ಕಲಬುರಗಿ: ‘ಸಾರ್ವಜನಿಕರಲ್ಲಿ ಫಾರ್ಮಸಿ ಅಧಿಕಾರಿಗಳ ಪಾತ್ರದ ಕುರಿತು ಜಾಗೃತಿ ಮೂಡಿಸಲು ಫೆಬ್ರುವರಿ 22ರಂದು ಶಾಂತಿಯುತ ನಡಿಗೆ ಹಮ್ಮಿಕೊಳ್ಳಲಾಗಿದೆ. ಜಿಲ್ಲೆಯಿಂದ 100ಕ್ಕೂ ಅಧಿಕ ಮಂದಿ ಪಾಲ್ಗೊಳ್ಳುವರು’ ಎಂದು ಅಖಿಲ ಭಾರತ ಫಾರ್ಮಸಿ ಅಧಿಕಾರಿಗಳ ಸಂಘದ ರಾಷ್ಟ್ರೀಯ ಅಧ್ಯಕ್ಷ ಡಾ. ಬಿ.ಎಸ್. ದೇಸಾಯಿ ತಿಳಿಸಿದರು.
‘ಕೇರಳದ ತಿರುವನಂತಪುರದಲ್ಲಿ ಇತ್ತೀಚೆಗೆ ನಡೆದ ಸಂಘದ ಸಭೆಯಲ್ಲಿ ಎಲ್ಲ ರಾಜ್ಯಗಳ ರಾಜಧಾನಿಗಳಲ್ಲಿ ಈ ಶಾಂತಿಯುತ ನಡಿಗೆ ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ. ಫಾರ್ಮಸಿ ಅಧಿಕಾರಿಗಳ ವಿದ್ಯಾರ್ಹತೆ, ತರಬೇತಿ, ಔಷಧ ಸಾಮರ್ಥ್ಯ, ಖಾಲಿ ಹುದ್ದೆಗಳ ಭರ್ತಿ, ಔಷಧ ಪ್ರಭಾವ ನಿಗಾ, ಫಾರ್ಮಾ ತ್ಯಾಜ್ಯ, ಮತ್ತಿತರ ವಿಷಯಗಳ ಕುರಿತು ಅಂದು ಮೆರವಣಿಗೆಯಲ್ಲಿ ಭಿತ್ತಿ ಪತ್ರ ಪ್ರದರ್ಶಿಸಲಾಗುವುದು’ ಎಂದು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
‘ಏಪ್ರಿಲ್ ಎರಡನೇ ವಾರದಲ್ಲಿ ನವದೆಹಲಿಯ ಜಂತರ–ಮಂತರನಲ್ಲೂ ಇದೇ ಬಗೆಯ ಶಾಂತಿಯುತ ನಡಿಗೆ ಮೂಲಕ ರಾಷ್ಟ್ರಮಟ್ಟದಲ್ಲಿ ಸಾರ್ವಜನಿಕರ ಗಮನ ಸೆಳೆಯಲಾಗುವುದು’ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಸಂಘದ ಉಪಾಧ್ಯಕ್ಷ ಪ್ರಕಾಶ ಜಿ.ಕೆ., ಓಂಪ್ರಕಾಶ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.