
ಶಿಗ್ಗಾವಿ: ತಾಲ್ಲೂಕಿನ ಕೋಣನಕೇರಿ ಹತ್ತಿರದ ವಿ.ಐ.ಎನ್.ಪಿ ಡಿಸ್ಟಲರಿಸ್ ಮತ್ತು ಶುಗರ್ಸ್ ಕಂಪನಿಯ ಕಬ್ಬು ಬೆಳೆಗೆ ಬೆಲೆ ನಿಗದಿ ತಾರತಮ್ಯ ವಿರೋಧಿ ನೀತಿ ಖಂಡಿಸಿ ತಾಲ್ಲೂಕಿನ ಕಬ್ಬು ಬೆಳಗಾರ ರೈತ ಸಮೂಹ ನ.4ರಂದು ನಡೆಸುವ ಪ್ರತಿಭಟನೆಯನ್ನು ಕಂಪನಿ ಒಪ್ಪಂದದ ಹಿನ್ನೆಲೆಯಲ್ಲಿ ಹಿಂಪಡೆದಿದ್ದಾರೆ.
ತಾಲ್ಲೂಕಿನ ಕೋಣನಕೇರಿ ಗ್ರಾಮದ ಕಂಪನಿ ಕಚೇರಿ ಆವರಣದಲ್ಲಿ ಸೋಮವಾರ ನಡೆದ ಕಬ್ಬು ಬೆಳೆಗಾರ ರೈತರ ಸಭೆಯಲ್ಲಿ ಕಂಪನಿ ಮುಖ್ಯಸ್ಥ ವಿವೇಕ ಹೆಬ್ಬಾರ ಮಾತನಾಡಿದರು.
ಕಬ್ಬು ಬೆಳೆಗಾರ ರೈತರಿಗೆ ಅನ್ಯಾಯ ಆಗದಂತೆ ಪ್ರತಿ ಟನ್ ಕಬ್ಬಿಗೆ ₹ 2711 ನಿಗದಿ ಪಡಿಸಿದ್ದೇವೆ. ಅಲ್ಲದೆ ಕಬ್ಬು ಕಟಾವು ಮತ್ತು ಸರಬುರಾಜು ಬಾಡಿಗೆ ಹಣವನ್ನು ರೈತರಿಗೆ ನೀಡಲಾಗುವುದು. ಅದರಿಂದ ರೈತರಿಗೆ ಅನುಕೂಲವಾಗಲಿದೆ. ವಿನಃ ಯಾವುದೇ ರೀತಿಯ ತಾರತಮ್ಯ ಮಾಡುವುದಿಲ್ಲ. ಸರ್ವ ಕಬ್ಬು ಬೆಳೆಗಾರ ರೈತರಿಗೆ ನೆರವಾಗುತ್ತೇವೆ ಎಂಬ ಭರವಸೆ ನೀಡಿದರು. ಅದರಿಂದಾಗಿ ರೈತರು ತಮ್ಮ ಪ್ರತಿಭಟನೆ ಹಿಂಪಡೆದುಕೊಂಡರು.
ತಹಶೀಲ್ದಾರ್ ಯಲ್ಲಪ್ಪ ಗೋಣೆಣ್ಣವರ, ಡಿವೈಎಸ್.ಪಿ ಗುರುಶಾಂತಪ್ಪ, ಸಿಪಿಐ ಅನಿಲ ರಾಠೋಡ, ಬಂಕಾಪುರ ಪಿಎಸ್.ಐ ಮಂಜುನಾಥ ಕುರಿ, ಮುಖಂಡರಾದ ಹನುಮರಡ್ಡಿ ನಡುವಿನಮನಿ, ಚನ್ನಪ್ಪ ಬಿಂದ್ಲಿ, ಅಶೋಕ ದೊಡ್ಡಮನಿ, ಶಂಕರಗೌಡ ಪಾಟೀಲ, ನಾಗರಾಜ ಕೋಟಿ, ಷಣ್ಮುಖಪ್ಪ ಮೇಣಸಿನಕಾಯಿ, ಮಹಾವೀರ ಧಾರವಾಡ, ನಾಗರಾಜ ಸೂರಗೊಂಡ, ಮುತ್ತಣ್ಣ ವೀರಾಪುರ, ಬಾಹುಬಲಿ ಸೊಗಲಿ, ಸುದೀರ ಛಟ್ಟಿ, ನೀಲಕಂಠಗೌಡ ಪಾಟೀಲ, ಈರಣ್ಣ ಡವಗಿ, ಬಸವರಾಜ ಮಡಿವಾಳರ, ಸದಾನಂದ ಬಿಂಗಾಪುರ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.