ADVERTISEMENT

ಚಿಂಚೋಳಿ | ಐನಾಪುರದಲ್ಲಿ ಭೂಮಿಯಿಂದ ಸದ್ದು: ಬೆಚ್ಚಿಬಿದ್ದ ಜನ

​ಪ್ರಜಾವಾಣಿ ವಾರ್ತೆ
Published 31 ಅಕ್ಟೋಬರ್ 2025, 4:28 IST
Last Updated 31 ಅಕ್ಟೋಬರ್ 2025, 4:28 IST
<div class="paragraphs"><p>ಸಾಂದರ್ಭಿಕ-ಚಿತ್ರ</p></div>

ಸಾಂದರ್ಭಿಕ-ಚಿತ್ರ

   

– ಎ.ಐ ಚಿತ್ರ

ಚಿಂಚೋಳಿ(ಕಲಬುರಗಿ ಜಿಲ್ಲೆ): ತಾಲ್ಲೂಕಿನ ಐನಾಪುರ ಮತ್ತು ಸುತ್ತಲಿನ ಕೆಲ ಗ್ರಾಮಗಳಲ್ಲಿ ಶುಕ್ರವಾರ ಬೆಳಿಗ್ಗೆ ಭೂಮಿಯಿಂದ 'ಗರ್ ಗರ್'ಎಂಬ ಶಬ್ದ ಕೇಳಿ‌ ಬಂದಿದೆ ಎಂದು ಗ್ರಾಮದ ಮುಖಂಡ ರಮೇಶ ಪಡಶೆಟ್ಟಿ 'ಪ್ರಜಾವಾಣಿ'ಗೆ ತಿಳಿಸಿದ್ದಾರೆ.

ADVERTISEMENT

ನಸುಕಿನ 5.47ರ ಸಮಯದಲ್ಲಿ‌ ಶಬ್ದ ಬಂದಿದ್ದು ಜನ ಮನೆಗಳಿಂದ ಹೊರ ಬಂದಿದ್ದಾರೆ. ಇದು ಭೂಕಂಪನವೇ ಆಗಿರಬಹುದೆಂದು ಜನ ಆತಂಕ‌ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಕಂದಾಯ ನಿರೀಕ್ಷಕ‌ ರವಿ ಪಾಟೀಲರು ತಹಶೀಲ್ದಾರ್ ಸುಬ್ಬಣ್ಣ ಜಮಖಂಡಿ ಅವರಿಗೆ ಮಾಹಿತಿ ತಿಳಿಸಿದ್ದು, ಅವರು ಸಂಬಂಧಿಸಿದ ಅಧಿಕಾರಿಗಳಿಂದ ಮಾಹಿತಿ ಪಡೆಯುವುದಾಗಿ ಹೇಳಿದರು.

ಬೀದರ್ ಜಿಲ್ಲೆಯ ಗಡಿ‌ ಭಾಗದಲ್ಲಿ‌ ಕಳೆದ ಕೆಲ ದಿನಗಳಿಂದ ಭೂಮಿಯಿಂದ ಶಬ್ದ ಬರುತ್ತಿದ್ದು ಹಳ್ಳಿಖೇಡ ಕೆ ಗ್ರಾಮದಲ್ಲಿ ಗುರುವಾರ ರಾತ್ರಿ 9.15ರ ಸುಮಾರಿಗೆ 2.4 ತೀವ್ರತೆಯ ಭೂಕಂಪನ ಸಂಭವಿಸಿದ್ದು ದೃಢ ಪಟ್ಟಿದೆ ಎಂದು ಕರ್ನಾಟಕ ಪ್ರಕೃತಿ ವಿಕೋಪ ಉಸ್ತುವಾರಿ‌ ಕೇಂದ್ರದ ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.