ADVERTISEMENT

ಸ್ವೀಪ್‌ ಚಟುವಟಿಕೆ ಚುರುಕು: ಕಡಿಮೆ ಮತದಾನವಾದ ಮತಗಟ್ಟೆಗಳ ಬಗ್ಗೆ ಹೆಚ್ಚಿನ ಗಮನ

​ಪ್ರಜಾವಾಣಿ ವಾರ್ತೆ
Published 5 ಏಪ್ರಿಲ್ 2024, 15:48 IST
Last Updated 5 ಏಪ್ರಿಲ್ 2024, 15:48 IST
ಲೋಕಸಭಾ ಚುನಾವಣೆ ಅಂಗವಾಗಿ ರಾಣೆಬೆನ್ನೂರಿನ ನಗರಸಭೆ ವ್ಯಾಪ್ತಿಯಲ್ಲಿ ಕಡಿಮೆ ಮತದಾನವಾಗಿರುವ ಮತಗಟ್ಟೆ ಸಂಖ್ಯೆ 121, 122, 143 ಮತ್ತು 145 ಕೇಂದ್ರಗಳಲ್ಲಿ ಹಾಗೂ ಸಂಬಂಧಿಸಿದ ವಾರ್ಡ್‌ಗಳಲ್ಲಿ ಮತದಾನದ ಬಗ್ಗೆ ಜಾಗೃತಿ ಮೂಡಿಸಲಾಯಿತು
ಲೋಕಸಭಾ ಚುನಾವಣೆ ಅಂಗವಾಗಿ ರಾಣೆಬೆನ್ನೂರಿನ ನಗರಸಭೆ ವ್ಯಾಪ್ತಿಯಲ್ಲಿ ಕಡಿಮೆ ಮತದಾನವಾಗಿರುವ ಮತಗಟ್ಟೆ ಸಂಖ್ಯೆ 121, 122, 143 ಮತ್ತು 145 ಕೇಂದ್ರಗಳಲ್ಲಿ ಹಾಗೂ ಸಂಬಂಧಿಸಿದ ವಾರ್ಡ್‌ಗಳಲ್ಲಿ ಮತದಾನದ ಬಗ್ಗೆ ಜಾಗೃತಿ ಮೂಡಿಸಲಾಯಿತು    

ರಾಣೆಬೆನ್ನೂರು: ಲೋಕಸಭಾ ಚುನಾವಣೆಗೆ ಸಂಬಂಧಿಸಿದಂತೆ ಜನರಲ್ಲಿ ಮತದಾನದ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಜಿಲ್ಲಾ ಸ್ವೀಪ್‌ ಸಮಿತಿ, ಜಿಲ್ಲಾ ಪಂಚಾಯಿತಿ ಹಾವೇರಿ, ತಾಲ್ಲೂಕು ಆಡಳಿತ ಹಾಗೂ ನಗರಸಭೆ ಆಶ್ರಯದಲ್ಲಿ ವಿವಿಧ ಚಟುವಟಿಕೆಗಳನ್ನು ಚುರುಕುಗೊಳಿಸಿದೆ. ಈ ಬಾರಿ ಮತದಾರರನ್ನು ಮತಗಟ್ಟೆಗೆ ಸೆಳೆಯಲು ಅನೇಕ ಕಾರ್ಯಕ್ರಮಗಳನ್ನು ರೂಪಿಸಿದೆ.

ಜಾಥಾ, ಮಾನವ ಸರಪಳಿ, ಆಕರ್ಷಕ ರಂಗೋಲಿ ಬಿಡಿಸುವ ಮೂಲಕ ಮತದಾರರಲ್ಲಿ ಮತದಾನದ ಮಹತ್ವ ಕುರಿತು ಶುಕ್ರವಾರ ಜಾಗೃತಿ ಮೂಡಿಸಲಾಯಿತು.

