ADVERTISEMENT

ಹಾವೇರಿ: ಬಟ್ಟೆ ತೊಳೆಯಲು ಹೋಗಿದ್ದ ಮಹಿಳೆ ತುಂಗಭದ್ರಾ ನದಿಯಲ್ಲಿ ತೇಲಿಹೋಗಿ ಪರದಾಟ

​ಪ್ರಜಾವಾಣಿ ವಾರ್ತೆ
Published 31 ಜುಲೈ 2025, 5:03 IST
Last Updated 31 ಜುಲೈ 2025, 5:03 IST
<div class="paragraphs"><p>ತುಂಗಭದ್ರಾ ನದಿಯ ನೀರಿನಲ್ಲಿ‌ ಸಿಲುಕಿದ್ದ ಮಹಿಳೆಯನ್ನು ರಕ್ಷಣೆ ಮಾಡಲಾಗಿದೆ.</p></div>

ತುಂಗಭದ್ರಾ ನದಿಯ ನೀರಿನಲ್ಲಿ‌ ಸಿಲುಕಿದ್ದ ಮಹಿಳೆಯನ್ನು ರಕ್ಷಣೆ ಮಾಡಲಾಗಿದೆ.

   

ಹಾವೇರಿ: ಜಿಲ್ಲೆಯ ರಾಣೆಬೆನ್ನೂರು ತಾಲ್ಲೂಕಿನ ಕೊಟ್ಟಿಹಾಳ ಬಳಿ ತುಂಗಭದ್ರಾ ನದಿಯ ನೀರಿನಲ್ಲಿ‌ ಸಿಲುಕಿದ್ದ ಮಹಿಳೆಯನ್ನು ರಕ್ಷಣೆ ಮಾಡಲಾಗಿದೆ.

ಗ್ರಾಮದ ಮಹಿಳೆಯೊಬ್ಬರು ಬಟ್ಟೆ ತೊಳೆಯಲು ಬುಧವಾರ ತುಂಗಭದ್ರಾ ನದಿಗೆ ಬಂದಿದ್ದರು. ನದಿಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿಯುತ್ತಿದೆ.

ADVERTISEMENT

ಬಟ್ಟೆ ತೊಳೆಯುವ ಸಂದರ್ಭದಲ್ಲಿ ಕಾಲು ಜಾರಿ ನದಿ ನೀರಿನಲ್ಲಿ ಬಿದ್ದಿದ್ದರು. ನೀರಿನಲ್ಲಿ ತೇಲಿಕೊಂಡು ಹೋಗಿದ್ದರು. ಅದೇ ನೀರಿನಲ್ಲಿ ಮರದ ಅವಶೇಷವಿತ್ತು. ಅದು ನದಿಯ ಮಧ್ಯದ ಕಲ್ಲಿನಲ್ಲಿ ಸಿಲುಕಿಕೊಂಡಿತ್ತು. ಅದೇ ಅವಶೇಷ ಹಿಡಿದುಕೊಂಡಿದ್ದ ಮಹಿಳೆ, ಇಡೀ ರಾತ್ರಿ ಅದೇ ಸ್ಥಳದಲ್ಲಿದ್ದರು.

ವಿಷಯ ತಿಳಿದ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ತಡರಾತ್ರಿಯಿಂದಲೇ ಕಾರ್ಯಾಚರಣೆ ಆರಂಭಿಸಿದ್ದರು. ಆದರೆ, ಕತ್ತಲು ಇದ್ದಿದ್ದರಿಂದ ರಕ್ಷಣೆಗೆ ಸಾಧ್ಯವಾಗಿರಲಿಲ್ಲ.

ಗುರುವಾರ ನಸುಕಿನಲ್ಲಿ ಕಾರ್ಯಾಚರಣೆ ನಡೆಸಿ ದೋಣಿ ಮೂಲಕ ಮಹಿಳೆಯನ್ನು ರಕ್ಷಿಸಿ ದಡಕ್ಕೆ ಕರೆತರಲಾಗಿದೆ. ಅಸ್ವಸ್ಥಗೊಂಡಿರುವ ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.