ಪ್ರಾತಿನಿಧಿಕ ಚಿತ್ರ
ಕಲಬುರಗಿ: ‘ತಾಲ್ಲೂಕಿನ ಫಿರೋಜಾಬಾದ್ ಗ್ರಾಮದಲ್ಲಿ ಈಗಾಗಲೇ ಹಿಂದಿನಿಂದಲೂ ಮನೆ ಮನೆಗೆ ನೀರು ಸರಬರಾಜು ಇರುತ್ತದೆ. ಇದೀಗ ಜಲ ಜೀವನ್ ಮಿಷನ್ ಯೋಜನೆ ಹೆಸರಿನಲ್ಲಿ ಗುತ್ತಿಗೆದಾರರು ಸಿ.ಸಿ.ರಸ್ತೆ ಒಡೆದು ಹಾಳು ಮಾಡುತ್ತಿದ್ದಾರೆ’ ಎಂದು ಗ್ರಾಮ ಪಂಚಾಯಿತಿ ಸದಸ್ಯ ಅಬ್ದುಲ್ ಲತೀಫ್ ಎಸ್.ಎಂ.ಜಾಗರೀದಾರ ಹೇಳಿದರು.
ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಗ್ರಾಮದಲ್ಲಿ ಮೊದಲಿನಿಂದಲೂ ನೀರು ಸರಬರಾಜು ಇದೆ. ಇದೀಗ ಹಳೆ ನೀರಿನ ಪೈಪ್ ಪಕ್ಕದಲ್ಲೇ ನೆಲ ಕೆದರಿ ಹೊಸ ಪೈಪ್‌ಲೈನ್ ಮಾಡಲು ಸಿದ್ಧತೆ ಮಾಡಿಕೊಂಡಿದ್ದಾರೆ. ಈ ಹೊಸ ಪೈಪ್‌ಲೈನ್‌ಗೆ ಎಲ್ಲಿಂದ ನೀರು ಸಂಪರ್ಕ ಕೊಡುತ್ತಾರೆ ಎಂಬುದನ್ನು ತಿಳಿಸಿಲ್ಲ. ಜೆಜೆಎಂ ಯೋಜನೆಯಡಿ ಸುಮಾರು 22 ಗ್ರಾಮಗಳಿಗೆ ಭೀಮಾ ನದಿಯಿಂದ ನೀರು ಫಿಲ್ಟರ್ ಮಾಡಿ ಪೂರೈಸಬೇಕು. ಆದರೆ ಗುತ್ತಿಗೆದಾರರು ಅದ್ಯಾವುದನ್ನೂ ಸಿದ್ಧತೆ ಮಾಡಿಕೊಂಡಿಲ್ಲ. ನೀರಿನ ಹಳೆಯ ಮೂಲಗಳಿಗೇ ಪೈಪ್ ಜೋಡಿಸುವುದಾದರೇ ನಮ್ಮ ಗ್ರಾಮಕ್ಕೆ ಈ ಯೋಜನೆ ಬೇಡ. ಅಧಿಕಾರಿಗಳು ಈ ಬಗ್ಗೆ ಗಮನಹರಿಸಬೇಕು’ ಎಂದು ಅವರು ಕೋರಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.