ADVERTISEMENT

‘ಕ್ರೀಡಾ ಸಚಿವ ಸ್ಥಾನ ಕಲ್ಯಾಣ ಕರ್ನಾಟಕಕ್ಕೆ ನೀಡಿ’: ಮಂಜುನಾಥ ನಾಲವಾರಕರ್ ಮನವಿ

​ಪ್ರಜಾವಾಣಿ ವಾರ್ತೆ
Published 15 ಜೂನ್ 2025, 15:42 IST
Last Updated 15 ಜೂನ್ 2025, 15:42 IST
ಮಂಜುನಾಥ ನಾಲವಾರಕರ್
ಮಂಜುನಾಥ ನಾಲವಾರಕರ್   

ಕಲಬುರಗಿ: ರಾಜ್ಯ ಸರ್ಕಾರದಲ್ಲಿ ಇತ್ತೀಚೆಗೆ ಬಿ.ನಾಗೇಂದ್ರ ಅವರ ರಾಜೀನಾಮೆಯಿಂದ ಖಾಲಿ ಇರುವ ಕ್ರೀಡಾ ಸಚಿವ ಸ್ಥಾನವು ಕಲ್ಯಾಣ ಕರ್ನಾಟಕ ಭಾಗದವರಿಗೆ ನೀಡಬೇಕು ಎಂದು ಕರವೇ ಕಾವಲುಪಡೆಯ ರಾಜ್ಯ ವಕ್ತಾರ ಮಂಜುನಾಥ ನಾಲವಾರಕರ್ ಮನವಿ ಮಾಡಿದ್ದಾರೆ.

‘ರಾಜ್ಯದಲ್ಲಿ ಕ್ರೀಡಾ ಚಟುವಟಿಕೆಗಳು ಮುಂದುವರಿಯಬೇಕು. ಆದ್ದರಿಂದ ಕ್ರೀಡಾಂಗಣ ವ್ಯವಸ್ಥೆ ಮತ್ತು ಕ್ರೀಡಾಪಟುಗಳಿಗೆ ಮೂಲಸೌಕರ್ಯಗಳನ್ನು ಒದಗಿಸಲು ಕ್ರೀಡಾ ಸಚಿವರ ನೇಮಕ ಅವಶ್ಯಕತೆ ಇದೆ’ ಎಂದು ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT