ADVERTISEMENT

ರಾಣೆಬೆನ್ನೂರು | ವೀರಭದ್ರೇಶ್ವರ ರಥೋತ್ಸವ: ಭಕ್ತರ ಸಡಗರ

​ಪ್ರಜಾವಾಣಿ ವಾರ್ತೆ
Published 21 ಫೆಬ್ರುವರಿ 2026, 2:57 IST
Last Updated 21 ಫೆಬ್ರುವರಿ 2026, 2:57 IST
ರಾಣೆಬೆನ್ನೂರಿನ ಮೃತ್ಯುಂಜಯ ನಗರದ ಭದ್ರಕಾಳಿ ಸಮೇತ ರಾಯಚೋಟಿ ವೀರಭದ್ರೇಶ್ವರ ದೇವರ ರಥೋತ್ಸವವು ಅದ್ದೂರಿಯಾಗಿ ಜರುಗಿತು 
ರಾಣೆಬೆನ್ನೂರಿನ ಮೃತ್ಯುಂಜಯ ನಗರದ ಭದ್ರಕಾಳಿ ಸಮೇತ ರಾಯಚೋಟಿ ವೀರಭದ್ರೇಶ್ವರ ದೇವರ ರಥೋತ್ಸವವು ಅದ್ದೂರಿಯಾಗಿ ಜರುಗಿತು    

ರಾಣೆಬೆನ್ನೂರು: ‘ಧಾರ್ಮಿಕ ಸಂಸ್ಕಾರದ ಅರಿವು ಜಾತ್ರೆ, ಉತ್ಸವಗಳಲ್ಲಿ ನಡೆಯುವ ಧಾರ್ಮಿಕ ಆಚರಣೆಯಿಂದ ಮನುಷ್ಯನಿಗೆ ನೆಮ್ಮದಿ ಲಭಿಸುತ್ತದೆ. ಪ್ರತಿಯೊಬ್ಬರೂ ಇಂತಹ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಬೇಕು’ ಎಂದು ನಿವೃತ್ತ ಪ್ರಾಧ್ಯಾಪಕ ಕೆ.ಎಂ. ಕಟಗಿಹಳ್ಳಿ ಹೇಳಿದರು.

ಇಲ್ಲಿನ ಮೃತ್ಯುಂಜಯ ನಗರದ ಭದ್ರಕಾಳಿ ಸಮೇತ ರಾಯಚೋಟಿ ವೀರಭದ್ರೇಶ್ವರ ಟ್ರಸ್ಟ್‌, ಮೃತ್ಯುಂಜಯ ಸಭಾಭವನದ ಆಡಳಿತ ಮಂಡಳಿ, ಬಾಲಾಂಜನೇಯ ಸ್ವಾಮಿ ದೇವಸ್ಥಾನದ ಸಮಿತಿ, ಚನ್ನೇಶ್ವರ ಮಠದ ಸಮಿತಿ ವತಿಯಿಂದ ಶುಕ್ರವಾರ ಹಮ್ಮಿಕೊಂಡಿದ್ದ ವೀರಭದ್ರೇಶ್ವರ ದೇವರ ಗುಗ್ಗಳ ಆರಾಧನಾ ಹಾಗೂ ದ್ವಿತೀಯ ವರ್ಷದ ರಥೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.

ಹೊನ್ನಾಳಿ ಹಿರೇಕಲ್ಮಠದ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ರಥೋತ್ಸವಕ್ಕೆ ಚಾಲನೆ ನೀಡಿದರು. ಪ್ರೊ.ಜಿ.ವಿ. ಕೋರಿ, ರುದ್ರಣ್ಣ ಕೊಟ್ಟೂರ, ಶಿವಪ್ಪ ಕೊಟೂರ, ಅಮೃತಗೌಡ ಹಿರೇಮಠ, ಈರಣ್ಣ ಎಲಿ, ಸೋಮನಾಥಯ್ಯ ಹಿರೇಮಠ, ಬಸವರಾಜಪ್ಪ ಕುರುವತ್ತಿ, ಬಸವರಾಜಪ್ಪ ಕುರುವತ್ತಿ, ರಾಜೇಂದ್ರಕುಮಾರ ತಿಳವಳ್ಳಿ, ಜಯಣ್ಣ ಚನ್ನಗೌಡ್ರ, ಓಂಕಾರೇಶ ಚಕ್ರಸಾಲಿ, ಮೃತ್ಯುಂಜಯ ತಿಳವಳ್ಳಿ, ಸಂಜಯ ಮಿರ್ಜಿ, ನೀಲಕಂಠಪ್ಪ ಕೋಟೂರ, ವಿನಕುಮಾರ ಪಟ್ಟಣಶೆಟ್ಟಿ, ಮೃತ್ಯುಂಜಯ ಪಾಟೀಲ, ಅಜೇಯ ತಾಳೂರ, ವಾಗೀಶ ಹಿರೇಮಠ, ಗಂಗಾಧರ ಹಲವಾಗಲ, ವೀರಭದ್ರಯ್ಯ ಪ್ಯಾಟಿಮಠ, ವಿಜಯಕುಮಾರ ಇಟಗಿ, ಕಮ್ಮಾರ, ಸುಮಂಗಲಾ ಪಾಟೀಲ ಇದ್ದರು.

ADVERTISEMENT

ಗುಗ್ಗಳ, ರಥೋತ್ಸವ: ಇಲ್ಲಿನ ಮೃತ್ಯುಂಜಯ ನಗರದ ವೀರಭದ್ರೇಶ್ವರ ದೇವರ ಗುಗ್ಗಳ ಆರಾಧನಾ ಹಾಗೂ ರಥೋತ್ಸವವು ಬೆಳಿಗ್ಗೆ ಚನ್ನೇಶ್ವರ ಮಠದಿಂದ ಆರಂಭವಾಗಿ ಪುರವಂತಿಕೆ, ವೀರಗಾಸೆ ಸೇರಿದಂತೆ ಮೃತ್ಯುಂಜಯನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ವೀರಭದ್ರೇಶ್ವರ ದೇವಸ್ಥಾನದಲ್ಲಿ ಸಂಪನ್ನಗೊಂಡಿತು. ನಂತರ ಭಕ್ತರಿಗೆ ಪ್ರಸಾದ ವಿತರಿಸಲಾಯಿತು. 

ರಾಣೆಬೆನ್ನೂರಿನ ಮೃತ್ಯುಂಜಯನಗರದ ಭದ್ರಕಾಳಿ ಸಮೇತ ರಾಯಚೋಟಿ ವೀರಭದ್ರೇಶ್ವರ ದೇವರ 21 ನೇ ವರ್ಷದ ಗುಗ್ಗಳ ಆರಾಧನಾ ಕಾರ್ಯಕ್ರಮ ಶ್ರದ್ಧಾ ಭಕ್ತಿಯಿಂದ ನಡೆಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.