ADVERTISEMENT

ಒಗ್ಗಟ್ಟು, ಸಮಾನತೆ ಭಾವ ಮೂಡಲಿ: ನಿಜಗುಣ ಶಿವಯೋಗಿ ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 8 ನವೆಂಬರ್ 2025, 4:25 IST
Last Updated 8 ನವೆಂಬರ್ 2025, 4:25 IST
ಶಿಗ್ಗಾವಿ ತಾಲ್ಲೂಕಿನ ನಾರಾಯಣಪುರ ಗ್ರಾಮದಲ್ಲಿ ಗುರುವಾರ ನಡೆದ ಧರ್ಮ ಸಮಾರಂಭದಲ್ಲಿ ವಿವಿಧ ಸಾಧಕರನ್ನು ಸನ್ಮಾನಿಸಲಾಯಿತು
ಶಿಗ್ಗಾವಿ ತಾಲ್ಲೂಕಿನ ನಾರಾಯಣಪುರ ಗ್ರಾಮದಲ್ಲಿ ಗುರುವಾರ ನಡೆದ ಧರ್ಮ ಸಮಾರಂಭದಲ್ಲಿ ವಿವಿಧ ಸಾಧಕರನ್ನು ಸನ್ಮಾನಿಸಲಾಯಿತು   

ಶಿಗ್ಗಾವಿ: ‘ಜಾತಿ, ಮತಗಳೆಂಬ ಕಂದಕ ಬಿಟ್ಟು ಸರ್ವರಲ್ಲಿ ಒಗ್ಗಟ್ಟು, ಸಮಾನತೆಯ ಮನೋಭಾವ ಮೂಡಬೇಕಿದೆ. ಅಂತಹ ಚಿಂತನೆ ಪ್ರತಿಯೊಬ್ಬರಲ್ಲೂ ಮೂಡಬೇಕು’ ಹತ್ತಿಮತ್ತೂರ ವಿರಕ್ತಮಠದ ನಿಜಗುಣ ಶಿವಯೋಗಿ ಸ್ವಾಮೀಜಿ ಹೇಳಿದರು.

ತಾಲ್ಲೂಕಿನ ನಾರಾಯಣಪುರ ಗ್ರಾಮದಲ್ಲಿ ಗುರುವಾರ ನಡೆದ ವಿರಕ್ತಮಠದ ನೂತನ ಸಭಾಭವನ ಉದ್ಘಾಟನೆ ಹಾಗೂ ಧರ್ಮ ಸಮಾರಂಭದಲ್ಲಿ ಮಾತನಾಡಿದರು.

‘ಜಾತಿ, ಮತಗಳ ಗೊಂದಲದಲ್ಲಿ ಬಿದ್ದು ನರಳುವುದನ್ನು ಬಿಡಬೇಕು. ಭಾರತೀಯರೆಲ್ಲ ಒಂದೇ ಎಂಬ ಮಂತ್ರ ಜಪಿಸಬೇಕು. ಧರ್ಮ ಪ್ರಧಾನವಾದ ಭಾರತದಲ್ಲಿ ಮಠ–ಮಂದಿರಗಳು ಮನುಕುಲಕ್ಕೆ ಜಾಗೃತಿ ಮೂಡಿಸುವ ಕೇಂದ್ರಗಳಾಗಿವೆ. ಅವುಗಳಿಂದ ಶಿಕ್ಷಣ ಕ್ರಾಂತಿ ಸಾಧ್ಯವಾಗಿದೆ’ ಎಂದರು.

ADVERTISEMENT

ಸಾನ್ನಿಧ್ಯ ವಹಿಸಿದ್ದ ಅರಳೆಲೆಮಠದ ರೇವಣಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ‘ಗುರುವಿನ ಸಂದೇಶ ಕೇಳಿ, ಪಾಲನೆ ಮಾಡಬೇಕು. ತಂದೆ–ತಾಯಿಯನ್ನು ಗೌರವಿಸಬೇಕು. ಅವರ ಪೋಷಣೆ ಮಾಡಬೇಕು. ಧರ್ಮದ ತಳಹದಿ ಮೇಲೆ ಬದುಕು ಸಾಗಿದಾಗ ಮಾತ್ರ ಉತ್ತಮ ಭವಿಷ್ಯ ನಮ್ಮದಾಗಲಿದೆ’ ಎಂದು ಹೇಳಿದರು.

ಬಸವಕೇಂದ್ರದ ಅಧ್ಯಕ್ಷ ರವಿ ಬಂಕಾಪುರ ಅಧ್ಯಕ್ಷತೆ ವಹಿಸಿದ್ದರು. ಹೊತ್ನಹಳ್ಳಿ ಶಂಭುಲಿಂಗ ಸ್ವಾಮೀಜಿ ಸಮ್ಮುಖ ವಹಿಸಿದ್ದರು. ಮುಖಂಡ ಶರಣಬಸಪ್ಪ ಕಿವುಡನವರ, ಗ್ರಾಮ ಪಂಚಾಯಿತಿ ಅಧ್ಯಕ್ಷ ಸಿದ್ದಲಿಂಗೆಶ್ವರ ಕಲಿವಾಳ ಮಾತನಾಡಿದರು.

ವಿಶ್ವನಾಥ ಕಂಬಾಳಿಮಠ, ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಲಕ್ಷ್ಮವ್ವ ವಾಲಿಕಾರ, ಬಸವರಾಜ ಕುರಗೋಡಿ, ಸುಭಾಸ ಮಸಳಿ, ಬಸವರಾಜ ಸವಣೂರ, ಚಂದ್ರು ಬಂಕಾಪುರ, ರಮೇಶ ಕಲಿವಾಳ, ವೀರಭದ್ರಯ್ಯ ಹಿರೇಮಠ, ಪ್ರಶಾಂತ ಮಸಳಿ, ಗೋವಿಂದ ಕುಲಕಣರ್ಿ, ಶಂಭಣ್ಣ ಚಿಗಳ್ಳಿ, ಎಸ್.ಎನ್. ಲಕ್ಷ್ಮೇಶ್ವರ ಇದ್ದರು. ಜಾನಪದ ಕಲಾವಿದ ಚನ್ನಬಸಪ್ಪ ಬೈಲವಾಳ ಅವರಿಂದ ಸಂಗೀತ ಕಾರ್ಯಕ್ರಮ ಜರುಗಿತು.

ಜವಾಬ್ದಾರಿ ಮತ್ತು ಕರ್ತವ್ಯ ನಿಭಾಯಿಸುವ ಸಾಮರ್ಥ್ಯ ಬೆಳೆಸಿಕೊಳ್ಳಬೇಕು. ಅದರಿಂದ ಸದೃಢ ಸಮಾಜ ನಿರ್ಮಾಣ ಸಾಧ್ಯವಿದೆ
–ನಿಜಗುಣ ಶಿವಯೋಗಿ ಸ್ವಾಮೀಜಿ, ಹತ್ತಿಮತ್ತೂರ ವಿರಕ್ತಮಠ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.