ADVERTISEMENT

ಸೇಡಂ, ಚಿಂಚೋಳಿ‌ ಡಿಪೊದ 40 ಬಸ್ ರೂಟ್ ರದ್ದು

​ಪ್ರಜಾವಾಣಿ ವಾರ್ತೆ
Published 11 ಡಿಸೆಂಬರ್ 2020, 7:52 IST
Last Updated 11 ಡಿಸೆಂಬರ್ 2020, 7:52 IST
ಸಾರಿಗೆ ಸಂಸ್ಥೆ ‌ಸಿಬ್ಬಂದಿಯನ್ನು ಸರ್ಕಾರಿ ನೌಕರರನ್ನಾಗಿ‌ ಪರಿಗಣಿಸಬೇಕು‌ ಎಂದು ಒತ್ತಾಯಿಸಿ ಚಾಲಕ ಹಾಗೂ ‌ನಿರ್ವಾಹಕರು ಕಲಬುರ್ಗಿ ಕೇಂದ್ರ ಬಸ್ ನಿಲ್ದಾಣದಲ್ಲಿ ಪ್ರತಿಭಟನೆ ‌ನಡೆಸಿದರು
ಸಾರಿಗೆ ಸಂಸ್ಥೆ ‌ಸಿಬ್ಬಂದಿಯನ್ನು ಸರ್ಕಾರಿ ನೌಕರರನ್ನಾಗಿ‌ ಪರಿಗಣಿಸಬೇಕು‌ ಎಂದು ಒತ್ತಾಯಿಸಿ ಚಾಲಕ ಹಾಗೂ ‌ನಿರ್ವಾಹಕರು ಕಲಬುರ್ಗಿ ಕೇಂದ್ರ ಬಸ್ ನಿಲ್ದಾಣದಲ್ಲಿ ಪ್ರತಿಭಟನೆ ‌ನಡೆಸಿದರು   

ಕಲಬುರ್ಗಿ: ಜಿಲ್ಲಾ ಕೇಂದ್ರ ಕಲಬುರ್ಗಿಯಲ್ಲಿ ಈಶಾನ್ಯ ‌ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ‌ಸಂಚಾರ ಎಂದಿನಂತಿದ್ದು, ಜಿಲ್ಲೆಯ ಸೇಡಂ ಹಾಗೂ ಚಿಂಚೋಳಿ ಡಿಪೊಗಳಿಂದ ಹೊರಡಬೇಕಿದ್ದ 40 ರೂಟ್ಗಳು ಅಗತ್ಯ ‌ಸಿಬ್ಬಂದಿ ಇಲ್ಲದ್ದಕ್ಕೆ ರದ್ದುಗೊಂಡಿವೆ ಎಂದು ಕಲಬುರ್ಗಿ ಡಿಪೊ-1ರ ಸಾರಿಗೆ ‌ನಿಯಂತ್ರಣಾಧಿಕಾರಿ ಸಂತೋಷಕುಮಾರ್ ತಿಳಿಸಿದರು.

ಅಂತರ್ ಜಿಲ್ಲಾ ಹಾಗೂ ‌ಅಂತರ ರಾಜ್ಯ ಬಸ್‌ಗಳ‌ ಸಂಚಾರ ಎಂದಿನಂತಿವೆ. ಬೆಳಿಗ್ಗೆ ‌11 ಗಂಟೆ ವೇಳೆಗೆ ಈಶಾನ್ಯ ‌ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ 1769 ಮಾರ್ಗಗಳಲ್ಲಿ ಬಸ್‌ಗಳು ಕಾರ್ಯಾಚರಿಸಬೇಕಿತ್ತು. ಅವುಗಳ ‌ಪೈಕಿ 1140 ಮಾರ್ಗಗಳಲ್ಲಿ ಸಂಚರಿಸಿವೆ.

629 ರೂಟ್‌ಗಳನ್ನು ರದ್ದುಪಡಿಸಲಾಗಿದೆ. ವಿಜಯಪುರ, ಕೊಪ್ಪಳ, ಬಳ್ಳಾರಿ, ರಾಯಚೂರು ಜಿಲ್ಲೆಗಳಲ್ಲಿ ಹೆಚ್ಚು ರೂಟ್ ಗಳು ರದ್ದಾಗಿವೆ ಎಂದು ಸಾರಿಗೆ ‌ಸಂಸ್ಥೆಯ ಅಧಿಕಾರಿಯೊಬ್ಬರು ‌'ಪ್ರಜಾವಾಣಿ'ಗೆ ತಿಳಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.