ADVERTISEMENT

ಜೆಸ್ಕಾಂ; ಸಿಬ್ಬಂದಿ ತಪ್ಪಿಗೆ ದುಬಾರಿ ಕರೆಂಟ್ ಬಿಲ್!

ದುಬಾರಿ ಕರೆಂಟ್ ಬಿಲ್ಲಿಗೆ ಬೆಚ್ಚಿದ ಮದಕಲ್ ಪಂಚಾಯಿತಿ ವ್ಯಾಪ್ತಿಯ ಗ್ರಾಮಸ್ಥರು

​ಪ್ರಜಾವಾಣಿ ವಾರ್ತೆ
Published 18 ನವೆಂಬರ್ 2025, 7:02 IST
Last Updated 18 ನವೆಂಬರ್ 2025, 7:02 IST
ಸೇಡಂ ತಾಲ್ಲೂಕು ಕೊಂತನಪಲ್ಲಿ ಗ್ರಾಮಸ್ಥರು ಜೆಸ್ಕಾಂ ಇಲಾಖೆಯ ಸಿಬ್ಬಂದಿಗಳಿಗೆ ವಿದ್ಯುತ್ ಬಿಲ್ ಬಳಕೆ ಬಗ್ಗೆ ಮಾಹಿತಿ ಕೇಳುತ್ತಿರವುವುದು
ಸೇಡಂ ತಾಲ್ಲೂಕು ಕೊಂತನಪಲ್ಲಿ ಗ್ರಾಮಸ್ಥರು ಜೆಸ್ಕಾಂ ಇಲಾಖೆಯ ಸಿಬ್ಬಂದಿಗಳಿಗೆ ವಿದ್ಯುತ್ ಬಿಲ್ ಬಳಕೆ ಬಗ್ಗೆ ಮಾಹಿತಿ ಕೇಳುತ್ತಿರವುವುದು   

ಸೇಡಂ: ಜೆಸ್ಕಾಂ ಇಲಾಖೆಯ ಸಿಬ್ಬಂದಿ ಮಾಡಿದ ತಪ್ಪಿನಿಂದಾಗಿ ತಾಲ್ಲೂಕಿನ ಮದಕಲ್ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳ ಮನೆಗಳಿಗೆ ದುಬಾರಿ ಕರೆಂಟ್‌ ಬಿಲ್ ಬಂದಿದ್ದು, ಗ್ರಾಮಸ್ಥರು ಬೆಚ್ಚಿ ಬಿದ್ದಿದ್ದಾರೆ.

ಜೆಸ್ಕಾಂ ಇಲಾಖೆಯ ಸಿಬ್ಬಂದಿ ಮಾಡಿದ ತಪ್ಪಿನಿಂದಾಗಿ ದುಬಾರಿ ಬಿಲ್‌ ಬಂದಿದೆ ಎನ್ನಲಾಗುತ್ತಿದ್ದು, ಗ್ರಾಮಸ್ಥರು ದುಬಾರಿ ಬಿಲ್ ಕಂಡು ಬೆರಗಾಗಿದ್ದಾರೆ. ಜೆಸ್ಕಾಂ ಸಿಬ್ಬಂದಿ ಆಗಾಗ ಬಿಲ್ ಕೊಡುತ್ತಿದ್ದ, ಅವರು ಕೇಳಿದಾಗಲೆಲ್ಲಾ ಬಿಲ್ ಪಾವತಿಸುತ್ತಾ ಬಂದಿದ್ದೇವೆ. ಆದರೂ ಸಹ ನಮಗೆ ನಾವು ಜೆಸ್ಕಾಂ ಸಿಬ್ಬಂದಿಯವರು ಸಾವಿರಾರು ರೂ.ಬಿಲ್ ಕೊಟ್ಟಿದ್ದಾರೆ ಎಂದು ಗ್ರಾಮಸ್ಥರು ದೂರಿದ್ದಾರೆ.

