ADVERTISEMENT

ಪೈಪ್ ಕತ್ತರಿಸಿ ಕಂತೆ ಕಂತೆ ನೋಟು ತೆಗೆದ ಎಸಿಬಿ ಅಧಿಕಾರಿಗಳು!

​ಪ್ರಜಾವಾಣಿ ವಾರ್ತೆ
Published 24 ನವೆಂಬರ್ 2021, 15:45 IST
Last Updated 24 ನವೆಂಬರ್ 2021, 15:45 IST
ಶಾಂತಗೌಡ ಬಿರಾದಾರ (ಒಳಗಿನ ಚಿತ್ರದಲ್ಲಿ) ‌ಮನೆಯ ಪೈಪ್ ನಿಂದ ನೋಟುಗಳನ್ನು ಬಕೆಟ್ ನಲ್ಲಿ ಸಂಗ್ರಹಿಸುತ್ತಿರುವುದು.
ಶಾಂತಗೌಡ ಬಿರಾದಾರ (ಒಳಗಿನ ಚಿತ್ರದಲ್ಲಿ) ‌ಮನೆಯ ಪೈಪ್ ನಿಂದ ನೋಟುಗಳನ್ನು ಬಕೆಟ್ ನಲ್ಲಿ ಸಂಗ್ರಹಿಸುತ್ತಿರುವುದು.   

ಕಲಬುರಗಿ: ಇಲ್ಲಿನ ಗುಬ್ಬಿ ‌ಕಾಲೊನಿಯಲ್ಲಿರುವ ಲೋಕೋಪಯೋಗಿ ಇಲಾಖೆ ಜೇವರ್ಗಿ ಉಪ ವಿಭಾಗದ ಕಿರಿಯ ಎಂಜಿನಿಯರ್ ಶಾಂತಗೌಡ ಬಿರಾದಾರ ಅವರ ಮನೆಯ ಪೈಪ್ ಕತ್ತರಿಸಿ ಎಸಿಬಿ ಅಧಿಕಾರಿಗಳು ₹ 5 ಲಕ್ಷಕ್ಕೂ ಅಧಿಕ ಹಣದ ಕಟ್ಟುಗಳನ್ನು ಹೊರ ತೆಗೆದಿದ್ದಾರೆ.

ಬೆಳಿಗ್ಗೆ ‌7ಕ್ಕೆ ಶಾಂತಗೌಡ ಅವರಿಗೆ ಸೇರಿದ ಗುಬ್ಬಿ ಕಾಲೊನಿ ಮನೆ, ಯಡ್ರಾಮಿ ತಾಲ್ಲೂಕಿನ ಹಂಗರಗಾ (ಬಿ) ಗ್ರಾಮದಲ್ಲಿನ ತೋಟದ ಮನೆ ಹಾಗೂ ಜೇವರ್ಗಿ ಲೋಕೋಪಯೋಗಿ ‌ಕಚೇರಿ ಮೇಲೆ ಕಲಬುರಗಿ ಹಾಗೂ ಯಾದಗಿರಿ ಜಿಲ್ಲೆಯ ಅಧಿಕಾರಿಗಳ ತಂಡ ಎಸಿಬಿ ಈಶಾನ್ಯ ವಲಯದ ಎಸ್ಪಿ ಮಹೇಶ ಮೇಘಣ್ಣವರ ನೇತೃತ್ವದಲ್ಲಿ ದಾಳಿ ನಡೆಸಿದೆ.

ಗುಬ್ಬಿ ಕಾಲೊನಿ ಮನೆಯ ತಿಜೋರಿ, ಬೆಡ್ ರೂಮ್ ಜಾಲಾಡಿದ ತಂಡಕ್ಕೆ ಪ್ಲಂಬಿಂಗ್ ಪೈಪ್‌ನಲ್ಲಿ ಹಣ ಇರುವ ಬಗ್ಗೆ ಮಾಹಿತಿ ಸಿಕ್ಕಿದೆ. ಹೀಗಾಗಿ ಪ್ಲಂಬರ್ ಕರೆದು ಪೈಪ್ ಕೊರೆಸಿದಾಗ ₹ 500 ಮುಖಬೆಲೆಯ ನೋಟುಗಳು ಸಿಕ್ಕಿವೆ. ಇಲ್ಲಿಯವರೆಗೆ ₹ 40 ಲಕ್ಷ ನಗದು ಪತ್ತೆ ಹಚ್ಚಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.