ADVERTISEMENT

ಕಲಬುರಗಿ: ಜೆ.ಇ. ಶಾಂತಗೌಡ ಬಿರಾದಾರ ಮನೆಗಳ‌ ಮೇಲೆ ಎಸಿಬಿ ದಾಳಿ

​ಪ್ರಜಾವಾಣಿ ವಾರ್ತೆ
Published 24 ನವೆಂಬರ್ 2021, 5:06 IST
Last Updated 24 ನವೆಂಬರ್ 2021, 5:06 IST
ಕಲಬುರಗಿಯ ಎಂ.ಜಿ. ರಸ್ತೆಯ ಗುಬ್ಬಿ ಕಾಲೊನಿಯಲ್ಲಿರುವ ಜೆ.ಇ. ಶಾಂತಗೌಡ ಬಿರಾದಾರ ಮನೆ
ಕಲಬುರಗಿಯ ಎಂ.ಜಿ. ರಸ್ತೆಯ ಗುಬ್ಬಿ ಕಾಲೊನಿಯಲ್ಲಿರುವ ಜೆ.ಇ. ಶಾಂತಗೌಡ ಬಿರಾದಾರ ಮನೆ   

ಕಲಬುರಗಿ: ಜಿಲ್ಲೆಯ ಲೋಕೋಪಯೋಗಿ ಇಲಾಖೆಯ ಜೇವರ್ಗಿ ಉಪ ವಿಭಾಗದ ಕಿರಿಯ ಎಂಜಿನಿಯರ್ ಶಾಂತಗೌಡ ಬಿರಾದಾರ ಅವರ ಕಲಬುರಗಿ, ಯಡ್ರಾಮಿ ತಾಲ್ಲೂಕಿನ ಹಂಗರಗಾ (ಬಿ) ಮನೆ ಹಾಗೂ ಜೇವರ್ಗಿಯ ಅವರ ಕಚೇರಿ ಮೇಲೆ ಕಲಬುರಗಿ ಹಾಗೂ ಯಾದಗಿರಿ ಜಿಲ್ಲೆಯ ಎಸಿಬಿ ಅಧಿಕಾರಿಗಳು ಬೆಳಿಗ್ಗೆ 7ಕ್ಕೆ ಏಕಕಾಲಕ್ಕೆ ದಾಳಿ ಮಾಡಿದ್ದಾರೆ.

ಆದಾಯ ಮೀರಿ ಆಸ್ತಿಗಳಿಕೆಯ ಬಗ್ಗೆ ದೂರು ಬಂದ ಹಿನ್ನೆಲೆಯಲ್ಲಿ ದಾಳಿ ಮಾಡಲಾಗಿದೆ. ಎಸಿಬಿ ಅಧಿಕಾರಿಗಳು ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ.

ಸರ್ಕಾರದ ಸೌಲಭ್ಯಗಳುˌ ಸಿ.ಸಿ. ರಸ್ತೆ ಸೇರಿದಂತೆ ಹಲವು ಸೌಲಭ್ಯಗಳು ತಮ್ಮ ಮನೆ, ತೋಟಗಳಿಗೆ ಮಾಡಿಸಿಕೊಂಡಿದ್ದಲ್ಲದೆ, ಪರಿಶಿಷ್ಟ ಜಾತಿ, ಪಂಗಡಗಳಿಗೆ ಮೀಸಲಾದ ಹಣವನ್ನ ಇತರೆ ಕಡೆಗಳಲ್ಲಿ ಕಾಮಗಾರಿ ಮಾಡಿಸಿ ಅಪಾರ ಪ್ರಮಾಣದ ಹಣ ಮಾಡಿರುವ ಆರೋಪವು ಇವರ ಮೇಲಿದೆ.

ADVERTISEMENT

ಕಲಬುರಗಿಯ ಮಹಾತ್ಮ ಗಾಂಧಿ ರಸ್ತೆಯಲ್ಲಿರುವ ಗುಬ್ಬಿ ಕಾಲೊನಿಯಲ್ಲಿರುವ ಮನೆಗೆ ನಾಲ್ಕು ಕಾರುಗಳಲ್ಲಿ ಬಂದಿರುವ ಕಲಬುರಗಿ ಎಸಿಬಿ ಅಧಿಕಾರಿಗಳ ತಂಡ ಪರಿಶೀಲನೆಯಲ್ಲಿ ತೊಡಗಿದೆ.

ಯಡ್ರಾಮಿ ತಾಲ್ಲೂಕಿನ ಹಂಗರಗಾದಲ್ಲಿ ಶಾಂತಗೌಡ ಅವರ ತೋಟದ ಮನೆ ಇದ್ದು, ಅಲ್ಲಿಯೂ ಪರಿಶೀಲನೆ ನಡೆದಿದೆ.

ಕಲಬುರಗಿಯ ಗುಬ್ಬಿ ಕಾಲೊನಿಯ ಮನೆಯಲ್ಲಿ ದಾಖಲೆ ತಪಾಸಣೆ ನಡೆಸುತ್ತಿರುವ ಎಸಿಬಿ ಅಧಿಕಾರಿಗಳು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.