‘ಮದಕಲ್ ಪಂಚಾಯಿತಿ ವ್ಯಾಪ್ತಿಯ ಸೋಮಪಲ್ಲಿ, ಹಯ್ಯಾಳ, ಕೊಂತನಪಲ್ಲಿ ಗ್ರಾಮಗಳಲ್ಲಿ ಅನೇಕ ವರ್ಷಗಳಿಂದ ವೀರಭದ್ರಪ್ಪ ಗ್ರಾಮ ವಿದ್ಯುತ್ ಪ್ರತಿನಿಧಿ ಮೀಟರನಲ್ಲಿನ ವಿದ್ಯುತ್ ಬಳಕೆ ಸಂಪೂರ್ಣ ಬಿಲ್ ಕೊಡದೇ, ಕಡಿಮೆ ಯೂನಿಟ್ ಬಿಲ್ ಕೊಟ್ಟು, ಜೆಸ್ಕಾಂ ಇಲಾಖೆಗೆ ಆರ್ಥಿಕ ನಷ್ಟ ಮಾಡಿರುವುದನ್ನು ಪರಿಗಣಿಸಿ ಇಲಾಖೆಯಿಂದ 2025ರ ಜುಲೈ 24ರಂದು ವಜಾಗೊಳಿಸಲಾಗಿದೆ ಎಂದು ಜೆಸ್ಕಾಂ ಇಲಾಖೆಯ ಕಾರ್ಯನಿರ್ವಾಹಕ ಅಭಿಯಂತರ ಪರಮೇಶ್ವರ ಬಿರಾದಾರ ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

‘ಆ ಸ್ಥಳಕ್ಕೆ ನೂತನ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದು, ಗ್ರಾಹಕರ ಮನೆ ಮೀಟರ್ ಚೆಕ್‌ಮಾಡಿ ಬಿಲ್ ಕೊಟ್ಟಾಗ ಬಾಕಿ ಉಳಿದಿರುವ ವಿದ್ಯುತ್ ಬಳಕೆ ಮೊತ್ತ ಸೇರಿಕೊಂಡಿದೆ. ಹೀಗಾಗಿ ಮದಕಲ್ ಪಂಚಾಯಿತಿ ವ್ಯಾಪ್ತಿಯೂ ಗ್ರಾಮಗಳಲ್ಲಿ ಈ ರೀತಿಯ ಸಮಸ್ಯೆಯಾಗಿದೆ. ಗ್ರಾಹಕರು ಬಳಸಿರುವ ವಿದ್ಯುತ್ ಬಿಲ್ಲೇ ಆಗಿದೆ ಹೊರತು ಯಾವುದೇ ಹೆಚ್ಚಿನದ್ದಾಗಿರುವುದಿಲ್ಲ ಎಂದು ಅವರು ತಿಳಿಸಿದರು.

‘ಜೆಸ್ಕಾಂ ಇಲಾಖೆಯ ಸಿಬ್ಬಂದಿಗಳು ಮಾಡಿರುವ ತಪ್ಪಿಗೆ ನಾವು ಏನ್ ಮಾಡ್ಬೇಕು. ಅತಿವೃಷ್ಟಿಯಿಂದ ರೈತರು ಸಂಕಷ್ಟದಲ್ಲಿರುವಾಗಲೇ ₹10 ಸಾವಿರದಿಂದ ಲಕ್ಷದವರೆಗೆ ವಿದ್ಯುತ್ ಬಿಲ್ ಪಾವತಿಸಬೇಕಾದ್ದದ್ದಾರೂ ಹೇಗೆ. ಸರ್ಕಾರ ಹಾಗೂ ಜನಪ್ರತಿನಿಧಿಗಳು ದಿಟ್ಟ ನಿರ್ಧಾರ ತೆಗೆದುಕೊಂಡು ಸಮಸ್ಯೆ ಇತ್ಯರ್ಥಪಡಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

7 ತಿಂಗಳಲ್ಲಿ ₹50 ಸಾವಿರ ವಿದ್ಯುತ್ ಬಿಲ್!

7 ತಿಂಗಳ ಹಿಂದೆಯೇ ₹5 ಸಾವಿರ ಬಿಲ್ ಪಾವತಿಸಿದ್ದೇನೆ. ಆದರೆ ಈಗ ₹49820 ಬಿಲ್ ಬಂದಿದೆ. ನಮ್ಮ ಮನೆಯಲ್ಲಿ 1 ಫ್ಯಾನ್ ಎರಡು ಬಲ್ಬ್ ಬಳಸುತ್ತೇವೆ. ಇಷ್ಟೊಂದು ಬಿಲ್ ಯಾಕೆ ಬಂತು ಅನ್ನೋದೇ ಗೊತ್ತಾಗ್ತಿಲ್ಲ ಎನ್ನುತ್ತಾರೆ ಕೊಂತನಪಲ್ಲಿ ಗ್ರಾಮದ ಸಿದ್ದಪ್ಪ. ₹10 ಸಾವಿರದಿಂದ ಲಕ್ಷದವರೆಗೆ ಬಿಲ್ ಬಂದಿದೆ. ನಮ್ಮ ಊರಿನಲ್ಲಿ ಇದೇ ಮೊದಲು ಹೀಗಾಗಿದ್ದು ಎನ್ನುತ್ತಾರೆ ಮುಖಂಡ ಮುರುಳಿಧರೆಡ್ಡಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.