದ ಕಿತ್ತಾಟದಲ್ಲಿ ನಿರತವಾಗಿದೆ’ ಎಂದು ಮಾಜಿ ಸಚಿವ ಬಿ.ಸಿ. ಪಾಟೀಲ ಆರೋಪಿಸಿದರು. 

ಪಟ್ಟಣದ ಗೃಹ ಕಚೇರಿಯಲ್ಲಿ ಶನಿವಾರ ಹೊಸಕಟ್ಟಿ ಗ್ರಾಮದ ಮುಸ್ಲಿಂ ಸಮುದಾಯದವರನ್ನು ಬಿಜೆಪಿ ಪಕ್ಷಕ್ಕೆ ಸ್ವಾಗತಿಸಿ ಮಾತನಾಡಿದ ಅವರು, ‘ರಾಜ್ಯದಲ್ಲಿ ಅಭಿವೃದ್ಧಿ ಕೆಲಸ ಕುಂಠಿತಗೊಂಡಿವೆ. ಜನತೆಗೆ ಬೆಲೆ ಏರಿಕೆ ಆರ್ಥಿಕ ಹೊರೆಯಾಗಿದೆ’ ಎಂದರು.

ಹೊಸಕಟ್ಟಿ ಗ್ರಾಮದ ಮಹ್ಮದ್ ರಫೀಕ್, ದಸ್ತಗಿರಿ ಬೆಳ್ಳುಡಿ, ಹದರತ್ತಲಿ ಶಿರಹಟ್ಟಿ, ಅಲ್ತಾಫ್ ಮಾಸೂರು, ಇರ್ಫಾನ್ ತುಮ್ಮಿನಕಟ್ಟಿ, ರಾಜಸಾಬ್ ಬ್ಯಾಡಗಿ, ಗೌಸ್‌ಮಾಸುರ್, ಸುಭಾನಿ ಕಮಲಾಪುರ, ಹುಸೇನ್‌ಸಾಬ್ ಗುಬ್ಬಿ, ಮಾಬೂಬಲೀಸಾ ಗುಬ್ಬಿ, ರಾಜಾಸಾಬ್ ಮಾಸುರ್, ತಬಾರಕ್ ಶಿರಹಟ್ಟಿ, ರಿಯಾಜ್ ಮೇದೂರ್ ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾದರು.

ADVERTISEMENT

ಹಿರೇಕೆರೂರು ಬಿಜೆಪಿ ಮಂಡಲದ ಅಧ್ಯಕ್ಷ ಸಂಜೀವಯ್ಯ ಕಬ್ಬಿಣಕಂತಿಮಠ, ಅಲ್ಪಸಂಖ್ಯಾತರ ಮೋರ್ಚಾ ಅಧ್ಯಕ್ಷ ರೆಹಾನ್ ಮಲ್ಲಿಕ್, ತಾ.ಪಂ. ಮಾಜಿ ಸದಸ್ಯ ಗೌಸಮೋದಿನಸಾಬ್ ತೋಟದ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.