ADVERTISEMENT

ಚಾಲಕರಿಂದ ಹನುಮ ಜಯಂತಿ ಆಚರಣೆ

​ಪ್ರಜಾವಾಣಿ ವಾರ್ತೆ
Published 17 ಏಪ್ರಿಲ್ 2022, 3:06 IST
Last Updated 17 ಏಪ್ರಿಲ್ 2022, 3:06 IST
ಅಫಜಲಪುರ ಪಟ್ಟಣದ ಸರಕು ಸಾಗಣೆ ವಾಹನ ಚಾಲಕ ಸಂಘದಿಂದ ಶನಿವಾರ ಹನುಮ ಜಯಂತಿ ಆಚರಿಸಲಾಯಿತು
ಅಫಜಲಪುರ ಪಟ್ಟಣದ ಸರಕು ಸಾಗಣೆ ವಾಹನ ಚಾಲಕ ಸಂಘದಿಂದ ಶನಿವಾರ ಹನುಮ ಜಯಂತಿ ಆಚರಿಸಲಾಯಿತು   

ಅಫಜಲಪುರ: ತಾಲ್ಲೂಕಿನ ವಿವಿಧಡೆ ಶನಿವಾರ ಹನುಮ ಜಯಂತಿ ಆಚರಿಸಲಾಯಿತು.

ಪಟ್ಟಣದ ಬ್ರಾಹ್ಮಣರ ಗಲ್ಲಿ ಹನಮಾನ ಮಂದಿರದಲ್ಲಿ ಸುಪ್ರಭಾತ, ಪಂಚಾಮೃತ ಅಭಿಷೇಕ, ವಿಶೇಷ ಅಲಂಕಾರ ತೊಟ್ಟಿಲೋತ್ಸವ ನಡೆಯಿತು.

ಆನಂದ ಆಲಮೇಲಕರ್, ರಾಮಚಂದ್ರ ಶಿವಭಟ್, ಪ್ರಲ್ಹಾದರಾವ ಬಿಲ್ವಾಡ, ದತ್ಂಭಟ್ ಪುರೋಹಿತ, ಅನಂತರಾವ ಕುಲಕರ್ಣಿ, ದತ್ತಾತ್ರೇಯರಾವ ನಿಂಬಾಳ, ಲಕ್ಷ್ಮಿ, ಕವಿತಾ, ಪೂರ್ಣಿಮಾ, ನಂದಾ, ‌ಸುನಿತಾ ಇದ್ದರು.

ADVERTISEMENT

ಪಟ್ಟಣದ ಪೊಲೀಸ್ ಠಾಣೆ ಎದುರುಗಡೆ ವೀರಾಂಜನೇಯ ದೇವಸ್ಥಾನದಲ್ಲಿ ಹನುಮ ಜಯಂತಿ ಆಚರಿಸಲಾಯಿತು.

ಸರಕು ಸಾಗಣೆ ವಾಹನ ಚಾಲಕರ ಸಂಘದಿಂದ ಹನುಮ ಜಯಂತಿ ಆಚರಿಸಲಾಯಿತು. ಯಲ್ಲಪ್ಪ ಹರಳಯ್ಯ, ಮಹಮದ್ ರಫೀಕ್, ಮೊಮ್ಮದ್ ಹನಿಫ್ ಮುಲ್ಲಾ, ಕಲ್ಯಾಣಿ, ರಫೀಕ್ ಮಾತೋಳಿ , ಸಂಜಯ ಕುಮಾರ್ ಪೂಜಾರಿ, ಸಹದೇವ್ ಪೂಜಾರಿ, ಶ್ರೀಶೈಲ ಮೈದರಗಿ, ಆನಂದ್ ಪೂಜಾರಿ, ಶಿವಪುತ್ರಪ್ಪ ಅವರಾದ, ರೇವಣಸಿದ್ದ ಕಲ್ಲೂರ್ , ನಜೀರ್ ಅಹಮ್ಮದ್ ಚೌಧರಿ ಇದ್ದರು. ಬಳಿಕ ಪ್ರಸಾದ ವಿತರಣೆ ಮಾಡಲಾಯಿತು .

ತಾಲ್ಲೂಕಿನ ಬಳೂರ್ಗಿ ಗ್ರಾಮದಲ್ಲಿ ಹನುಮಾನ ದೇವಸ್ಥಾನದಲ್ಲಿ ಮಹಾರುದ್ರಾಭಿಷೇಕ ಹಾಗೂ ಹೂವಿನಅಲಂಕಾರ, ಪೂಜೆ ನೆರವೇರಿಸಿದರು. ಶಿವಾನಂದ ಸ್ಥಾವರಮಠ, ಅರ್ಚಕ ಗಣಪತಿ ಪ್ರಲಾರಿ, ವಿಠ್ಠಲ ಚಲಗೇರಿ, ಶರಣಪ್ಪಸಂಗ ಶೆಟ್ಟಿ, ಶರಣಯ್ಯ ಮಠಪತಿ , ವಿಜಯಕುಮಾರ್ ಪಾಟೀಲ್ ಮತ್ತಿತರಿದ್ದರು ಪೂಜೆ ನಂತರ ಪ್ರಸಾದ ವಿತರಣೆ ಕಾರ್ಯಕ್ರಮ ಜರುಗಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.