ADVERTISEMENT

ಕಲಬುರಗಿ: ‘ಹಾರ್ವೆಸ್ಟ್ ಆಫ್ ಸ್ಟಿಲ್‌ನೆಸ್’ ಕವನ ಸಂಕಲನ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 22 ಡಿಸೆಂಬರ್ 2025, 7:03 IST
Last Updated 22 ಡಿಸೆಂಬರ್ 2025, 7:03 IST
ಕಲಬುರಗಿಯ ಶರಣಬಸವೇಶ್ವರ ಸಂಸ್ಥಾನದಲ್ಲಿ ಹಾರ್ವೆಸ್ಟ್ ಆಫ್ ಸ್ಟಿಲ್‌ನೆಸ್ ಕವನ ಸಂಕಲನವನ್ನು ಬಸವರಾಜ ಪಾಟೀಲ ಸೇಡಂ ಬಿಡುಗಡೆಗೊಳಿಸಿದರು. ವಿಜಯಕುಮಾರ ಪಾಟೀಲ, ವೀರಶೆಟ್ಟಿ ಅವರಾದ, ಬಸವರಾಜ ದೇಶಮುಖ, ಪ್ರೊ.ಬಸವರಾಜ ಡೋಣೂರ ಭಾಗವಹಿಸಿದ್ದರು
ಕಲಬುರಗಿಯ ಶರಣಬಸವೇಶ್ವರ ಸಂಸ್ಥಾನದಲ್ಲಿ ಹಾರ್ವೆಸ್ಟ್ ಆಫ್ ಸ್ಟಿಲ್‌ನೆಸ್ ಕವನ ಸಂಕಲನವನ್ನು ಬಸವರಾಜ ಪಾಟೀಲ ಸೇಡಂ ಬಿಡುಗಡೆಗೊಳಿಸಿದರು. ವಿಜಯಕುಮಾರ ಪಾಟೀಲ, ವೀರಶೆಟ್ಟಿ ಅವರಾದ, ಬಸವರಾಜ ದೇಶಮುಖ, ಪ್ರೊ.ಬಸವರಾಜ ಡೋಣೂರ ಭಾಗವಹಿಸಿದ್ದರು   

ಕಲಬುರಗಿ: ಶಿಕ್ಷಕ ವೀರಶೆಟ್ಟಿ ಅವರಾದ ಅವರು ರಚಿಸಿದ ‘ಹಾರ್ವೆಸ್ಟ್ ಆಫ್‌ ಸ್ಟಿಲ್‌ನೆಸ್’ ಕವನ ಸಂಕಲನವನ್ನು ಶರಣಬಸವೇಶ್ವರ ಸಂಸ್ಥಾನದ ಆವರಣದಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ವಿಕಾಸ ಅಕಾಡೆಮಿ ಅಧ್ಯಕ್ಷ, ಮಾಜಿ ಸಂಸದ ಬಸವರಾಜ ಪಾಟೀಲ ಸೇಡಂ ಭಾನುವಾರ ಬಿಡುಗಡೆಗೊಳಿಸಿದರು.

ನಂತರ ಮಾತನಾಡಿದ ಅವರು, ‘ವೀರಶೆಟ್ಟಿ ಅವರು ಸಾರ್ವಕಾಲಿಕ ಸತ್ಯದ ಮೇಲೆ ನಿಂತಿರುವ ಕವಿತೆಗಳನ್ನು ಬರೆದಿದ್ದಾರೆ. ನಾವು ಬರಹಗಳ ಮೂಲಕ ವಿಚಾರಗಳನ್ನು ಸದಾ ಸತ್ಯದ ಕಡೆಗೆ ಕೊಂಡೊಯ್ಯಬೇಕು. ಆ ಕೆಲಸವನ್ನು ಕವಿ ಸಮರ್ಥವಾಗಿ ನಿಭಾಯಿಸಿದ್ದಾರೆ’ ಎಂದರು.

ಪುಸ್ತಕದ ಕುರಿತು ಮಾತನಾಡಿದ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಇಂಗ್ಲಿಷ್ ವಿಭಾಗದ ಮುಖ್ಯಸ್ಥ ಪ್ರೊ. ಬಸವರಾಜ ಪಿ. ಡೋಣೂರ, ‘ಕವನಸಂಕಲನದಲ್ಲಿನ 50 ಕವಿತೆಗಳ ಪೈಕಿ 20 ಕವಿತೆಗಳು ಅತ್ಯುತ್ತಮವಾಗಿದೆ. ಉಳಿದ ಕವಿತೆಗಳೂ ಗುಣಮಟ್ಟದ ದೃಷ್ಟಿಯಿಂದ ಮಹತ್ವದ್ದಾಗಿವೆ. ಶೀರ್ಷಿಕೆಯಲ್ಲಿರುವ ಸೈಲೆನ್ಸ್‌ ಪದವು ನಿಶ್ಯಬ್ದ ಪರಿಸರವನ್ನು ಅಭಿವ್ಯಕ್ತಿಸುತ್ತದೆ. ನಿಸರ್ಗ, ಪರಿಸರ, ಭೂಮಿ, ಮಳೆಯ ಬಗ್ಗೆಯೇ ಕವಿತೆಗಳು ಸುತ್ತುವರೆಯುತ್ತವೆ’ ಎಂದು ಹೇಳಿದರು.

ADVERTISEMENT

‘ಹಿಂದೆ ಆಗಿ ಹೋದ ಮಹತ್ವದ ಕವಿಗಳ ಕವನ ಸಂಕಲನಗಳಲ್ಲಿನ ಎಲ್ಲ ಕವಿತೆಗಳೂ ಅಷ್ಟೇ ಮಹತ್ವದ್ದು ಇರುತ್ತಿರಲಿಲ್ಲ. ಆ ನಿಟ್ಟಿನಲ್ಲಿ ವೀರಶೆಟ್ಟಿ ಅವರು ಕವನ ಸಂಕಲನದಲ್ಲಿ ಉತ್ತಮ ಕವಿತೆಗಳನ್ನು ತಂದಿದ್ದಾರೆ’ ಎಂದು ಶ್ಲಾಘಿಸಿದರು.

ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಬಸವರಾಜ ದೇಶಮುಖ, ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ, ಶಾಂತಕುಮಾರ ಬಿಲಗುಂದಿ, ಮಂಜುನಾಥ್, ರಾಯಚೂರು ನಟರಾಜ್ ಎಂ., ಸಿಆರ್‌ಪಿ ವಿರೇಶ್ ಪೂಜಾರಿ ಬಳ್ಳಾರಿ, ಸುಮಂಗಲಾ ರೆಡ್ಡಿ, ಶ್ರೀಕಾಂತ್ ಚವಾಣ್,  ವಕೀಲರ ಸಂಘದ ಅಧ್ಯಕ್ಷ ಎಸ್.ವಿ. ಪಸಾರ ಹಾಗೂ ಕವನ ಸಂಕಲನದ ಕರ್ತೃ ವೀರಶೆಟ್ಟಿ ಅವರಾದ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.