ADVERTISEMENT

ಕಲಬುರಗಿ: ಜಿಲ್ಲೆಯ ಹಲವೆಡೆ ಬಿರುಸಿನ ಮಳೆ

​ಪ್ರಜಾವಾಣಿ ವಾರ್ತೆ
Published 8 ಸೆಪ್ಟೆಂಬರ್ 2022, 11:37 IST
Last Updated 8 ಸೆಪ್ಟೆಂಬರ್ 2022, 11:37 IST
ಕಲಬುರಗಿ ಜಿಲ್ಲೆಯ ಕಾಳಗಿ ತಾಲ್ಲೂಕಿನ ಕೋಡ್ಲಿ ಗ್ರಾಮದಲ್ಲಿ ಮಳೆ ನೀರು ರಭಸದಿಂದ ಹರಿಯಿತು
ಕಲಬುರಗಿ ಜಿಲ್ಲೆಯ ಕಾಳಗಿ ತಾಲ್ಲೂಕಿನ ಕೋಡ್ಲಿ ಗ್ರಾಮದಲ್ಲಿ ಮಳೆ ನೀರು ರಭಸದಿಂದ ಹರಿಯಿತು   

ಕಲಬುರಗಿ: ನಗರ ಸೇರಿದಂತೆ ಜಿಲ್ಲೆಯ ಕಾಳಗಿ ತಾಲ್ಲೂಕಿನ ಹಲವೆಡೆ ಬಿರುಸಿನ ಮಳೆಯಾಗಿದೆ.

ಮಧ್ಯಾಹ್ನ 2ಕ್ಕೆ ಶುರುವಾದ ಜಿಟಿ ಜಿಟಿ ಮಳೆ ಕ್ರಮೇಣ ಬಿರುಸು ಪಡೆದುಕೊಂಡಿತು. ಇದರಿಂದಾಗಿ ಕಲಬುರಗಿ ‌ರಸ್ತೆಗಳಲ್ಲಿ ನೀರು ಹರಿಯುತ್ತಿದೆ.

ಕಾಳಗಿ ತಾಲ್ಲೂಕಿನ ಕೋಡ್ಲಿ ಗ್ರಾಮದಲ್ಲಿ ಸುರಿದ ಮಳೆಗೆ ಅಗಸಿಯಲ್ಲಿ ಸಿಕ್ಕಾಪಟ್ಟೆ ನೀರು ಹರಿದು ಜನರ ಓಡಾಟಕ್ಕೆ ಅರ್ಧ ತಾಸು ತೊಂದರೆಯಾಯಿತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.