ನಗರಸಭೆ ವ್ಯಾಪ್ತಿಯಲ್ಲಿ ಕಡಿಮೆ ಮತದಾನವಾಗಿರುವ ಮತಗಟ್ಟೆ ಸಂಖ್ಯೆ: 121, 122, 143 ಮತ್ತು 145 ಕೇಂದ್ರಗಳಲ್ಲಿ ಹಾಗೂ ಸಂಬಂಧಿಸಿದ ವಾರ್ಡ್‌ಗಳಲ್ಲಿ ಮತದಾನದ ಜಾಗೃತಿ ಕಾರ್ಯಕ್ರಮ ಮತ್ತು ಜಾಥಾ ನಡೆಸಿದರು. ಮೇ 7ರಂದು ತಪ್ಪದೇ ಮತದಾನ ಕೇಂದ್ರಕ್ಕೆ ಆಗಮಿಸಿ ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ಮಾಡಲು ಸಾರ್ವಜನಿಕರಲ್ಲಿ ನಗರಸಭೆಯ ಅಧಿಕಾರಿಗಳು ಹಾಗೂ ಬಿಎಲ್‌ಓ ಮನವಿ ಮಾಡಿದರು.

ADVERTISEMENT

ನಗರಸಭೆ ಸಹಾಯಕ ಎಂಜಿನಿಯರ್‌ ಮಂಜುನಾಥ ಅವರು ಮಾತನಾಡಿ, ‘ಈ ಚುನಾವಣೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮತದಾನವಾಗಬೇಕೆಂಬ ಆಶಯದಿಂದ ಪಟ್ಟಣ ಹಾಗೂ ತಾಲ್ಲೂಕಿನಾದ್ಯಂತ ಸ್ವೀಪ್‌ ಸಮಿತಿಯಿಂದ ವಿಭಿನ್ನವಾಗಿ ಸಾಕಷ್ಟು ಮತದಾನ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಮತದಾನ ದೇಶದ ಹಬ್ಬವಿದ್ದಂತೆ ಸದೃಢ ದೇಶ ನಿರ್ಮಾಣ ಮಾಡಲು ಯಾವುದೇ ಆಸೆ ಆಮಿಷಗಳಿಗೆ ಒಳಗಾಗದೇ ತಪ್ಪದೇ ಪ್ರತಿಯೊಬ್ಬರೂ ನಿರ್ಭೀತಿಯಿಂದ ಮತ ಚಲಾಯಿಸಿರಿ’ ಎಂದರು.

ನಗರಸಭೆ ಎಂಜಿನಿಯರ್‌ ಎಂ.ಎಸ್‌. ಗುಡಿಸಲಮನಿ, ಕಂದಾಯ ಅಧಿಕಾರಿ ಪಿ ವಸಂತ, ಕಚೇರಿ ವ್ಯವಸ್ಥಾಪಕ ಮಂಜುನಾಥ, ಪ್ರಭುದೇವ ಬಾಲೆಹೊಸೂರು, ಮಾಧವ ಸಾತೇನಹಳ್ಳಿ, ಮಾರುತಿ ಪಾಟೀಲ, ಅಬ್ದುಲ್‌ ಗಫಾರ್‌,  ಏಳುಕೋಟೆಪ್ಪ ಗೋಣಿಬಸಮ್ಮನವರ, ಹರೀಶ ಉದಗಟ್ಟಿ, ಗಣೇಶ ಪಾಸೀಗಾರ, ಆರೋಗ್ಯ ನಿರೀಕ್ಷಕರಾದ ಶ್ರುತಿ, ಮಧು ಕಂಬಳಿ, ರಾಘವೇಂದ್ರ ಗಾವಡೆ ಹಾಗೂ ಕುಸುಮಾ ದೈವಜ್ಞ, ವಿಜಯಲಕ್ಷ್ಮಿ, ಶಿಲ್ಪಾ ಪಿಶೆ, ಗಂಗಾ ಲಮಾಣಿ, ಪೂಜಾ ಗುಜ್ಜರ, ಜಯಮ್ಮ, ರೂಪಾ ದೈವಜ್ಞ ಮತ್ತು ವಿನಾಯಕನಗರ ಮತ್ತು ಮೃತ್ಯುಂಜಯನಗರದ ಮತದಾರರು ಭಾವಗಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.