
ಪ್ರಜಾವಾಣಿ ವಾರ್ತೆ
ಅಫಜಲಪುರ (ಕಲಬುರಗಿ ಜಿಲ್ಲೆ): ಶಿವರಾತ್ರಿ ಅಮಾವಾಸ್ಯೆ ಹಾಗೂ ಶಿವಯೋಗಿ ಹಬ್ಬದ ಹಿನ್ನೆಲೆಯಲ್ಲಿ ಘತ್ತರಗಿಯ ಭಾಗ್ಯವಂತಿ ದೇವಿ ದೇವಸ್ಥಾನಕ್ಕೆ ತೆರಳಲು ಅಫಜಲಪುರ ಬಸ್ ನಿಲ್ದಾಣದಲ್ಲಿ ಸಾಕಷ್ಟು ಬಸ್ ಗಳು ಇಲ್ಲದೇ ಪ್ರಯಾಣಿಕರು ಹಾಗೂ ಭಕ್ತರು ಪರದಾಡಿದರು.
ಆಗಾಗ ಬಸ್ ಏರಲು ನಾ ಮುಂದೆ ತಾ ಮುಂದೆ ಎನ್ನುತ್ತ ಮುಗಿಬಿದ್ದ ನೋಟ ಮಂಗಳವಾರ ಕಂಡು ಬಂತು.
ಬಸ್‌ಗಳ ಕೊರತೆಯಿಂದ ಭಕ್ತರು, ಮಹಿಳೆಯರು ಹಾಗೂ ವೃದ್ಧರು ತೀವ್ರ ತೊಂದರೆ ಅನುಭವಿಸಿದ್ದು, ಹೆಚ್ಚುವರಿ ಬಸ್ ವ್ಯವಸ್ಥೆ ಕಲ್ಪಿಸುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.