ADVERTISEMENT

ಚಿತ್ತಾಪುರ: ‘ಭೀಮನಡೆ’ ಪಥ ಸಂಚಲನಕ್ಕೆ ಕ್ಷಣಗಣನೆ

ಸಂವಿಧಾನ ಸಂರಕ್ಷಣಾ ಸಮಿತಿಯ ನೇತೃತ್ವ

​ಪ್ರಜಾವಾಣಿ ವಾರ್ತೆ
Published 1 ಡಿಸೆಂಬರ್ 2025, 5:30 IST
Last Updated 1 ಡಿಸೆಂಬರ್ 2025, 5:30 IST
<div class="paragraphs"><p>ಸಂವಿಧಾನ ಸಮಾವೇಶ ಹಾಗೂ ಭೀಮ‌ನಡೆ‌ ಪಥಚಲನಕ್ಕೆ ಕಲಬುರಗಿ ಜಿಲ್ಲೆಯ ಚಿತ್ತಾಪುರ ಪಟ್ಟಣದಲ್ಲಿ ಸ್ವಾಗತ ಫಲಕ ಅಳವಡಿಸಿರುವುದು</p></div>

ಸಂವಿಧಾನ ಸಮಾವೇಶ ಹಾಗೂ ಭೀಮ‌ನಡೆ‌ ಪಥಚಲನಕ್ಕೆ ಕಲಬುರಗಿ ಜಿಲ್ಲೆಯ ಚಿತ್ತಾಪುರ ಪಟ್ಟಣದಲ್ಲಿ ಸ್ವಾಗತ ಫಲಕ ಅಳವಡಿಸಿರುವುದು

   

ಚಿತ್ತಾಪುರ (ಕಲಬುರಗಿ ‌ಜಿಲ್ಲೆ): ಸಂವಿಧಾನ ಸಂರಕ್ಷಣಾ ಸಮಿತಿ ನೇತೃತ್ವದಲ್ಲಿ ಪಟ್ಟಣದಲ್ಲಿ ಸೋಮವಾರ (ಡಿ. 1) ಆಯೋಜಿಸಿರುವ ಭೀಮನಡೆ ಪಥ ಸಂಚಲನ ಹಾಗೂ ಸಂವಿಧಾನ ಸಮರ್ಪಣಾ ಸಮಾವೇಶ ಕಾರ್ಯಕ್ರಮಕ್ಕೆ ಕ್ಷಣಗಣನೆ ಶುರುವಾಗಿದೆ.

ಪಟ್ಟಣದ ಚಿತ್ತಾವಲಿ ಚೌಕ್ ದಿಂದ ಶುರುವಾಗುವ ಪಥ ಸಂಚಲನವು ಪಟ್ಟಣದ ಪ್ರಮುಖ ರಸ್ತೆಗಳ ಮೂಲಕ ಬಹಿರಂಗ ಸಮಾವೇಶ ನಡೆಯುವ ಬಜಾಜ್ ಕಲ್ಯಾಣ ಮಂಟಪಕ್ಕೆ ಆಗಮಿಸಲಿದೆ. ನಂತರ ಬಹಿರಂಗ ಸಭೆ ನಡೆಯಲಿದೆ.

ADVERTISEMENT

ಬಹಿರಂಗ ಸಭೆ ನಡೆಯುವ ಬಜಾಜ್ ಕಲ್ಯಾಣ ಮಂಟಪದಲ್ಲಿ ಬೃಹತ್ ವೇದಿಕೆ, ಟೆಂಟ್, ಆಸನ ವ್ಯವಸ್ಥೆ ಮಾಡಲಾಗಿದೆ.

ಚಿತ್ತಾಪುರ ಪಟ್ಟಣದಲ್ಲಿ ಭೀಮನಡೆ ಕಾರ್ಯಕ್ರಮವು ಐತಿಹಾಸಿಕವಾಗಿ ದಾಖಲಾಗಲಿದೆ ಎಂದು ದಲಿತ ಮುಖಂಡ ಶಿವರುದ್ರ ಭೀಣಿ ಅವರು ತಿಳಿಸಿದ್ದಾರೆ.

ಕಾರ್ಯಕ್ರಮವು ಶಾಂತಿಯುತವಾಗಿ ಮತ್ತು ಕಾನೂನು ಸುವ್ಯವಸ್ಥೆಗೆ ಧಕ್ಕೆ ಉಂಟಾಗದಂತೆ ಸೂಕ್ತ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.