ADVERTISEMENT

ಏ.18ರಿಂದ ಕಲಬುರಗಿ–ಹೈದರಾಬಾದ್‌ ಮಧ್ಯೆ ವಿಮಾನ ಹಾರಾಟ

​ಪ್ರಜಾವಾಣಿ ವಾರ್ತೆ
Published 5 ಏಪ್ರಿಲ್ 2022, 5:55 IST
Last Updated 5 ಏಪ್ರಿಲ್ 2022, 5:55 IST
ಅಲಯನ್ಸ್‌ ಏರ್‌ನ ವಿಮಾನ
ಅಲಯನ್ಸ್‌ ಏರ್‌ನ ವಿಮಾನ   

ಕಲಬುರಗಿ: ಅಲಯನ್ಸ್‌ ಏರ್‌ ವಿಮಾನ ಸಂಸ್ಥೆಯು ಏಪ್ರಿಲ್‌ 18ರಿಂದ ಕಲಬುರಗಿ– ಹೈದರಾಬಾದ್ ಮಧ್ಯೆ ಪ್ರತಿ ದಿನ ವಿಮಾನ ಹಾರಾಟ ಆರಂಭಿಸಲಿದೆ. ಹೈದರಾಬಾದ್‌ನಿಂದ ಇತರ ಪ್ರಮುಖ ಪ್ರದೇಶಗಳಿಗೆ ವಿಮಾನಗಳ ಸಂಪರ್ಕ ಇರುವ ಕಾರಣ, ಈ ಮಾರ್ಗದ ಹಾರಾಟ ಹೆಚ್ಚು ಬೇಡಿಕೆ ಬಂದಿದೆ.

ಹೈದರಾಬಾದ್‌ನಿಂದ ಪ್ರತಿ ದಿನ ಮಧ್ಯಾಹ್ನ 3.40ಕ್ಕೆ ಹೊರಡುವ ವಿಮಾನವು 4.20ಕ್ಕೆ ಕಲಬುರಗಿಗೆ ಬರಲಿದೆ. ಮರಳಿ ಸಂಜೆ 5ಕ್ಕೆ ಕಲಬುರಗಿಯಿಂದ ಹೊರಟು 5.40ಕ್ಕೆ ಹೈದರಾಬಾದ್‌ ತಲುಪಲಿದೆ.

ಈಗ ಬೆಂಗಳೂರಿನಿಂದ ಕಲಬುರಗಿಗೆ ಬರುವವರಿಗೆ ಪ್ರತಿ ದಿನ ಬೆಳಿಗ್ಗೆ 8.30ಕ್ಕೆ ಒಂದು ವಿಮಾನವಿದೆ. ಅದನ್ನು ಹತ್ತಲು ಬೆಳಿಗ್ಗೆ 7.30ಕ್ಕೇ ವಿಮಾನ ನಿಲ್ದಾಣ ತಲುಪಬೇಕು. ಅದಕ್ಕೆ ಸಾಧ್ಯವಾಗದವರು ಮಧ್ಯಾಹ್ನ 12.20ಕ್ಕೆ ಇರುವ ಮತ್ತೊಂದು ವಿಮಾನ ಹತ್ತುತ್ತಾರೆ. ಸದ್ಯ ಹೈದರಾಬಾದ್‌ ಕಲಬುರಗಿ ಮಧ್ಯೆ ಸಂಜೆ ವಿಮಾನ ಸಂಚಾರ ಆರಂಭವಾಗಿದ್ದರಿಂದ ಬೆಂಗಳೂರಿನಿಂದ ಹೈದರಾಬಾದ್‌ ಮಾರ್ಗವಾಗಿ ಬರಲೂ ಅನುಕೂಲ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.