ADVERTISEMENT

ಕಲಬುರಗಿ: ಡಿಸಿಸಿ ಬ್ಯಾಂಕ್‌ ನೂತನ ಪದಾಧಿಕಾರಿಗಳಿಗೆ ಸನ್ಮಾನ

​ಪ್ರಜಾವಾಣಿ ವಾರ್ತೆ
Published 5 ಡಿಸೆಂಬರ್ 2025, 7:01 IST
Last Updated 5 ಡಿಸೆಂಬರ್ 2025, 7:01 IST
ಕಲಬುರಗಿಯ ಕೈಲಾಸ ನಗರದಲ್ಲಿ ನಡೆದ ಅಭಿನಂದನಾ ಸಮಾರಂಭದಲ್ಲಿ ಕಲಬುರಗಿ–ಯಾದಗಿರಿ ಜಿಲ್ಲಾ ಸಹಕಾರ ಬ್ಯಾಂಕ್ ನೂತನ ಅಧ್ಯಕ್ಷ ವಿಠ್ಠಲ ಯಾದವ್, ನಿರ್ದೇಶಕರಾದ ಸುರೇಶ ಸಜ್ಜನ, ಬಸವರಾಜ ಪಾಟೀಲ ನರಬೋಳ, ಬಸವರಾಜ ಪಾಟೀಲ ಚಿಂಚೋಳಿ, ಅಶೋಕ ಸಾವಳೇಶ್ವರ ಅವರನ್ನು ಸನ್ಮಾನಿಸಲಾಯಿತು
ಕಲಬುರಗಿಯ ಕೈಲಾಸ ನಗರದಲ್ಲಿ ನಡೆದ ಅಭಿನಂದನಾ ಸಮಾರಂಭದಲ್ಲಿ ಕಲಬುರಗಿ–ಯಾದಗಿರಿ ಜಿಲ್ಲಾ ಸಹಕಾರ ಬ್ಯಾಂಕ್ ನೂತನ ಅಧ್ಯಕ್ಷ ವಿಠ್ಠಲ ಯಾದವ್, ನಿರ್ದೇಶಕರಾದ ಸುರೇಶ ಸಜ್ಜನ, ಬಸವರಾಜ ಪಾಟೀಲ ನರಬೋಳ, ಬಸವರಾಜ ಪಾಟೀಲ ಚಿಂಚೋಳಿ, ಅಶೋಕ ಸಾವಳೇಶ್ವರ ಅವರನ್ನು ಸನ್ಮಾನಿಸಲಾಯಿತು   

ಕಲಬುರಗಿ: ಇಲ್ಲಿನ ಕೈಲಾಸ ನಗರದಲ್ಲಿ ನಡೆದ ಅಭಿನಂದನಾ ಸಮಾರಂಭದಲ್ಲಿ ಕಲಬುರಗಿ–ಯಾದಗಿರಿ ಜಿಲ್ಲಾ ಸಹಕಾರ ಬ್ಯಾಂಕ್ ನೂತನ ಅಧ್ಯಕ್ಷ ವಿಠ್ಠಲ ಯಾದವ್, ನಿರ್ದೇಶಕರಾದ ಸುರೇಶ ಸಜ್ಜನ, ಬಸವರಾಜ ಪಾಟೀಲ ನರಬೋಳ, ಬಸವರಾಜ ಪಾಟೀಲ ಚಿಂಚೋಳಿ, ಅಶೋಕ ಸಾವಳೇಶ್ವರ ಅವರನ್ನು ಸನ್ಮಾನಿಸಲಾಯಿತು.

ಅಖಂಡ ಕರ್ನಾಟಕ ವೀರಶೈವ ಲಿಂಗಾಯತ ಸಮಾಜದ ಜಿಲ್ಲಾ ಘಟಕದ ವತಿಯಿಂದ ನಡೆದ ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಅಖಂಡ ಕರ್ನಾಟಕ ವೀರಶೈವ ಲಿಂಗಾಯತ ಸಮಾಜದ ರಾಜ್ಯಾಧ್ಯಕ್ಷ ಮಲ್ಲಿಕಾರ್ಜುನ ರೆಡ್ಡಿ ಅಮ್ಮಾಪುರ, ‘ಅಧ್ಯಕ್ಷರು ಹಾಗೂ ನಿರ್ದೇಶಕರು ಸಹಕಾರ ಕ್ಷೇತ್ರದಲ್ಲಿ ಸಾಧನೆ ಮಾಡಿ ರೈತರಿಗೆ ಅನುಕೂಲ ಮಾಡಿಕೊಡಬೇಕು’ ಎಂದು.

ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಸಹಕಾರ ಬ್ಯಾಂಕ್ ವಿಠ್ಠಲ ಯಾದವ ಮಾತನಾಡಿ, ‘ಉತ್ತಮವಾಗಿ ಬ್ಯಾಂಕ್‌ ಅಭಿವೃದ್ಧಿ ಪಡಿಸುತ್ತೇವೆ. ರೈತರಿಗೆ ಸಾಲ ವಿತರಣೆ ಮಾಡುತ್ತೇವೆ. ಬ್ಯಾಂಕ್‌ನ್ನು ಕ್ರಿಯಾಶೀಲವಾಗಿ ಇಡಲಾಗುವುದು’ ಎಂದು ಹೇಳಿದರು.

ADVERTISEMENT

ಕಾಂಗ್ರೆಸ್ ಮುಖಂಡರಾದ ಶರಣು ಭೂಸನೂರ, ಮಲ್ಲನಗೌಡ ಪೊಲೀಸ್‌ ಪಾಟೀಲ ಕಲ್ಲಹಂಗರಗಾ, ಅಖಂಡ ಕರ್ನಾಟಕ ವೀರಶೈವ ಲಿಂಗಾಯತ ಸಮಾಜದ ಜಿಲ್ಲಾಧ್ಯಕ್ಷ ಪ್ರಿನ್ಸ್ ಅನಿಲ್ ನೆನೆಗಾರ, ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಭಾಗ್ಯಶ್ರೀ.ಎಂ ಪಾಟೀಲ, ಸಿದ್ದಲಿಂಗರೆಡ್ಡಿ ಯಾದಗಿರಿ, ಪ್ರತೀಕ ಮಠಪತಿ, ಬಸಮ್ಮ ವೈದ್ಯ, ಅಭಿ ಪಾಟೀಲ, ಶಂಕರಗೌಡ ಪಾಟೀಲ, ಮಂಗಲಾ ಕಂತಿ, ಸಂಗಮ್ಮ, ಬಸಮ್ಮ, ಕನ್ಯಾಕುಮಾರಿ, ಸದಾನಂದ, ಭಾಗೇಶ್ ಇತರರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.