ADVERTISEMENT

ಕಲಬುರಗಿ: ಹೊಸ ಸಿಟಿ ಬಸ್ ಸಂಚಾರ ಆರಂಭ

​ಪ್ರಜಾವಾಣಿ ವಾರ್ತೆ
Published 2 ಸೆಪ್ಟೆಂಬರ್ 2023, 6:45 IST
Last Updated 2 ಸೆಪ್ಟೆಂಬರ್ 2023, 6:45 IST
ಕಲಬುರಗಿ ನಗರದ ಆಳಂದ ರಸ್ತೆಯಲ್ಲಿರುವ ಕೆ.ಎಚ್.ಬಿ ಗ್ರೀನ್ ಪಾರ್ಕ್ ಬಡಾವಣೆಗೆ ಶುಕ್ರವಾರದಿಂದ ಹೊಸ ಸಿಟಿ ಬಸ್ ಸಂಚಾರಕ್ಕೆ ಡಿ.ಟಿ.ಒ ಈಶ್ವರ ಹೊಸಮನಿ ಹಾಗೂ ಬಡಾವಣೆ ಅಧ್ಯಕ್ಷ ಸಂಜೀವಕುಮಾರ ಶೆಟ್ಟಿ ಚಾಲನೆ ನೀಡಿದರು
ಕಲಬುರಗಿ ನಗರದ ಆಳಂದ ರಸ್ತೆಯಲ್ಲಿರುವ ಕೆ.ಎಚ್.ಬಿ ಗ್ರೀನ್ ಪಾರ್ಕ್ ಬಡಾವಣೆಗೆ ಶುಕ್ರವಾರದಿಂದ ಹೊಸ ಸಿಟಿ ಬಸ್ ಸಂಚಾರಕ್ಕೆ ಡಿ.ಟಿ.ಒ ಈಶ್ವರ ಹೊಸಮನಿ ಹಾಗೂ ಬಡಾವಣೆ ಅಧ್ಯಕ್ಷ ಸಂಜೀವಕುಮಾರ ಶೆಟ್ಟಿ ಚಾಲನೆ ನೀಡಿದರು   

ಕಲಬುರಗಿ: ನಗರದ ಆಳಂದ ರಸ್ತೆಯಲ್ಲಿರುವ ಕೆ.ಎಚ್.ಬಿ ಗ್ರೀನ್ ಪಾರ್ಕ್ ಬಡಾವಣೆಗೆ ಶುಕ್ರವಾರದಿಂದ ಹೊಸ ಸಿಟಿ ಬಸ್ ಸಂಚಾರಕ್ಕೆ ಡಿ.ಟಿ.ಒ ಈಶ್ವರ ಹೊಸಮನಿ ಹಾಗೂ ಬಡಾವಣೆ ಅಧ್ಯಕ್ಷ ಸಂಜೀವಕುಮಾರ ಶೆಟ್ಟಿ ಚಾಲನೆ ನೀಡಿದರು. ಬಸ್ ಚಾಲಕ ಅಂಬಾದಾಸ್ ಹಾಗೂ ನಿರ್ವಾಹಕ ಸೈಯದ್ ಹುಸೇನಿ ಅವರನ್ನು ಬಡಾವಣೆ ವತಿಯಿಂದ ಸನ್ಮಾನಿಸಲಾಯಿತು.

ಬಡಾವಣೆ ಅಧ್ಯಕ್ಷ ಸಂಜೀವಕುಮಾರ ಶೆಟ್ಟಿ ಮಾತನಾಡಿ, ಸಿಟಿ ಬಸ್ ಸಂಚಾರ ಸೌಲಭ್ಯ ಒದಗಿಸಿಕೊಟ್ಟಂತ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಎಂ.ರಾಚಪ್ಪ ಅವರಿಗೆ ವಿಶೇಷ ಧನ್ಯವಾದ ಸಲ್ಲಿಸಿದರು.‌ ಸಿಟಿ ಬಸ್ ಕೇಂದ್ರ ಬಸ್ ನಿಲ್ದಾಣದಿಂದ, ಕೆ.ಎಚ್.ಬಿ. ಗ್ರೀನ್ ಪಾರ್ಕ್‌, ರುಕ್ಮುದ್ದೀನ್ ತೋಲಾ, ಸೂಪರ್ ಮಾರ್ಕೆಟ್ ಮಾರ್ಗವಾಗಿ ದಿನನಿತ್ಯ ಸಂಚರಿಸುತ್ತದೆ. ಬಡಾವಣೆ ಎಲ್ಲ ನಿವಾಸಿಗಳು ಸೌಲಭ್ಯದ ಸದುಪಯೋಗ ಪಡೆದುಕೊಳ್ಳಬೇಕು ಎಂದರು.

ಎ.ಟಿ.ಐ ಅಣ್ಣಾರಾವ ನಾಯಕ, ದೇವರಾಜ, ಚಾರ್ಜ್‌ಮ್ಯಾನ್‌ ನಾಗೇಂದ್ರಪ್ಪ, ಕ್ಷೇಮಾಭಿವೃದ್ಧಿ ಸಂಘದ ಪಧಾದಿಕಾರಿಗಳು ಹಾಗೂ ಬಡಾವಣೆ ಎಲ್ಲ ನಿವಾಸಿಗಳು ಭಾಗವಹಿಸಿದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.